ಕೋವಿಡ್ ಆಸ್ಪತ್ರೆಯಾಗಿದ್ದ ಹೊಟೇಲ್ ಗೆ ಬೆಂಕಿ: 11 ಜನರ ದುರ್ಮರಣ- ಇನ್ನೂ ಉರಿಯುತ್ತಿದೆ.. : ಎಕ್ಸಕ್ಲೂಸಿವ್ ವೀಡಿಯೋ
ಆಂದ್ರಪ್ರದೇಶ: ಐಶಾರಾಮಿ ಹೊಟೇಲ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 11 ಜನರು ಸಾವಿಗೀಡಾದ ಘಟನೆ ವಿಜಯವಾಡಾ ನಗರದಲ್ಲಿ ಸಂಭವಿಸಿದೆ.
ಸ್ವರ್ಣ ಪ್ಯಾಲೇಸ್ ಹೊಟೇಲ್ ನ್ನ ಇತ್ತೀಚೆಗೆ ಕೋವಿಡ್-19 ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿತ್ತು. ಇಲ್ಲಿ ಎಷ್ಟು ಸೋಂಕಿತರನ್ನ ದಾಖಲು ಮಾಡಲಾಗಿತ್ತು ಎಂಬುದರ ಬಗ್ಗೆ ಮಾಹಿತಿ ದೊರೆಯಬೇಕಿದ್ದು, ಈಗಾಗಲೇ ಘಟನೆಯಲ್ಲಿ 11 ಜನರು ಮೃತಪಟ್ಟಿದ್ದಾರೆ.
ಐಶಾರಾಮಿ ವ್ಯವಸ್ಥೆ ಹೊಂದಿರುವ ಕಟ್ಟಡದಲ್ಲಿ ಹೇಗೆ ಬೆಂಕಿ ತಗುಲಿದೆ ಎಂಬುದು ಗೊತ್ತಾಗಿಲ್ಲವಾದರೂ, ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ಮಾಡುತ್ತಿವೆ.
ಹೊಟೇಲ್ ಆಸ್ಪತ್ರೆಯಲ್ಲಿದ್ದ ಸೋಂಕಿತ ರೋಗಿಗಳಿಗೆ ಏನಾಗಿದೆ ಮತ್ತೂ ಅವರು ಸಾರ್ವಜನಿಕವಾಗಿ ಹೊರಗೆ ಬರದಂತೆ ತಡೆಯಲು ಕೂಡಾ ಕಟ್ಟಡದ ಹಿಂಬದಿಯಿಂದ ವ್ಯವಸ್ಥೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.