ಪಾಲಿಕೆ ಕಮೀಷನರ್ “ಈಶ್ವರ ಉಳ್ಳಾಗಡ್ಡಿ” ವರ್ಗಾವಣೆ ಹಿಂದೆ ‘ಗುಂಟ್ರಾಳ’ ಹೋರಾಟದ ಜಯ… “ಕೈ” ಮಸಲತ್ತು ಕಾರಣವಾಯಿತೇ…!?

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಈಶ್ವರ ಉಳ್ಳಾಗಡ್ಡಿ ಅವರ ವರ್ಗಾವಣೆಯ ಹಿಂದೆ ‘ಕೈ’ ಮದದ ಮಸಲತ್ತು ಕಾರಣವಾಗಿದೆ ಎಂದು ಹೇಳಲಾಗಿದ್ದು, ವಿಜಯ ಗುಂಟ್ರಾಳ ಹೋರಾಟದ ಜಯವೇ ಮಸಲತ್ತಿಗೆ ಕಾರಣವೆಂಬುದು ರಹಸ್ಯವಾಗಿ ಉಳಿದಿಲ್ಲ.
ಪಾಲಿಕೆಯ ಕಾರ್ಮಿಕರ ನೇಮಕಾತಿ ನೀಡುವಂತೆ ವಿಜಯ ಗುಂಟ್ರಾಳ ಅವರು ಪಾಲಿಕೆಯ ಮುಂಭಾಗದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತ ಬಂದರೂ, ಪಾಲಿಕೆ ಕಮೀಷನರ್ ಈಶ್ವರ ಉಳ್ಳಾಗಡ್ಡಿ ಅವರು ಅಲ್ಲಿಗೆ ಹೋಗದಂತೆ ‘ಕೈ’ ಅಡ್ಡವಾಗಿತ್ತು.
ಈ ವಿಷಯದ ಅರಿವಿದ್ದೆ ಹೋರಾಟ ಬೇರೆ ಸ್ವರೂಪ ಪಡೆಯುವ ಜೊತೆಗೆ ಈಶ್ವರ ಉಳ್ಳಾಗಡ್ಡಿ ಜಾತಿವಾದಿ ಎಂದು ಬಿಂಬಿಸಲಾಗಿತ್ತು. ಅಷ್ಟಾದರೂ ‘ಕೈ’ ಮಾತು ಕೇಳಿ ರಗಳೆ ಬೇಡವೆಂದುಕೊಂಡು ಕಮೀಷನರ್ ತಮ್ಮ ಕರ್ತವ್ಯ ನಿರ್ವಹಿಸುತ್ತ ಮುನ್ನಡೆದರು.
ಹೋರಾಟದ ತೀವ್ರತೆ ಹೆಚ್ಚಾಗುತ್ತಿದ್ದ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಮೇಯರ್ ರಾಮಣ್ಣ ಬಡಿಗೇರ ಸೇರಿದಂತೆ ಮತ್ತಿತರರು ಹೋರಾಟದ ಸ್ಥಳಕ್ಕೆ ತೆರಳಿ ನೇಮಕಾತಿ ಆದೇಶವನ್ನ ನೀಡಿದರು. ವಿಜಯ ಗುಂಟ್ರಾಳ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿತ್ತು. ಬಲಿಪಶುವಾಗಿದ್ದು ಮಾತ್ರ ಕಮೀಷನರ್ ಈಶ್ವರ ಉಳ್ಳಾಗಡ್ಡಿ.
ಅಂದಿನಿಂದಲೂ ಕಮೀಷನರ್ ಅವರನ್ನ ತೆಗೆಯುವ, ತೆಗೆಸುವ ಮತ್ತು ಅಮಾನತ್ತು ಮಾಡಿಸುವ ತಂತ್ರ ‘ಕೈ’ಯಿಂದ ನಡೆಯಿತು. ಆಮೇಲೆ, ತಣ್ಣಗಾದರೂ, ಅಸಹ್ಯವಾಗಿ ಛೇಡಿಸುವುದನ್ನ ‘ಕೈ’ ಮುಂದುವರೆಸಿತು. ಸಜ್ಜನ ಕಮೀಷನರ್ ‘Exit’ ನಿರ್ಣಯ ತೆಗೆದುಕೊಂಡು ಹೊರ ನಡೆದಿದ್ದಾರೆ.
ಇದು ವರ್ಗಾವಣೆ ಹಿಂದಿನ ಕಹಿ ‘ಕೈ’ ಸತ್ಯ.