ಇನ್ಸಪೆಕ್ಟರ್, ಪಿಎಸ್‌ಐ, ‘SB’ ಪಿಸಿ ಅಮಾನತ್ತು: ಎಸ್ಪಿ ಆದೇಶ..

ಕರ್ತವ್ಯ ಲೋಪ
ಮರಳು ದಂಧೆಯ ಕರಾಳ ರೂಪ
ಕಠಿಣ ಕ್ರಮ
ಕಲಬುರಗಿ: ಮರಳು ದಂಧೆಕೋರರಿಂದ ಹೆಡ್ ಕಾನಸ್ಟೇಬಲ್ ಹತ್ಯೆ ಪ್ರಕರಣ ಸಂಬಂದಪಟ್ಟಂತೆ ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ.
ಜೇವರ್ಗಿ ಠಾಣೆ ಸಿಪಿಐ ಭೀಮನಗೌಡ್ ಬಿರಾದರ್, ನೆಲೋಗಿ ಠಾಣೆಯ ಪಿಎಸ್‌ಐ ಗೌತಮ್ ಮತ್ತು ಎಸ್‌ಬಿ ಕಾನಸ್ಟೇಬಲ್ ರಾಜಶೇಖರ ಅವರುಗಳನ್ನು ಕಲಬುರಗಿ ಎಸ್ಪಿ ಇಶಾ ಪಂತ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಮರಳು ಮಾಫಿಯಾದವರು ಕಲಬುರ್ಗಿಯಲ್ಲಿ ಪೊಲೀಸ್ ಮುಖ್ಯ ಪೇದೆಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆಗೈದಿರುವುದನ್ನು ಖಂಡಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಶನಿವಾರ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ್ದರು.
ಜೇವರ್ಗಿ ತಾಲೂಕಿನ ಹುಲ್ಲೂರು ಗ್ರಾಮದ ಬಳಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ನಿಲೋಗಿ ಠಾಣೆ ಮುಖ್ಯ ಪೇದೆ ಮಯೂರ್ ಚೌವ್ಹಾಣ ಮೇಲೆ ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹತ್ತಿಸಿ ಬಲಿ ಪಡೆಯಲಾಗಿತ್ತು.
ವಿಷಯವನ್ನ ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.