ಆತಂಕದ ಸುದ್ದಿ: ಕೋವಿಶಿಲ್ಡ್ ಸೈಡ್ ಎಫೆಕ್ಟ್ ನಿಜವೆಂದು ಒಪ್ಪಿಕೊಂಡ ಕಂಪನಿ…!!!

ಸಾವು ನೋವು ಸಂಭವಿಸಿದ ಹಿನ್ನೆಲೆ
ನ್ಯಾಯಾಲಯದ ಮೊರೆ ಹೋಗಿರುವ ಜನ
ಲಂಡನ್: ಕೋವಿಡ್ – 19 ವೈರಸ್ ಪ್ರತಿರೋಧಕ ಲಸಿಕೆ ಕೋವಿಶೀಲ್ಡ್ ಅಪರೂಪದ ಪ್ರಕರಣಗಳಲ್ಲಿ ಅಡ್ಡ ಪರಿಣಾಮ ಬೀರಬಲ್ಲದು ಎಂದು ಲಸಿಕೆ ತಯಾರಿಕಾ ಕಂಪನಿ ಆಕ್ಸ್‌ಫರ್ಡ್- ಆಸ್ಟ್ರಾ ಜೆನಿಕಾ ಬ್ರಿಟನ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಸ್ಟ್ರಾ ಜೆನಿಕಾ ಕಂಪನಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿತ್ತು. ಲಸಿಕೆ ಪಡೆದ ಹಲವರು ಕಂಪನಿ ವಿರುದ್ಧ ಬ್ರಿಟನ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಸಾವು ಹಾಗೂ ಅಡ್ಡಪರಿಣಾಮದ ಆರೋಪಗಳನ್ನು ಕಂಪನಿ ವಿರುದ್ಧ ಮಾಡಲಾಗಿತ್ತು.
ಈ ಪ್ರಕರಣದ ವಿಚಾರಣೆ ಕಂಪನಿಯು ಕೆಲವು ಅಪರೂಪದ ಪ್ರಕರಣದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವ ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂಬ ಅಡ್ಡಪರಿಣಾಮದ ತೀವ್ರತೆಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿದೆ.
ಆ್ಯಸ್ಟ್ರಾಜೆನಿಕಾ ಕಂಪನಿಯ ವಿರುದ್ಧ ಲಂಡನ್ ಹೈಕೋರ್ಟ್ ನಲ್ಲಿ 51 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಹಲವಾರು ಮಂದಿ ಕಂಪನಿಯಿಂದ ತಮಗೆ ಅಥವಾ ತಮ್ಮ ಸಂಬಂಧಿಕರಿಗೆ ಆಗಿರುವ ಪ್ರಾಣ ಹಾನಿ, ಅಂಗಾಂಗ ಹಾನಿ ಅಥವಾ ಆರೋಗ್ಯ ಹಾನಿಗೆ ಪ್ರತಿಯಾಗಿ ಪರಿಹಾರವನ್ನು ಆಕ್ಸ್ ಫರ್ಡ್ ಆ್ಯಸ್ಟ್ರಾಜೆನಿಕಾ ಕಂಪನಿಯಿಂದ ಕೊಡಿಸಬೇಕೆಂದು ಕೋರಿದ್ದಾರೆ. ಆ ದಾವೆಗಳ ಒಟ್ಟಾರೆ ಪರಿಹಾರ ಮೊತ್ತ 100 ಮಿಲಿಯನ್ ಪೌಂಡ್ಸ್ (ಅಂದಾಜು 1,054 ಕೋಟಿ ರೂ.) ಆಗಿದೆ ಎಂದು ಹೇಳಲಾಗಿದೆ.