ಧಾರವಾಡದಲ್ಲಿ 62 ಕೊರೋನಾ ಪಾಸಿಟಿವ್- ರಾಜ್ಯದಲ್ಲಿ ಕೊರೋನಾದಿಂದ ಇಂದು 26 ಸೋಂಕಿತರ ಸಾವು…!
1 min readಬೆಂಗಳೂರು: ಕೊರೋನಾ ಸೋಂಕು ಹರಡುವಿಕೆಯು ದಿನೇ ದಿನೇ ಹೆಚ್ಚಾಗುತ್ತಿದೆ ಎಂಬ ಮಾಹಿತಿ ಸಿಗುತ್ತಿರುವ ನಡುವೆಯೇ ಇಂದು ರಾಜ್ಯದಲ್ಲಿ ದಾಖಲೆಯ 4225 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 26 ಜನ ಸೋಂಕಿತರು ಪ್ರಾಣವನ್ನ ಕಳೆದುಕೊಂಡಿದ್ದಾರೆ.
ಆರೋಗ್ಯ ಇಲಾಖೆಯ ಇಂದಿನ ವರದಿಯಲ್ಲಿ ಧಾರವಾಡದಲ್ಲಿ 62 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿಯೂ ಮತ್ತಷ್ಟು ಆತಂಕ ಮನೆ ಮಾಡುತ್ತಿದೆ. ಜನರು ಜಾಗೃತರಾಗಬೇಕಾದ ಅವಶ್ಯಕತೆಯಿದೆ.
ಒಟ್ಟು 4225 ಪಾಸಿಟಿವ್ ಪ್ರಕರಣಗಳ ಪೈಕಿ ಬೆಂಗಳೂರು ಶಹರದಲ್ಲಿ 2928 ಪ್ರಕರಣಗಳು ಪತ್ತೆಯಾಗಿದ್ದು, ಗ್ರಾಮೀಣ ಭಾಗದಲ್ಲಿ 80 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬೀದರನಲ್ಲಿ 159, ಕಲಬುರಗಿಯಲ್ಲಿ 137, ಮೈಸೂರಲ್ಲಿ 142, ತುಮಕೂರಲ್ಲಿ 138 ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯಾಧ್ಯಂತ ಕಟ್ಟುನಿಟ್ಟಿನ ಕೊರೋನಾ ನಿಯಮ ಉಲ್ಲಂಘನೆ ಮಾಡಬೇಕೆಂದು ಸಾರ್ವಜನಿಕರಿಗೆ ತಿಳುವಳಿಕೆ ನೀಡುತ್ತ ಬಂದರೂ, ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಹೀಗಾಗಿಯೇ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ.