ಹುಬ್ಬಳ್ಳಿಯ “ಆ ಅಪಘಾತದಲ್ಲಿ” ಹಣ ಪಡೆದವರಿಗೆ ಶಿಕ್ಷೆ ಇಲ್ಲವೇ… “ಹಂಚು-ಫಿಲೋ”…

ಹುಬ್ಬಳ್ಳಿ: ನಗರದಲ್ಲಿ ನಡೆದಿರುವ ಪ್ರಕರಣವೊಂದರಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ದಗಲ್ ಬಾಜಿ ತ್ರಿಸ್ಟಾರ್ ಮತ್ತು RTI ಕಾರ್ಯಕರ್ತನಿಗೆ ಇಲ್ಲಿಯವರೆಗೂ ಶಿಕ್ಷೆಯಾಗದೇ ಇರುವುದು ಹಲವು ಸಂಶಯಗಳನ್ನ ಹೆಚ್ಚು ಮಾಡಿಸಿದೆ.

ಶ್ರೀಮಂತರ ಮಗನೋರ್ವನನ್ನ ಬೆದರಿಸಿ ಹಣ ಪಡೆದಿರುವ ಬಗ್ಗೆ ಈಗಾಗಲೇ ಕೆಲವು ಅಧಿಕಾರಿಗಳಿಗೆ ಗೊತ್ತಾಗಿದೆ. ಅಷ್ಟೇ ಅಲ್ಲ, ವ್ಯವಹಾರ ಕುದುರಿಸಿ ಹಂಚು ಕಾಯಿಸಿಕೊಂಡ ತ್ರಿಸ್ಟಾರ್ ನ ಅಸಲಿಯತ್ತು ಗೊತ್ತಾಗಿದೆ. ಪ್ರಮುಖ ರಾಜಕಾರಣಿಯ ಆಪ್ತ ಸಹಾಯಕನ ಬಳಿ ಹೋಗಿ ‘ಕಾದ’ದ್ದರ ಬಗ್ಗೆಯೂ ಅಲವತ್ತುಕೊಂಡಿದ್ದಾರೆ. ಇಂತಹ ಮುಖವಾಡ ಹೊತ್ತವರಿಗೆ ದಕ್ಷ ಅಧಿಕಾರಿ ಲಾಬುರಾಮ್ ಅವರು ತಕ್ಕ ಪಾಠ ಕಲಿಸುವ ಜೊತೆಗೆ ಹಣವನ್ನ ಮರಳಿಸಲು ಮುಂದಾಗಬೇಕಿದೆ.