ಇನ್ಸ್ ಪೆಕ್ಟರಗಳ ವರ್ಗಾವಣೆ: ಚೆನ್ನಣ್ಣನವರ ಹೆಸ್ಕಾಂ- ಗುಳ್ಳಾರಿ ಕೊಪ್ಪಳ- ಹಿರೇಗೌಡರ ಕೊಪ್ಪಳ ಗ್ರಾಮೀಣ- ದೌಲತ್ ಸುರಪುರಕ್ಕೆ ವರ್ಗ
ಬೆಂಗಳೂರು: ರಾಜ್ಯ ಸರಕಾರ 84 ವೃತ್ತ ನಿರೀಕ್ಷಕರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಧಾರವಾಡ ಸಂಚಾರಿ ಠಾಣೆಯಲ್ಲಿದ್ದ ಮುರುಗೇಶ ಚೆನ್ನಣ್ಣನವರ ಹುಬ್ಬಳ್ಳಿ ಹೆಸ್ಕಾಂಗೆ ವರ್ಗಾವಣೆಗೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಸೇವೆ ಸಲ್ಲಿಸಿದ್ದ ಹಳೇಹುಬ್ಬಳ್ಳಿ ಠಾಣೆ ಇನ್ಸ್ ಪೆಕ್ಟರಾಗಿದ್ದ ಮಾರುತಿ ಗುಳ್ಳಾರಿಯವರನ್ನ ಕೊಪ್ಪಳ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಧಾರವಾಡ ಉಪನಗರ ಠಾಣೆಯಲ್ಲಿ ಪಿಎಸೈ ಆಗಿದ್ದ ವಿಶ್ವನಾಥ ಹಿರೇಗೌಡರರನ್ನ ಕೊಪ್ಪಳ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ.
ಗದಗ ಶಹರ ಠಾಣೆಯಲ್ಲೂ ಸೇವೆ ಸಲ್ಲಿಸಿದ್ದ ದೌಲತ ಎನ್.ಕೆ. ಅವರನ್ನ ಸುರುಪುರ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.
84 ಇನ್ಸ್ ಪೆಕ್ಟರಗಳ ಪೂರ್ಣ ಮಾಹಿತಿ ಇಲ್ಲಿದೆ ನೋಡಿ..