ಸರಕಾರ ನಿಯಮ ಉಲ್ಲಂಘನೆ ಮಾಡಿದ ಕರಾಪ್ರಾಶಾ ಶಿಕ್ಷಕರು…
1 min readಹುಬ್ಬಳ್ಳಿ: ನಗರದ ಆರ್. ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ ಶಹರ ಘಟಕದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ 2020 ಕಾರ್ಯಾಗಾರದಲ್ಲಿ ಕೊರೋನಾ ನಿಯಮಗಳನ್ನ ಗಾಳಿಗೆ ತೂರಿ ಕಾರ್ಯಕ್ರಮ ನಡೆಸಲಾಗಿದೆ.
ಶಿಕ್ಷಣ ನೀಡುವ ಜೊತೆಗೆ ಸರಕಾರದ ಆದೇಶಗಳನ್ನ ಪಾಲನೆ ಮಾಡಬೇಕೆಂಬ ಸಣ್ಣ ಪರಿಜ್ಞಾನವೂ ಇಲ್ಲದೇ ಕಾರ್ಯಕ್ರಮದಲ್ಲಿ ನೂರಾರೂ ಶಿಕ್ಷಕರು ಭಾಗವಹಿಸಿದ್ದು, ಬಹುತೇಕರು ಮಾಸ್ಕ್ ಹಾಕಿಕೊಳ್ಳದೇ ಸಮಾರಂಭದಲ್ಲಿದ್ದಾರೆ.
ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಸೇರಿದಂತೆ ನೂರಾರೂ ಪ್ರಮುಖರು, ಕೊರೋನಾ ಮಹಾಮಾರಿಯ ಎರಡನೇಯ ಅಲೆಯನ್ನ ನೋಡಿಯೂ ಹೀಗೆ ನಡೆದುಕೊಂಡಿದ್ದು, ಎಲ್ಲರಿಗೂ ಮುಜುಗರವುಂಟು ಮಾಡಿದೆ.
ಪ್ರತಿದಿನವೂ ಪಾಠ ಮಾಡುವವರೇ ದಾರಿ ತಪ್ಪಿದರೇ, ನಾಳೆ ಪಾಠ ಮಾಡುವಾಗ, ಮಕ್ಕಳಿಗೆ ನೀವೂ ಮಾಸ್ಕ್ ಹಾಕಿಕೊಂಡು ಬರಬೇಕು. ಸಾಮಾಜಿಕ ಅಂತರ್ ಕಾಯ್ದುಕೊಳ್ಳಬೇಕು ಎಂದು ಹೇಗೆ ಹೇಳುತ್ತೀರಿ ಶಿಕ್ಷಕರೇ. ನಿಮಗೆ ನಿಮ್ಮ ಮನಸ್ಸು ಇದಕ್ಕೆ ಒಪ್ಪಿಕೊಳ್ಳತ್ತಾ.. ಗುರು ಬ್ರಹ್ಮ.. ಗುರು ವಿಷ್ಣು.. ಗುರು ಮಾಸ್ಕ್…. ಎಲ್ಲೀರಿಪಾ…