Posts Slider

Karnataka Voice

Latest Kannada News

ಹುಬ್ಬಳ್ಳಿ-ಧಾರವಾಡ ಪಾಲಿಕೆ- ಯಾರಿಗೆ ಎಷ್ಟು ಮತ: ಸಂಪೂರ್ಣವಾದ ವಿವರ…!

1 min read
Spread the love

82 ವಾರ್ಡ್‍ಗಳ ಫಲಿತಾಂಶ ; 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 1 ಜೆಡಿಎಸ್ ಮತ್ತು 6 ಪಕ್ಷೇತರರಿಗೆ ಜಯ -ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಾರ್ವತ್ರಿಕ ಚುನಾವಣೆ-2021 ಮತಗಳ ಎಣಿಕೆ ಕಾರ್ಯ ಇಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ಜರುಗಿತು. ಎಲ್ಲ 82 ವಾರ್ಡ್‍ಗಳ ಫಲಿತಾಂಶ ಪ್ರಕಟವಾಗಿದ್ದು, 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 1 ಜೆಡಿಎಸ್ ಮತ್ತು 6 ಪಕ್ಷೇತರರು ವಿಜೇತರಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.
ವಿಜೇತ ಅಭ್ಯರ್ಥಿಗಳ ವಿವರ :

ವಾರ್ಡ್ ನಂಬರ್ 1 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಬಿಜೆಪಿ ಅಭ್ಯರ್ಥಿ ಅನಿತಾ ಚಳಗೇರಿ 2231 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಜಯಶ್ರೀ ರಾ. ನಾಯಕವಾಡ 2165 ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಹೊಂಗಲ 1124 ಮತಗಳನ್ನು ಪಡೆದಿದ್ದಾರೆ. 89 ನೋಟಾ ಮತಗಳು.

ವಾರ್ಡ್ ನಂಬರ್ 2 ರಲ್ಲಿ (ಪ.ಪಂ.ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಸೂರವ್ವ ಬಾಳನಗೌಡ ಪಾಟೀಲ 2085 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಿಂಗವ್ವ ಹಾರಿಕೊಪ್ಪ 1996, ಜೆಡಿಎಸ್ ಅಭ್ಯರ್ಥಿ ಹೇಮಾವತಿ ಪಾಟೀಲ 767 ಹಾಗೂ ಪಕ್ಷೇತರ ಅಭ್ಯರ್ಥಿ ದೀಪಾ ಮನೋಹರ ನಾಯಕ 540 ಮತಗಳನ್ನು ಪಡೆದಿದ್ದಾರೆ. ನೋಟಾ 81 ಮತಗಳು.

ವಾರ್ಡ್ ನಂಬರ್ 3 ರಲ್ಲಿ (ಹಿಂ.ವರ್ಗ ‘ಎ’) ಬಿಜೆಪಿ ಅಭ್ಯರ್ಥಿ ಈರೇಶ ಅಂಚಟಗೇರಿ 3209 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶಾಹೀದ ಅಹ್ಮದ ನದಾಫ 182, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಹೂಗಾರ 1140, ಪಕ್ಷೇತರ ಅಭ್ಯರ್ಥಿಗಳಾದ ಗುರುರಾಜ ಪ್ರಭು ಸುಣಗಾರ 81, ಮಹಮೂದ ಹದ್ಲಿ 60, ದೂದಬಾದಶಾ ಬಾನಿ 6, ಮಂಜುನಾಥ ಬಾಳಪ್ಪ ನಡಟ್ಟಿ 209 ಮತಗಳನ್ನು ಪಡೆದಿದ್ದಾರೆ. ನೋಟಾ 36 ಮತಗಳು.

