ಹುಬ್ಬಳ್ಳಿ-ಧಾರವಾಡದಲ್ಲಿ ಲಾಕ್ ಡೌನ್ ಕ್ರಿಕೆಟ್: 46 ಯುವಕರ ಮೇಲೆ ಕಾನೂನು ಕ್ರಮ…!
1 min readಹುಬ್ಬಳ್ಳಿ/ಧಾರವಾಡ: ಲಾಕ್ ಡೌನ್ ನಿಯಮಾವಳಿಗಳ ಮೀರಿ ಕ್ರಿಕೆಟ್ ಆಡುತ್ತಿದ್ದ ಐದು ಪ್ರದೇಶದಲ್ಲಿ ದಾಳಿ ಮಾಡಿರುವ ಪೊಲೀಸರು ಬರೋಬ್ಬರಿ 46 ಯುವಕರ ಮೇಲೆ ಪ್ರಕರಣವನ್ನ ದಾಖಲು ಮಾಡಿದ್ದಾರೆ.
ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ 10 ಯುವಕರ ಗುಂಪಿನ ಮೇಲೆ ಪ್ರಕರಣ ದಾಖಲಾಗಿದ್ದರೇ, ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 9 ಜನರ ತಂಡದ ಮೇಲೆ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲ, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಐದು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಕೇಶ್ವಾಪುರದಲ್ಲಿ ಆರು ಯುವಕರ ಮೇಲೆ ಮೊಕದ್ದಮೆ ದಾಖಲಾಗಿದೆ.
ಧಾರವಾಡದ ಉಪನಗರ ಠಾಣೆ ವ್ಯಾಪ್ತಿಯ ಮುರುಘಾಮಠದ ಹತ್ತಿರ ಕ್ರಿಕೆಟ್ ಆಡುತ್ತಿದ್ದ ಹದಿನಾರು ಜನರ ಮೇಲೆ ಪ್ರಕರಣವನ್ನ ದಾಖಲು ಮಾಡಲಾಗಿದೆ. ಕೊರೋನಾ ಪ್ರಕರಣಗಳು ಕಡಿಮೆಯಾಗಲೆಂದು ಲಾಕ್ ಡೌನ್ ವಿಧಿಸಿದ್ದರೂ ಕೂಡಾ, ಯುವಕರು ಒಟ್ಟಾಗಿ ಕ್ರಿಕೆಟ್ ಆಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮವನ್ನ ಜರುಗಿಸಿದ್ದಾರೆ.