ಹುಬ್ಬಳ್ಳಿಯಲ್ಲಿ ಬಸ್ ನಿಲ್ದಾಣ, ಪುಟ್ ಪಾತ್ ನುಂಗಿದ್ದರೂ, ನೋಟಿಸ್ ಕೊಟ್ಟಂಗೆ ಮಾಡ್ತಿರೋ ಪಾಲಿಕೆ…!
1 min readಹುಬ್ಬಳ್ಳಿ: ವಿದ್ಯಾನಗರದ ಶಿರೂರ ಪಾರ್ಕಿನಲ್ಲಿನ ಮಹಾನಗರ ಪಾಲಿಕೆಯ ಜಾಗವೂ ಸೇರಿದಂತೆ ಸಾರ್ವಜನಿಕ ಬಸ್ ನಿಲ್ದಾಣವನ್ನೂ ಕಬಳಿಕೆ ಮಾಡಿಕೊಂಡು ಕಟ್ಟಡ ಕಟ್ಟುತ್ತಿರುವ ಆಸಾಮಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ನೋಟಿಸ್-01.. ನೋಟಿಸ್-02 ಎಂದು ಕೊಡುತ್ತ ಸುಮ್ಮನೆ ಕುಳಿತಿದೆ ಹೊರತಾಗಿ ಕಾಮಗಾರಿಯನ್ನ ಸ್ಥಗಿತಗೊಳಿಸಲು ಮುಂದಾಗದೇ ಇರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಹುಬ್ಬಳ್ಳಿ ವಿದ್ಯಾನಗರದ ಶಿರೂರ ಪಾರ್ಕ್ ಪ್ರದೇಶದಲ್ಲಿ ಸಿಟಿಎಸ್ ಸಂಖ್ಯೆ 4760/6, 4760/7, 4760/8 ಮತ್ತು 4760/9ರಲ್ಲಿ ಪಾಲಿಕೆಯ ಜಾಗವನ್ನ ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎಂದು ವಲಯ ಕಚೇರಿ 5ರಿಂದ ಸುನೀಲ ಕೋಠಾರಿ ಅವರಿಗೆ ಕೇವಲ ನೋಟಿಸ್ ಕೊಡಲಾಗುತ್ತಿದೆ.
ಮಹಾನಗರ ಪಾಲಿಕೆ ನೀಡಿರುವ ನೋಟಿಸ್ ನಲ್ಲಿ ಮಾತ್ರ ವೀರಾವೇಷದ ನುಡಿಗಳಿದ್ದು, ಅವಗಳ ಪಾಲನೆ ಮಾತ್ರ ಆಗದೇ ಇರುವುದು ಮಹಾನಗರ ಪಾಲಿಕೆ ಅಧಿಕಾರಿಗಳ ಬಗ್ಗೆ ಹಲವು ಸಂಶಯಗಳನ್ನ ಮೂಡಿಸುತ್ತಿದೆ.
ಬಡವರ ಮನೆಯನ್ನ, ಅಂಗಡಿಗಳನ್ನ ತೆಗೆಯುವಾಗ ನೋಟಿಸ್ ಎಂಬ ಪದದ ಬಳಕೆಯಾಗದೇ ತೆರವಿಗೆ ಬರುವ ಅಧಿಕಾರಿಗಳು, ಹಣವಂತರನ್ನ ನೋಟಿಸ್ ನೀಡಿ ಸರಿ ಮಾಡಿಕೊಳ್ಳಲು ಮುಂದಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.