ವಾರ್ಡ್ ನಂಬರ್ 4 ರಲಿ ್ಲ(ಸಾಮಾನ್ಯ) ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಕಮತಿ 3123 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಸವರಾಜ ಪಳೋಟಿ 2274, ಜೆಡಿಎಸ್ ಅಭ್ಯರ್ಥಿ ಮುಸ್ತಾಕ ಅಹ್ಮದ ಶೇತಸನದಿ 619, ಎಎಪಿ ಅಭ್ಯರ್ಥಿ ಮಲ್ಲಿಕಾರ್ಜುನ ಶಲವಡಿ 54 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಅಸೀಫ್ ಎಚ್. ನದಾಪ 33, ಪ್ರವೀಣ ಪಾಟೀಲ 27, ರಾಕೇಶ ದೊಡ್ಡಮನಿ 229 ಹಾಗೂ ರಾಜಶೇಖರಯ್ಯ ವಿ. ಕಂತಿಮಠ 51 ಮತಗಳನ್ನು ಪಡೆದಿದ್ದಾರೆ. ನೋಟಾ 56 ಮತಗಳು.

ವಾರ್ಡ್ ನಂಬರ್ 5 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ನಿತಿನ್ ಇಂಡಿ 2477 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ವಿಠ್ಠಲ ಚವ್ಹಾನ 343 ಮತಗಳನ್ನು, ಕಾಂಗ್ರೆಸ್ ಅಭ್ಯರ್ಥಿ ಶಿವಪ್ಪ ಚನ್ನಗೌಡರ 1424 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಗಿರೀಶ ಸದಾಶಿವ ಗೋಡಿ 43 ಮತಗಳನ್ನು, ಎಎಪಿ ಅಭ್ಯರ್ಥಿ ನಜಿರ ಅಹಮ್ಮದ ಕುಂದಗೋಳ 34 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಭೀಮಪ್ಪ ರೆಡ್ಡಿ 17 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಸುರಜ ಮಲ್ಲಿಕಾರ್ಜುನ ಪುಡಕಲಕಟ್ಟಿ 1311 ಮತಗಳನ್ನು ಪಡೆದಿದ್ದಾರೆ. ನೋಟಾ 57 ಮತಗಳು.

ವಾರ್ಡ್ ನಂಬರ್ 6 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ದಿಲμÁದ ಬೇಗಂ ನಧಾಫ 2737 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಭೀಮವ್ವ ಆನಂದ ಮಾಳಿ 2539 ಮತಗಳನ್ನು, ಪಕ್ಷೇತರ ಅಭ್ಯರ್ಥಿಗಳಾದ ಶಾಹೀನ ಹಾವೇರಿಪೇಟ 1261 ಮತ್ತು ಯಲ್ಲಮ್ಮ ಕಡೇಮನಿ 241 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿ ನಾಗವ್ವ ಈಶ್ವರಪ್ಪ ಗಾಣಿಗೇರ 161 ಮತಗಳನ್ನು ಪಡೆದಿದ್ದಾರೆ. 59 ನೋಟಾ ಮತಗಳು.

ವಾರ್ಡ್ ನಂಬರ್ 7 ರಲ್ಲಿ (ಹಿಂ.ವರ್ಗ ‘ಎ’) ಕಾಂಗ್ರೆಸ್ ಅಭ್ಯರ್ಥಿ ದೀಪಾ ನೀರಲಕಟ್ಟಿ 2864 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮುಕ್ತುಮ್ ಹುಸೇನ ಮಸ್ತಾನ ವಾಲೆ 187 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಮೊಹಮ್ಮದ ಮೊಯಿನ ಬಿಡಿವಾಲೆ 108 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ರವಿ ಯಲಿಗಾರ 2588 ಮತಗಳನ್ನು ಪಡೆದಿದ್ದಾರೆ. ನೋಟಾ 60 ಮತಗಳು.

