ಕೊರೋನಾ ಲಸಿಕೆ ಹಾಕಿಸಿಕೊಂಡ 28 ದಿನಗಳ ಬಳಿಕ ಸೋಂಕಿಗೆ ಗುರಿಯಾದ ಮಾಜಿ ಸಿಎಂ…!
1 min readಜಮ್ಮು: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ ಕೊವಿಡ್ -19 ಸೋಂಕಿಗೆ ಗುರಿಯಾಗಿದ್ದಾರೆ. ಈ ಕುರಿತು ಫಾರೂಕ್ ಅಬ್ದುಲ್ಲಾ ಅವರ ಪುತ್ರ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ವಿಶೇಷ ಎಂದರೆ ಫಾರೂಕ್ ಅಬ್ದುಲ್ಲಾ ಅವರು ಕೊರೊನಾ ವ್ಯಾಕ್ಸಿನ್ ಮೊದಲ ಪ್ರಮಾಣ ಹಾಕಿಸಿಕೊಂಡ 28 ದಿನಗಳ ಬಳಿಕ ಸೋಂಕಿಗೆ ಗುರಿಯಾಗಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ ಬರೆದಿರುವ ಒಮರ್ ಅಬ್ದುಲ್ಲಾ ಕಳೆದ ಕೆಲ ದಿನಗಳಿಂದ ಫಾರೂಕ್ ಅವರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಅನಿವಾರ್ಯ ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ.
ಆರ್ಟಿಕಲ್ 370ನ್ನು ತೆಗೆದುಹಾಕುವ ಕುರಿತು ಮಾತನಾಡಿದ್ದ ಅವರು, ಇದರಿಂದ ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಗೌರವವನ್ನು ಕಳೆದುಕೊಂಡಿದ್ದಾರೆ ಮತ್ತು ಇದು ನಮ್ಮ ಗೌರವದ ಮೇಲೆ ನೇರ ದಾಳಿಯಾಗಿದೆ. ನಾವು ನಮ್ಮ ಭೂಮಿಯನ್ನು ಕಳೆದುಕೊಂಡಿದ್ದೇವೆ ಮತ್ತು ನಮ್ಮ ಮಕ್ಕಳು ನೌಕರಿ ಇಲ್ಲದೆ ಉಳಿಯಬೇಕಾಗಿದೆ. ಒಂದು ವೇಳೆ ನಮ್ಮ ರಾಜ್ಯಕ್ಕೆ ಹೊರಗಿನ ಜನರು ಬಂದರೆ, ಸ್ಥಳೀಯ ಯುವಕರಿಗೆ ಹರಿಯಾಣಾ, ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ಗಳಂತಹ ರಾಜ್ಯಗಳಲ್ಲಿ ನೌಕರಿ ಸಿಗಲಿದೆಯೇ? ಎಂದು ಪ್ರಶ್ನಿಸಿದ್ದರು.
ಫಾರೂಕ್ ಅಬ್ದುಲ್ಲಾ ತಮ್ಮ ಫಿಟ್ನೆಸ್ ಕುರಿತು ಕೂಡ ಚರ್ಚೆಯಲ್ಲಿರುತ್ತಾರೆ. ಇತೀಚೆಗಷ್ಟೇ ಅವರು ಮದುವೆ ಸಮಾರಂಭವೊಂದರಲ್ಲಿ ಡಾನ್ಸ್ ಮಾಡಿರುವ ವಿಡಿಯೋ ಭಾರಿ ವೈರಲ್ ಆಗಿತ್ತು. ಅವರ ಈ ವಿಡಿಯೋಗೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಈ ಇಳಿವಯಸ್ಸಿನಲ್ಲಿ ಅವರ ಮಸ್ತಿ ಮೂಡ್ ಗೆ ಜನ ಬೆರಗಾಗಿದ್ದರು.