T-20 ವಿಶ್ವಕಪ್ ಭಾರತದ ಮಡಿಲಿಗೆ- ಬಾಲರ್‌ಗಳ “ಮಸ್ತಾಟಾ”….
1 min readಬ್ರೀಜ್‌ಟೌನ್: ಭಾರತವೂ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನ ಸೋಲಿಸಿ ರೋಹಿತ ಬಳಗವೂ ವಿಶ್ವಕಪ್‌ನ್ನ ಗೆದ್ದು ಬೀಗಿದೆ.
20 ಓವರ್‌ನಲ್ಲಿ ಭಾರತವೂ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತ್ತು. ಇದರ ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ಸೋಲನ್ನ ಅನುಭವಿಸಿತು.
ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 169 ರನ್ ಗಳಿಸಿ, ಸೋಲನ್ನನುಭವಿಸಿತು. ಮೊದಲ ಬ್ಯಾಟ್ ಮಾಡಿದ ಭಾರತವೂ ಸಂಘಟಿತವಾಗಿ ಆಟವಾಡಿತ್ತು. ಈ ಬಾರಿ ಹಲವು ಬಾರಿ ವಿಫಲರಾಗಿದ್ದ ವಿರಾಟ್ ಕೊಹ್ಲಿ 75 ರನ್ ಗಳಿಸಿ ಗೆಲುವಿಗೆ ಮುನ್ನುಡಿ ಬರೆದರು.
ಹದಿಮೂರು ವರ್ಷದ ನಂತರ ವಿಶ್ವಕಪ್ ಭಾರತದ ಮಡಿಲಿಗೆ ಬಂದಿದೆ.
ಕಣ್ಣೀರಾಕಿದ ಆಟಗಾರರು…
ವಿಶ್ವಕಪ್ ಗೆಲುವಿನ ಕೇಕೆ ಹಾಕಿದ ಬಹುತೇಕ ಆಟಗಾರರು ಸಂತಸದಲ್ಲಿ ಕಣ್ಣೀರಾಕಿದರು. ಅಷ್ಟೇ ಅಲ್ಲ, ದೇವರನ್ನ ಸ್ಮರಿಸಿದರು. ಕನ್ನಡಿಗ ರಾಹುಲ ದ್ರಾವಿಡ್ ಸಧ್ಯ ತಂಡದ ಕೋಚ್ ಆಗಿರುವುದು ಕರುನಾಡಿಗೂ ಹೆಮ್ಮೆಯ ವಿಷಯವಾಗಿದೆ.
ನನ್ನ ಕೊನೆಯ ವರ್ಲ್ಡ್ ಕಪ್ ಎಂದ ಕೊಹ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ 75 ರನ್ ಗಳಿಸಿದ ವಿರಾಟ್ ಕೊಹ್ಲಿ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಿದ ನಂತರ, ಇದು ನನ್ನ ಕೊನೆಯ T-20 ಪಂದ್ಯ ಎಂದರು. ಹೊಸ ಪೀಳಿಗೆಗೆ ಅವಕಾಶ ಒದಗಿ ಬರಲಿ ಎಂದರು.