ವಾರ್ಡ್ ನಂಬರ್ 8 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ಶಂಕರ ಶೇಳಕೆ 2114 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಪಿರಾಜಿ ಜಾಧವ 1518 ಮತಗಳನ್ನು, ಜೆಡಿಎಸ್ ಅಭ್ಯರ್ಥಿ ಬಸವರಾಜ ಕುರಟ್ಟಿಮಠ 97 ಮತಗಳನ್ನು ಪಕ್ಷೇತರ ಅಭ್ಯರ್ಥಿ ಮಹಾಂತೇಶ್ ಕೊಡ್ಲಣ್ಣವರ 39 ಮತಗಳನ್ನು, ಎಎಪಿ ಅಭ್ಯರ್ಥಿ ಶರೀಫಸಾಬ ಮಡಕೇಶ್ವರ 52 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಪ್ರಕಾಶ ಬಾಬುರಾವ್ ಘಾಟಿಗೆ 1938 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಪ್ರಮೋದ ಚಿದಂಬರ ಹಂದಿಗೋಳ 51 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಭರತ ವಿಶ್ವಾಸರಾವ್ ಸಾವಂತ 77 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಮಂಜುನಾಥ ಕದಂ 238 ಮತಗಳನ್ನು, ಪಕ್ಷೇತರ ಅಭ್ಯರ್ಥಿ ರವಿಕುಮಾರ ನೀಲಕಂಠಪ್ಪ ಹೆಗಡಿ 85 ಮತಗಳನ್ನು, ಹಾಗೂ ಪಕ್ಷೇತರ ಅಭ್ಯರ್ಥಿ ಶಕುಂತಲಾ ಕೇಶವ ಕಟ್ಟಿ 43 ಮತಗಳನ್ನು ಪಡೆದಿದ್ದಾರೆ. ನೋಟಾ 51 ಮತಗಳು

ವಾರ್ಡ್ ನಂಬರ್ 9 ರಲ್ಲಿ (ಸಾ. ಮಹಿಳೆ) ಬಿಜೆಪಿ ಅಭ್ಯರ್ಥಿ ನಾಝರೆ ರತ್ನಬಾಯಿ ಏಕನಾಥ 1488 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುನೀತಾ ಆ. ಅಂಕೋಲೆಕರ 1467, ಜೆಡಿಎಸ್ ಅಭ್ಯರ್ಥಿ ಮೇಘದರ್ಶಿನಿ ಈಶ್ವರ ಸಾಣಿಕೊಪ್ಪ 522 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಆರತಿ ಮಹೇಶ ಬೆಳಗಾಂವಕರ 327, ಸವಿತಾ ಬಸವರಾಜ ಕಟಗಿ 765, ಜ್ಯೋತಿ ಮೋಹನ ಮೇಲಿನಮನಿ 381, ನಾಗಮ್ಮ ವಿಜಯ ಕುಂದಗೋಳ 88, ಶಾಂತವ್ವ ಬಸಪ್ಪ ಬೂದಿಹಾಳ 146 ಮತಗಳನ್ನು ಪಡೆದಿದ್ದಾರೆ. 62 ನೋಟಾ ಮತಗಳು

ವಾರ್ಡ್ ನಂಬರ್ 10 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಬಿಜೆಪಿ ಅಭ್ಯರ್ಥಿ ಕೊಟಬಾಗಿ ಚಂದ್ರಕಲಾ ಬಸವರಾಜ 3484 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಸವದಿ 1899 ಮತಗಳು, ಜೆಡಿಎಸ್ ಅಭ್ಯರ್ಥಿ ಲತಾ ಮಂಜುನಾಥ ಆರೇರ 804 ಮತಗಳು ಹಾಗೂ ಎಎಪಿ ಅಭ್ಯರ್ಥಿ ಹಸೀನಾಬಾನು ನಿಸಾರ ಅಹ್ಮದ ಮಮದಾಪೂರ 62 ಮತಗಳನ್ನು ಪಡೆದಿದ್ದಾರೆ. 88 ನೋಟಾ ಮತಗಳು

ವಾರ್ಡ್ ನಂಬರ್ 11 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ಮಂಜುನಾಥ ದುರಗಪ್ಪ ಬಟ್ಟೆಣ್ಣವರ 2593 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗುಣಬಾಯಿ ಸಂಭಾಜಿರಾವ ಬರ್ಗೆ 1090 ಮತಗಳು, ಪಕ್ಷೇತರ ಅಭ್ಯರ್ಥಿ ಜಯಪ್ರಕಾಶ್ ನರಸಿಂಹ ಗಲಗಲಿ 489 ಮತಗಳು, ಜೆಡಿಎಸ್ ಅಭ್ಯರ್ಥಿ ಸಂಜೀವ ಈಶ್ವರ ಹಿರೇಮಠ 116 ಮತಗಳು, ಕಮ್ಯೂನಿಸ್ಟ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಬಾಬೂರಾವ್ ಈಳಿಗೇರ 113 ಮತಗಳು, ಎಎಪಿ ಅಭ್ಯರ್ಥಿ ಶಿವಕಿರಣ ರಾಮಪ್ಪ ಅಗಡಿ 96 ಮತಗಳು ಹಾಗೂ ಪ್ರಜಾಕೀಯ ಅಭ್ಯರ್ಥಿ ಪ್ರಶಾಂತ ನರಸಪ್ಪಾ ದೇವಮಿತ್ರ 55 ಮತಗಳನ್ನು ಪಡೆದಿದ್ದಾರೆ. 58 ನೋಟಾ ಮತಗಳು

