Posts Slider

Karnataka Voice

Latest Kannada News

ಪಾಲಿಕೆ ಮಾಜಿ ಸದಸ್ಯನ ಸಹೋದರರಿಂದ ಹುಬ್ಬಳ್ಳಿಯಲ್ಲಿ ಗೂಂಡಾಗಿರಿ…!

1 min read
Spread the love

Basheer Gudamal-ex corporater

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಮಾಜಿ ಸದಸ್ಯನ ಸಹೋದರರು ಕೂಡಿಕೊಂಡು ಓರ್ವ ಯುವಕನನ್ನ ಮನಬಂದಂತೆ ಥಳಿಸಿರುವ ಘಟನೆ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯ ಕೂಗಳತೆಯಲ್ಲೇ ನಡೆದಿದೆ.

ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಬಷೀರಅಹ್ಮದ ಗೂಡಮಾಲ್ ಸಹೋದರರೇ ತನ್ನ ಮೇಲೆ ಹಲ್ಲೆ ಮಾಡಿದ್ದೆಂದು ಹುಬ್ಬಳ್ಳಿಯ ಕಿಮ್ಸಗೆ ಚಿಕಿತ್ಸೆಗಾಗಿ ಬಂದಿರುವ ಮೊಹ್ಮದಕೈಫ್ ಅಂಕಲಗಿ ಹೇಳಿದ್ದಾರೆ.

ಕಸಬಾಪೇಟೆ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಕಾರ ಸರ್ವೀಸ್ ಸೆಂಟರನಲ್ಲಿ ಕೆಲಸ ಮಾಡುವ ಮೊಹ್ಮದಕೈಫನನ್ನ ಈ ಹಿಂದೆಯೂ ಥಳಿಸಿದ್ದು, ಇಂದು ಕೂಡಾ ನಾರಾಯಣಸೋಫಾ ನಿವಾಸಿಯಾಗಿರುವ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಬೆನ್ನಿಗೆ ಬಾಸುಂಡೆಗಳು ಮೂಡಿವೆ,

ಪಾಲಿಕೆ ಮಾಜಿ ಸದಸ್ಯನ ಸಹೋದರರಾದ ಜಾವೇದ ಗೂಡಮಾಲ್, ಮುಕ್ತಿಯಾರ್ ಗೂಡಮಾಲ್, ಶಬ್ಬೀರ ಗೂಡಮಾಲ್, ಆಸೀಫ ಗೂಡಮಾಲ್ ಸೇರಿದಂತೆ ಹಲವರು ಕಟ್ಟಿಗೆ ಹಾಗೂ ರಾಡ್ ನಿಂದ ಹೊಡೆದಿದ್ದಾರೆಂದು ದೂರಲಾಗಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಯುವಕನಿಗೆ ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಘಟನೆಗೆ ಸಂಬಂಧಿಸಿದ ಹಾಗೇ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುತ್ತಿದೆ.


Spread the love

Leave a Reply

Your email address will not be published. Required fields are marked *

You may have missed