ನ್ಯಾಯಾಲಯದ ಆದೇಶ ಪಾಲನೆ ಮಾಡಿದ್ದೆ, ಹುಬ್ಬಳ್ಳಿ ಪೊಲೀಸರಿಗೆ ತಲೆನೋವಾಯಿತಾ…!!!
1 min readಹುಬ್ಬಳ್ಳಿ: 1992 ರಲ್ಲಿ ನಡೆದ ಪ್ರಕರಣವೊಂದರಲ್ಲಿ (252/92) ಬಂಧನ ಮಾಡಲು ಪೊಲೀಸರು ಕೋರ್ಟ್ ಆದೇಶ ಪಾಲನೆ ಮಾಡಿದೆ. ಆದರೆ, ಪ್ರಶ್ನೆ ಉದ್ಭವವಾಗಿರುವುದು ಪೊಲೀಸರ ಮೇಲೆ ಎನ್ನಲಾಗಿದೆ.
ಹಳೇ ಕೇಸಿನ ವಿಲೇವಾರಿ ಮಾಡಲು ಪೊಲೀಸರು ಪ್ರತಿವರ್ಷವೂ ವರ್ಷದ ಕೊನೆಯಲ್ಲಿ ಅಪರಾಧ ತಡೆ ಮಾಸಾಚರಣೆ ಮಾಡುವುದು ಯಾವುದೇ ರಾಜಕೀಯ ಪಕ್ಷಗಳು ಅಧಿಕಾರಿಕಾರದಲ್ಲಿದ್ದಾಗಲೂ ನಡೆಯುವ ಪ್ರಕ್ರಿಯೆಯಾಗಿದೆ.
ಈಗ ಬಂಧಿತರಾಗಿರುವ ಶ್ರೀಕಾಂತ ಪೂಜಾರಿಗೆ ನ್ಯಾಯಾಲಯದಲ್ಲಿ ಬೇಲ್ ಸಿಕ್ಕಿಲ್ಲವಾದ್ದರಿಂದ ನ್ಯಾಯಾಂಗ ಬಂಧನಕ್ಕೊಳಪಟ್ಡಿದ್ದಾರೆ. ಆದರೆ, ಶಹರ ಠಾಣೆಯಲ್ಲಿ ಇರುವುದು ಮೊಹ್ಮದರಫೀಕ ತಹಶೀಲ್ದಾರ ಹೆಸರಿನ ಇನ್ಸಪೆಕ್ಟರ್. ಇದೇ ಇನ್ಸಪೆಕ್ಟರ್ ಅನಾರೋಗ್ಯಪೀಡಿತ ಕಲಬುರ್ಗಿ ಅನ್ನೋರಿಗೆ ಹೇಳಿ ಬಂದಿದ್ದಾರಷ್ಟೇ.
ಮೊನ್ನೆ ಜಾಮೀನು ಪಡೆದು ಹೊರಗಿರುವ ರಾಜು ಧರ್ಮದಾಸ ಕೂಡಾ, ಬಿಜೆಪಿಯಲ್ಲಿರುವ ರಾಜಕಾರಣಿಗಳು ಹೇಗೆ ಎಂಬುದನ್ನ ಕೂಡಾ ಹೇಳಿದ್ದರು. ಹೋರಾಟ ಮಾಡದವರು ಜನಪ್ರತಿನಿಧಿಗಳು ಆಗಿದ್ದಾರೆಂದು ಹೇಳಿದ್ದರು.
ನ್ಯಾಯಾಲಯದ ಆದೇಶ ಪಾಲನೆಯನ್ನ ಪೊಲೀಸರು ಮಾಡಿದ್ದು ತಪ್ಪಾ… ಅಲ್ಲಿ ಇನ್ಸಪೆಕ್ಟರ್ ಮೊಹ್ಮದರಫೀಕ ತಹಶೀಲ್ದಾರ ಅನ್ನೋರು ಇರೋದಕ್ಕೆ ಹೀಗೆ ನಡೀತಾಯಿದೇಯಾ. ನ್ಯಾಯಾಲಯದ ನಿಂದನೆ ಮಾಡುತ್ತಿರುವುದು ಯಾರೂ… ಈ ಪ್ರಶ್ನೆಗಳಿಗೆ ಸಧ್ಯಕ್ಕೆ ಉತ್ತರ ಸಿಗುತ್ತಿಲ್ಲ.