ವಾರ್ಡ್ ನಂಬರ್ 12 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ವಿಜಯಾನಂದ ಶೇಖರ ಶೆಟ್ಟಿ 2384 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ವಿರುಪಾಕ್ಷಪ್ಪಾ ಧಾಂವಶಿ 1191, ಜೆಡಿಎಸ್ ಅಭ್ಯರ್ಥಿ ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ 129, ಎಎಪಿ ಅಭ್ಯರ್ಥಿ ಶಿವಕಿರಣ ರಾಮಪ್ಪ ಅಗಡಿ 100 ಹಾಗೂ ಪಕ್ಷೇತರ ಅಭ್ಯರ್ಥಿ ಈಶ್ವರ ಬಾಬು ಪಾಟೀಲ 97 ಮತಗಳನ್ನು ಪಡೆದಿದ್ದಾರೆ. ನೋಟಾ 53 ಮತಗಳು.

ವಾರ್ಡ್ ನಂಬರ್ 13 ರಲ್ಲಿ (ಹಿ.ವರ್ಗ ‘ಎ’) ಬಿಜೆಪಿ ಅಭ್ಯರ್ಥಿ ಬೇದರೆ ಸುರೇಶ ಫಕ್ಕೀರಪ್ಪ 1945 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಂಬೋರೆ ರಾಜು ಶಂಕರರಾವ್ 1604 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಮಜೀದಖಾನ ರುಸ್ತುಂಖಾನ ಕಿತ್ತೂರ 767 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಹೇಮಂತ ಬಾಬು ಗುರ್ಲಹೊಸೂರ 721 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿ ಜಮೀರ ಹುಸೇನ ಶಾಬುದ್ದಿನ ಮುಕ್ತಿ 19 ಮತಗಳನ್ನು ಪಡೆದಿದ್ದಾರೆ. 60 ನೋಟಾ ಮತಗಳು.

ವಾರ್ಡ್ ನಂಬರ್ 14 ರಲ್ಲಿ (ಹಿಂ.ವರ್ಗ ‘ಬಿ’) ಕಾಂಗ್ರೆಸ್ ಅಭ್ಯರ್ಥಿ ಶಂಭುಗೌಡ ರುದ್ರಗೌಡ ಸಾಲಮನಿ 4373 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಪಿ ಅಭ್ಯರ್ಥಿ ಸುಭಾಷ ಯಲ್ಲಪ್ಪ ಶಿಂಧೆ 2222 ಮತಗಳನ್ನು ಪಡೆದಿದ್ದಾರೆ. 58 ನೋಟಾ ಮತಗಳು.

ವಾರ್ಡ್ ನಂಬರ್ 15 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ವಿಷ್ಣುತೀರ್ಥ ವೇದವ್ಯಾಸ ಕೊರ್ಲಹಳ್ಳಿ 2836 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅನಿರುದ್ಧ ದೀಪಕ ಚಿಂಚೋರೆ 1923 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶ್ರೀಧರ ಗೋಪಾಲರಾವ ಪಂಜೀಕರ 57 ಮತಗಳನ್ನು ಹಾಗೂ ಎಎಪಿ ಅಭ್ಯರ್ಥಿ ನಟರಾಜ ಶಂಕರ ನಾಶಿ 46 ಮತಗಳನ್ನು ಪಡೆದಿದ್ದಾರೆ. 65 ನೋಟಾ ಮತಗಳು.

