“ಆರೋಗ್ಯ ಹಸ್ತ ಸಹಾಯವಾಣಿ” ಆರಂಭಿಸಿದ ಕಾಂಗ್ರೆಸ್ ಯುವ ನಾಯಕರು…!
1 min readಧಾರವಾಡ: ಅವಳಿನಗರವೂ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಪರಿಣಾಮ ಕಾಂಗ್ರೆಸ್ ನ ಯುವ ನಾಯಕರುಗಳು ಸಾರ್ವಜನಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ಆರೋಗ್ಯ ಹಸ್ತ ಸಹಾಯವಾಣಿಯನ್ನ ಆರಂಭಿಸಿದ್ದಾರೆ.
ಕೆಪಿಸಿಸಿ ಸಂಯೋಜಕ ರಜತ ಉಳ್ಳಾಗಡ್ಡಿಮಠ ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ನಿರ್ದೇಶಕ ಆನಂದ ಕಲಾಲ ಸಹಾಯವಾಣಿ ಮಾಡುವ ಮೂಲಕ, ಜನರಿಗೆ ಸಹಕಾರ ನೀಡಲು ಮುಂದಾಗಿದ್ದಾರೆ.
ಆನಂದ ಕಲಾಲ ಅವರ ಮನವಿ..
ಕಲಘಟಗಿ ಮತಕ್ಷೇತ್ರದ ಜನತೆಗೆ ಕೋವಿಡ್ ಬಗ್ಗೆ ಸರಿಯಾದ ಮಾಹಿತಿ ಸಿಗಬೇಕೆಂಬ ಮಾಜಿ ಸಚಿವ ಶ್ರೀ ಸಂತೋಷ್ ಲಾಡ್ ಅವರ ಆಶಯದಂತೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ನಿರ್ದೇಶಕ ಆನಂದ ಕಲಾಲ ಅವರ ನೇತೃತ್ವದಲ್ಲಿ ‘ವಿಶೇಷ ಕೋವಿಡ್ ಸಹಾಯವಾಣಿ’ಯೊಂದನ್ನು ಆರಂಭಿಸಲಾಗುತ್ತಿದೆ.
ಈ ಸಹಾಯವಾಣಿಯ ಮೂಲಕ ಕ್ಷೇತ್ರದ ಜನರಿಗೆ ಕೋವಿಡ್ ಬಗ್ಗೆ ಯಾವುದೇ ಅನುಮಾನ, ಮಾಹಿತಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಜ್ಞ ವೈದ್ಯರು ನೇರವಾಗಿ ಸಲಹೆಗಳನ್ನು ನೀಡಲಿದ್ದಾರೆ.
ಕೊರೋನ ಸೋಂಕಿನ ಬಗ್ಗೆ ಅನಗತ್ಯ ಗೊಂದಲಗಳಿಂದ, ಹರಡುತ್ತಿರುವ ಸುಳ್ಳು ಸುದ್ದಿಗಳಿಂದ ಕ್ಷೇತ್ರದ ಜನರು ಆತಂಕಗೊಳ್ಳಬಾರದೆಂಬ ಉದ್ದೇಶದಿಂದ ಆರಂಭಿಸಲಾಗಿರುವ ಈ ಸಹಾಯವಾಣಿ ಸಂಖ್ಯೆ 7676688688 ಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಗಳ ವರೆಗೆ ನಾಗರಿಕರು ಕರೆ ಮಾಡಿ ಸೂಕ್ತ ವೈದ್ಯಕೀಯ ಸಲಹೆ ಪಡೆಯಬಹುದಾಗಿದೆ.
ರಜತ ಉಳ್ಳಾಗಡ್ಡಿಮಠ ಅವರ ಮನವಿ..
ಹುಬ್ಬಳ್ಳಿ- ಧಾರವಾಡ ಜನತೆಗೆ ಕೊವಿಡ್ ಬಗ್ಗೆ ಸರಿಯಾದ ಮಾಹಿತಿ ಸಿಗಬೇಕೆಂಬ ಆಶಯದೊಂದಿಗೆ “ವಿಶೇಷ ಕೊವಿಡ್ ಸಹಾಯವಾಣಿ” ಯೊಂದನ್ನು ಆರಂಭಿಸಲಾಗುತ್ತಿದೆ.
ಈ ಸಹಾಯವಾಣಿಯ ಮೂಲಕ ತಜ್ಞ ವೈದ್ಯರು ಹುಬ್ಬಳ್ಳಿ- ಧಾರವಾಡ ಜನರಿಗೆ ಕೋವಿಡ್ ಬಗ್ಗೆ ಯಾವುದೇ ಅನುಮಾನ ಇದ್ದಲ್ಲಿ ಪರಿಹರಿಸಲಿದ್ದಾರೆ. ಅಗತ್ಯ ಮಾಹಿತಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನೇರವಾಗಿ ಉಚಿತವಾಗಿ ಸಲಹೆಗಳನ್ನು ನೀಡಲಿದ್ದಾರೆ.
ಕೊರೋನಾ ಸೋಂಕಿನ ಬಗ್ಗೆ ಹರಡುತ್ತಿರುವ ಅನಗತ್ಯ ಸುಳ್ಳು ಸುದ್ದಿಗಳಿಂದ ಜನರು ಆತಂಕಗೊಳ್ಳಬಾರದೆಂಬ ಉದ್ದೇಶದಿಂದ ಈ ಸಹಾಯವಾಣಿ ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ 9590403098ಗೆ ನಾಗರಿಕರು ಕರೆ ಮಾಡಿ ಉಚಿತವಾಗಿ ಸೂಕ್ತ ವೈದ್ಯಕೀಯ ಸಲಹೆ ಪಡೆಯಬಹುದಾಗಿದೆ.
ಜನರು ಈ ಸೌಲಭ್ಯದ ಸದುಪಯೋಗ ಮಾಡಿಕೊಳ್ಳಬೇಕೆಂಬುದು ಮನವಿ ಮಾಡಿಕೊಳ್ಳುತ್ತೇನೆ.