HD ಮಹಾನಗರ ಪಾಲಿಕೆ ಚುನಾವಣೆ: ಜ್ಯೋತಿ ಪಾಟೀಲ ಮೇಯರ್, ಸಂತೋಷ ಚವ್ಹಾಣ ಉಪಮೇಯರ್…

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆ ಅಂತಿಮಗೊಂಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.
19ನೇ ವಾರ್ಡಿನ ಜ್ಯೋತಿ ಪಾಟೀಲ ಅವರು ಸಾಮಾನ್ಯ ಮಹಿಳಾ ಮೀಸಲಾತಿ ಪರಿಣಾಮ ಬಿಜೆಪಿ ಇವರನ್ನ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿದೆ. 19 ನೇ ವಾರ್ಡಿನ ಸಂತೋಷ ಚವ್ಹಾಣ ಅವರು ಉಪಮೇಯರ್ ಆಯ್ಕೆ ಖಚಿತವಾಗಿದೆ.
ಈ ಬಗ್ಗೆ ಹಲವು ಗೊಂದಲಗಳಿದ್ದವು. ಆದರೆ, ಕೆಲವೇ ಕ್ಷಣಗಳ ಹಿಂದೆ ಇಬ್ಬರನ್ನ ಬಿಜೆಪಿ ಆಯ್ಕೆ ಮಾಡಿದ್ದು, ಇವರೇ ಅಧಿಕೃತವಾಗಲಿದ್ದಾರೆ.
ಒಂದು ಗಂಟೆಯ ನಂತರ ಅಧಿಕೃತ ಘೋಷಣೆ ಹೊರಬರಲಿದೆ.