ವಾರ್ಡ್ ನಂಬರ್ 16 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಪರವೀನ ದೇಸಾಯಿ 2843 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜೇಶ್ವರಿ ಸಾಲಗಟ್ಟಿ 1822 ಮತಗಳನ್ನು ಹಾಗೂ ಜೆಡಿಎಸ್ ಅಭ್ಯರ್ಥಿ ಮಂಜುಳಾ ಅನಿಲ್ ವಡೇಕರ 102 ಮತಗಳನ್ನು ಪಡೆದಿದ್ದಾರೆ. 57 ನೋಟಾ ಮತಗಳು.

ವಾರ್ಡ್ ನಂಬರ್ 17 ರಲ್ಲಿ (ಪ.ಪಂಗಡ) ಕಾಂಗ್ರೆಸ್ ಅಭ್ಯರ್ಥಿ ಗಣೇಶ ಮ. ಮುಧೋಳ 3174 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಲ್ಲೇಶಿ ಮುಮ್ಮಿಗಟ್ಟಿ 1789 ಹಾಗೂ ಎಎಪಿ ಅಭ್ಯರ್ಥಿ ಅಮಿತ ಉಮೇಶ ವಾಲಿಕಾರ 191 ಮತಗಳನ್ನು ಪಡೆದಿದ್ದಾರೆ. 59 ನೋಟಾ ಮತಗಳು.

ವಾರ್ಡ್ ನಂಬರ್ 18 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ಶಿವು ಹಿರೇಮಠ 2624 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚಂದ್ರು ಪೂಜಾರ 910 ಹಾಗೂ ಜೆಡಿಎಸ್ ಅಭ್ಯರ್ಥಿ ಬಸವಂತಪ್ಪ ಉಳವಪ್ಪ ಬೆಳ್ಳಕ್ಕಿ 224 ಮತಗಳನ್ನು ಪಡೆದಿದ್ದಾರೆ. 58 ನೋಟಾ ಮತಗಳು.

ವಾರ್ಡ್ ನಂಬರ್ 19 ರಲ್ಲಿ (ಸಾ. ಮಹಿಳೆ) ಬಿಜೆಪಿ ಅಭ್ಯರ್ಥಿ ಜ್ಯೋತಿ ಪಾಟೀಲ 2243 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರೂಪಾ ಈಶ್ವರ ಒಡ್ಡಿನ 1653 ಮತಗಳನ್ನು ಪಡೆದಿದ್ದಾರೆ. ನೋಟಾ 80 ಮತಗಳು.

ವಾರ್ಡ್ ನಂಬರ್ 20 ರಲ್ಲಿ (ಪ.ಜಾ. ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಕವಿತಾ ದಾನಪ್ಪ ಕಬ್ಬೇರ 3183 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೀತಾ ಗೌಡಪ್ಪ ಪಾಟೀಲ 2504 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಶೋಭಾರಾಣಿ ಮಲ್ಲಪ್ಪ ಮಾದರ 189 ಮತಗಳನ್ನು ಪಡೆದಿದ್ದಾರೆ. ನೋಟಾ 97 ಮತಗಳು.

ವಾರ್ಡ್ ನಂಬರ್ 21 ರಲ್ಲಿ (ಹಿಂ.ವರ್ಗ ‘ಬಿ’) ಬಿಜೆಪಿ ಅಭ್ಯರ್ಥಿ ಆನಂದ ಯಾವಗಲ್ 3098 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಾನವಿ ಸಂದೀಪ 848 ಮತಗಳನ್ನು, ಜೆಡಿಎಸ್ ಅಭ್ಯರ್ಥಿ ಸುನೀಲ ತುಳಸಪ್ಪ ಕುರಹಟ್ಟಿ 484 ಮತಗಳನ್ನು ಪಕ್ಷೇತರ ಅಭ್ಯರ್ಥಿ ಮಂಜುನಾಥ ಚವ್ಹಾಣ 118 ಮತಗಳನ್ನು ಪಡೆದಿದ್ದಾರೆ. ನೋಟಾ 98 ಮತಗಳು.

