ಮಗಳ ಸಾವಿನಲ್ಲಿ ನಾಟಕೀಯತೆ, SC ಪ್ರಮಾಣ ಪತ್ರ ಮಾಡಿದ ನಿರಂಜನಯ್ಯ ಹಿರೇಮಠ: ಸಮತಾ ಸೇನೆ ಗಂಭೀರ ಆರೋಪ…

ಹುಬ್ಬಳ್ಳಿ: ನಗರದ ಬಿವಿಬಿ ಕ್ಯಾಂಪಸ್‌ನಲ್ಲಿ ಹತ್ಯೆಯಾದ ನೇಹಾ ಹಿರೇಮಠಳ ತಂದೆಯಾದ ನಿರಂಜನಯ್ಯ ಹಿರೇಮಠ ವಿರುದ್ಧ ಗಂಭೀರ ಆರೋಪ ಮಾಡಿರುವ ಸಮತಾ ಸೇನೆಯು, ಮಹತ್ವದ ದಾಖಲೆಗಳನ್ನ ಬಿಡುಗಡೆ ಮಾಡಿದೆ.
ನೇಹಾ ಹಿರೇಮಠ ಮೂಲತಃ ಬೇಡ ಜಂಗಮ ಪರಿಶಿಷ್ಟ ಪ್ರಮಾಣ ಪತ್ರ ಪಡೆದಿದ್ದು, ನಿರಂಜನಯ್ಯ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಸೇನೆಯ ಗುರುನಾಥ ಉಳ್ಳಿಕಾಶಿ ಒತ್ತಾಯಿಸಿದ್ದಾರೆ.
ಮನವಿಯ ಪ್ರತಿ…
*ಮಾನ್ಯ ಸಂಪಾದಕರು/ವರದಿಗಾರರು* ______________
*ದಿನಪತ್ರಿಕೆ/ಮಾಧ್ಯಮ ಹುಬ್ಬಳ್ಳಿರವರಿಗೆ*
*ವಿಷಯ:- ರಾಜ್ಯದ ಜನತೆಯಲ್ಲಿ ತೀವ್ರ ಕೋಲಾಹಲ ಸ್ರಷ್ಟಿಸಿದ ನೇಹಾ ನಿರಂಜನ ಹಿರೇಮಠ ಹತ್ಯೆಯ ತನಿಖೆ ನಡೆದಿರುವಾಗಲೇ ಪ್ರಬಲ ಪ್ರಮುಖ ಲಿಂಗಾಯತ ಸಮಾಜದ ನಿರಂಜನ ಹಿರೇಮಠ ರ ಮಗಳು “ಬೇಡ ಜಂಗಮ” ಪರಿಶಿಷ್ಟ ಜಾತಿಯ (SC)ಜಾತಿಪ್ರಮಾಣ ಪತ್ರ ಪಡೆದಿದ್ದು ತಕ್ಷಣ ರದ್ದತಿಗಾಗಿ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹಿಸಿ ಸಮತಾ ಸೇನಾ ವಿವಿಧ ದಲಿತ ಸಂಘ ಸಂಸ್ಥೆಗಳಮಹಾಮಂಡಳ(ರಿ) ವತಿಯಿಂದ “ಡಿಸಿಆರಇ”ಗೆ ತೀವ್ರಗತಿಯಲ್ಲಿ ಕ್ರಮಕ್ಕೆ ಕೋರಿ ದೂರು**
*ಮಾನ್ಯರೇ*
*ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯ ತೀವ್ರ ಕೋಲಾಹಲದ ಮಧ್ಯ ಹಲವು ಸತ್ಯೆಗಳನ್ನ ಮರೆಮಾಚುವ ಮತ್ತು ಸಾವಿನ ಮನೆಯಲ್ಲಿ ರಾಜಕೀಯ ನಡೆಸುವ ಕಾರಣ ಯಾರಿಗೂ ತಿಳಿದಿರಲೇ ಇಲ್ಲ ನೇಹಾ ನಿರಂಜನ ಹಿರೇಮಠ ಹುಬ್ಬಳ್ಳಿಯ ರಹವಾಸಿ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯೆ ಈ ಪ್ರಕರಣದ ನಂತರ ರಾಜ್ಯದ ರಾಷ್ಟ್ರದ ಅನೇಕ ಲಿಂಗಾಯತ ಶರಣರು -ಮುಖಂಡರು ಇವರ ನಿವಾಸಕ್ಕೆ ತೆರಳಿದ್ದು ಸಂತೈಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ? ಆದರೆ ಲಿಂಗಾಯತರಲ್ಲೇ ಶ್ರೇಷ್ಟ ಜಂಗಮ ಗುರುಗಳಸ್ಥಾನದಲ್ಲಿರುವ ನಿರಂಜನ ಹಿರೇಮಠ ತಾನು ಸಹ ಪರಿಶಿಷ್ಟ ಎಂಬ ಹಣೆಪಟ್ಟಿಯನ್ನ ಸ್ರಷ್ಟಿಸಿಕೊಂಡು ಖೊಟ್ಟಿ ಜಾತಿ ಪ್ರಮಾಣಪತ್ರವನ್ನ ಪಡೆದು ಮೂಲ ಪರಿಶಿಷ್ಟರಿಗೆ ವಂಚಿಸುವ ಹುನ್ನಾರದಿಂದ ತನ್ನ ಮಗಳ ಸಾವಿನಲ್ಲಿ ನಾಟಕೀಯವಾದಂತಹ ಅಸಹಜ ಹೇಳಿಕೆಗಳಿಂದ ಕಾನೂನು ಸುವ್ಯವಸ್ಥೆ ಹದಗೆಡಿಸುವಂತಹ ಹೀನ ವಾತಾವರಣಕ್ಕೆ ಕಾರಣವಾಗಿದ್ದು ಬೆಂಗಳೂರು ಹೊಂಗಸಂದ್ರದ ಮೂಲಕ ಪಡೆದ ನೇಹಾ ನಿರಂಜನ ಹಿರೇಮಠ ಳ “ಬೇಡಜಂಗಮ “ಪಜಾ ಜಾತಿಪ್ರಮಾಣ ಪತ್ರ ಎನ್ನುವುದು ಈಗ ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ(ರಿ) ಸಂಘಟನೆಯ ತನಿಖೆಯಿಂದ ತಿಳಿದುಬಂದ ಮಾಹಿತಿಯನ್ವಯ RD0038208524200 ಯಿಂದ ಸಾಬೀತಾಗಿದ್ದು ತಕ್ಷಣ ಈ ಖೊಟ್ಟಿ ಜಾತಿಪ್ರಮಾಣಪತ್ರ ನೀಡಿದ ದುಷ್ಟ ಅಧಿಕಾರಿಗಳ ಸಹಿತ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ವಹಿಸಲು ಮಾನ್ಯಡಿಸಿಆರ ಇ ಅಧಿಕಾರಿಗಳು ತಕ್ಷಣ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಆಗ್ರಹಿಸಿ ದೂರೂ ಸಲ್ಲಿಸಲಾಗಿದೆ*
*ವಂದನೆಗಳೊಂದಿಗೆ*
*ಸ್ಥಳ:ಹುಬ್ಬಳ್ಳಿ*
*ದಿನಾಂಕ:31/05/2024*
*ತಮ್ಮ:ಗುರುನಾಥ-ಉಳ್ಳಿಕಾಶಿ*
*ಸಮತಾ ಸೇನಾ ಕರ್ನಾಟಕ*
*ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ(ರಿ) ಕರ್ನಾಟಕ*
*#9448564586*