Posts Slider

Karnataka Voice

Latest Kannada News

ರಾಯಚೂರು..ಇದು ಕೊರೋನಾ ಆಸ್ಪತ್ರೆನಾ.. ಹಂದಿಗಳದ್ದಾ..! ಏನ್ ಸರಕಾರ ಸ್ವಾಮಿ ಇದು..

1 min read
Spread the love

ರಾಯಚೂರು: ಸರಕಾರದ ಆದೇಶಗಳು ಎಷ್ಟೊಂದು ಜಾಳು-ಜಾಳಾಗಿರುತ್ತವೆ ಅನ್ನೋದಕ್ಕೆ ಇಲ್ಲಿನ ಆಸ್ಪತ್ರೆಯ ವ್ಯವಸ್ಥೆಯನ್ನ ನೋಡಿದರೇ ಅನಿಸದೇ ಇರದು. ಮನುಷ್ಯರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರಯೀಗ ಹಂದಿಗಳ ಕೂಡಾಗಿದ್ದು, ಯಾರೂ ನೋಡೋರೆಯಿಲ್ಲವಾಗಿದೆ.

ರಾಯಚೂರು ನಗರದ ಒಪೆಕ್ ಆಸ್ಪತ್ರೆಯಲ್ಲಿಯ ಕೋವಿಡ್ ವಿಭಾಗವಿದು. ಜನರು ಕೊರೋನಾ ಪಾಸಿಟಿವ್ ಬಂದ್ರೇ ಜೀವವೇ ಹೋದ ಹಾಗೇ ನಡೆದುಕೊಳ್ಳುತ್ತಿರುವಾಗ ಆಸ್ಪತ್ರೆಯ ತನ್ನ ಜವಾಬ್ದಾರಿಯನ್ನ ಅದ್ಯಾವ ರೀತಿ ನೋಡಿಕೊಳ್ಳುತ್ತಿದೆ ತಾವೇ ನೋಡಿ.

ಸಾವರ್ಜನಿಕರ ಆರೋಗ್ಯ ಕಾಪಾಡಬೇಕಾದ ವೈದ್ಯಕೀಯ ವ್ಯವಸ್ಥೆ ಎಷ್ಟೊಂದು ಗಲೀಜು ಮಾಡಿದೆ ಎಂಬುದನ್ನ ತಾವೇ ಕಣ್ಣಾರೆ ನೋಡಿ. ಚಿಕಿತ್ಸೆಗೆ ಬಳಕೆ ಮಾಡಿದ ವಸ್ತುಗಳನ್ನ ಬೇಕಾಬಿಟ್ಟಿ ಒಗೆದ ಪರಿಣಾಮವೇ, ಅಲ್ಲಿನ ಜಾಗ ಹಂದಿಗಳ ಗೂಡಾಗಿದೆ.

ದಯವಿಟ್ಟು ಇದು ಜೀವ ುಳಿಸುವ ಜಾಗ. ಇದನ್ನ ಆಸ್ಪತ್ರೆಯ ರೀತಿಯಲ್ಲೇ ಇಡಿ. ಹೀಗೆ ಆದರೆ, ನಿವಾರ್ಯವಾಗಿ ನಿಮ್ಮ ವಿರುದ್ಧ ಹೋರಾಟದ ದಾರಿ ತುಳಿಯಬೇಕಾಗತ್ತೆ ಎಂದು ಪ್ರಜ್ಞಾವಂತ ನಾಗರಿಕರು ಎಚ್ಚರಿಕೆ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed