ತಹಶೀಲ್ದಾರ, ಸಿಪಿಐಗೆ ಮೂರು ವರ್ಷ ಜೈಲು…!
1 min readರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ತಡಕಲ್ ಗ್ರಾಮದ ರೈತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಮಾನ್ವಿ ಸಿಪಿಐ ಕಾಶಿನಾಥ ಅಡಿ ಹಾಗೂ ಅಂದಿನ ತಹಶೀಲ್ದಾರ ರಾಮಾಚಾರಿ ಅವರಿಗೆ ರಾಯಚೂರು ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಹಾಗೂ 35 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶ ಅವಿನಾಶ ಘಾಳಿ ತೀರ್ಪು ನೀಡಿದ್ದಾರೆ.
ಆರ್ ಡಿಸಿಸಿ ಬ್ಯಾಂಕಿನ ಅಧಿಕಾರಿಗಳೊಂದಿಗೆ ಸಾಲ ವಸೂಲಾತಿಗಾಗಿ ಆಗಮಿಸಿದ್ದ ಸಿಪಿಐ ಹಾಗೂ ತಹಶೀಲ್ದಾರ ರೈತರ ದಿನಬಳಕೆಯ ವಸ್ತುಗಳ ಜಪ್ತಿಗೆ ಮುಂದಾಗಿದ್ದರು. ಹೀಗಾಗಿ ಆ ಸಮಯದಲ್ಲಿ ರೈತ ಸಂಘಟನೆಗಳಿಂದ ಪ್ರತಿಭಟನೆಗಳು ನಡೆದಿದ್ದರು.
ಈ ವೇಳೆಯಲ್ಲಿ ಶಂಕರಗೌಡ ಹಾಗೂ ಬಸನಗೌಡ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ರೈತರಿಬ್ಬರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದರು. ಹಾಗಾಗಿಯೇ, ರೈತರು ಅಧಿಕಾರಿಗಳ ಮೇಲೆ ಪ್ರಕರಣವನ್ನ ದಾಖಲು ಮಾಡಿದ್ದರು.
ಸುದೀರ್ಘವಾಗಿ ನಡೆದ ವಿಚಾರಣೆಯಲ್ಲಿ ಸಿಪಿಐ ಕಾಶಿನಾಥ ಅಡಿ ಹಾಗೂ ತಹಶೀಲ್ದಾರ ರಾಮಾಚಾರಿ ತಪ್ಪು ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದ ಜೈಲು ಶಿಕ್ಷೆಯನ್ನ ನೀಡಿದೆ.