ಕರ್ತವ್ಯಲೋಪ ಇನ್ಸಪೆಕ್ಟರ್ ಸಸ್ಪೆಂಡ್ ಮಾಡಿದ “ಐಜಿಪಿ”..
1 min readಕರ್ತವ್ಯಲೋಪ ವೃತ್ತ ನಿರೀಕ್ಷಕ ಅಮಾನತ್ತು
ಆದೇಶ ಹೊರಡಿಸಿದ ಐಜಿಪಿ
ಕೋಲಾರ: ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಠಾಣೆ ಸಿಪಿಐ ಸಸ್ಪೆಂಡ್ ಮಾಡಲಾಗಿದೆ. ಬೋಡಗುರ್ಕಿಯಲ್ಲಿ ಮರ್ಯಾದ ಹತ್ಯೆ ನಡೆದಿತ್ತು.
ಕಾಮಸಮುದ್ರ ವೃತ್ತ ನಿರೀಕ್ಷಕ ಪಿ.ಜೆ.ಮಧುಕರ್ ಕರ್ತವ್ಯಲೋಪ ವೆಸಗಿದ್ದ ಆರೋಪ ಎದುರಿಸುತ್ತಿದ್ದರು. ಈ ಹಿನ್ನಲೆ ಕೇಂದ್ರ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದದಲ್ಲಿ ಗಂಗರಾಜು ಪ್ರೀತಿಸಿದ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಎಂಬಾತ ಮಗಳು ಕೀರ್ತಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಆದ್ರೆ ಕಾಮಸಮುದ್ರ ಸಿಪಿಐ ಮಧುಕರ್ ತನಿಖೆ ಕೈಗೊಳ್ಳದೆ ಶವವನ್ನ ಕೆಜಿಎಫ್ ಶವಾಗಾರಕ್ಕೆ ಸ್ಥಳಾಂತರ ಮಾಡಿದ್ದರು. ಅಸಹಜ ಸಾವು ಎಂದು ಬಿಂಬಿಸಲು ಮುಂದಾಗಿದ್ರು. ಮಹಿಳಾ ಅಧಿಕಾರಿಯೇ ಇದನ್ನ ತನಿಖೆ ನಡೆಸಬೇಕು, ನಾನು ಶವ ತನಿಖೆ ನಡೆಸಲು ಬರುವುದಿಲ್ಲ, ಇದೊಂದು ಅಸಹಜ ಸಾವು ಎಂದು ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರ ಬಳಿ ಹೇಳಿದ್ರು. ಹೀಗಾಗಿ ಸಸ್ಪೆಂಡ್ ಮಾಡಲಾಗಿದೆ.