ವಾರ್ಡ್ ನಂಬರ್ 22 ರಲ್ಲಿ (ಸಾ.ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಮುಲ್ಲಾ ಬಿಲಕಿಸಬಾನು 2265 ಮತಗಳಿಂದ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹಿತ್ತಲಮನಿ ಪಾರ್ವತಿ ಚಂದ್ರಶೇಖರ 1027, ಜೆಡಿಎಸ್ ಅಭ್ಯರ್ಥಿ ರಶೀದಾ ಮಹ್ಮಮದ್ ರಫೀಕ ಕಿರಶಾಳ 515, ಎಎಪಿ ಪಕ್ಷದ ಅಭ್ಯರ್ಥಿ ಮುಮೇಜಾಬೇಗಂ ಗುತ್ತಲ 107, ಪಕ್ಷೇತರ ಅಭ್ಯರ್ಥಿಗಳಾದ ಅಫ್ರೀನ ಜೆ ಅದೋನಿ 219, ನಮ್ರತಾ ಮಿಶ್ರಾ ನಂದೂರ 42, ಮಮತಾಜ ಬಾಕ್ಷರಸಾಬ ಬಳ್ಳಾರಿ 141, ಮಾಧುರಿ ಇರಾಣಿ 41, ವಹಿದಾ ದಿವಾನ ಬಳ್ಳಾರಿ 52 ಮತಗಳನ್ನು ಪಡೆದಿದ್ದಾರೆ. ನೋಟಾ 36 ಮತಗಳು.

ವಾರ್ಡ್ ನಂಬರ್ 23 ರಲ್ಲಿ (ಹಿಂ.ವರ್ಗ ‘ಎ’) ಕಾಂಗ್ರೆಸ್ ಅಭ್ಯರ್ಥಿ ಬಡಕುರಿ ಮಂಜುನಾಥ 2431 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಂಜಯ ಕಪಟಕರ 2139, ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ ರಾಯರ 209, ಪರಶುರಾಮ್ ಮಾನೆ 86 ಮತಗಳನ್ನು ಪಡೆದಿದ್ದಾರೆ. ನೋಟಾ 66 ಮತಗಳು.

ವಾರ್ಡ್ ನಂಬರ್ 24 ರಲ್ಲಿ (ಸಾಮಾನ್ಯ) ಕಾಂಗ್ರೆಸ್ ಅಭ್ಯರ್ಥಿ ಮಯೂರ ಮೊರೆ 1953 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಡವಣ್ಣನವರ ಶಿವಪ್ಪ 913, ಪಕ್ಷೇತರ ಅಭ್ಯರ್ಥಿಗಳಾದ ಸಂತೋಷ ನಂದೂರ 27, ಚಿದಾನಂದ ಸಿದ್ಧಾರೂಡ ಶಿಸನಳ್ಳಿ 575, ಪರಶುರಾಮ್ ಮಾನೆ 356, ಮಹಾವೀರ ಶಿವಣ್ಣವರ 760, ಮಂಜುನಾಥ ಕಲ್ಲಪ್ಪ ಅಂಗಡಿ 348, ಮಂಜುನಾಥ ಕುಸಗಲ್ 311 ಮತಗಳನ್ನು ಪಡೆದಿದ್ದಾರೆ. ನೋಟಾ 65 ಮತಗಳು.

ವಾರ್ಡ್ ನಂಬರ್ 25 ರಲ್ಲಿ (ಸಾ.ಮಹಿಳೆ) ಜೆಡಿಎಸ್ ಅಭ್ಯರ್ಥಿ ಲಕ್ಷ್ಮೀ ಮಾರುತಿ ಹಿಂಡಸಗೇರಿ 1678 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನೇತ್ರಾವತಿ ಆತ್ಮಾನಂದ ತಳವಾರ 1306, ಬಿಜೆಪಿ ಅಭ್ಯರ್ಥಿ ಮಂಜುಳಾ ಪರಶುರಾಮ್ ಸಾಕರೆ 882, ಪಕ್ಷೇತರ ಅಭ್ಯರ್ಥಿಗಳಾದ ಪಾರ್ವತಿ ಯಲ್ಲಪ್ಪಾ ಸುರಪುರ 29, ಸ್ಮಿತಾ ಆನಂದ ಜಾಧವ 1116 ಮತಗಳನ್ನು ಪಡೆದಿದ್ದಾರೆ. ನೋಟಾ 52 ಮತಗಳು.

ವಾರ್ಡ್ ನಂಬರ್ 26 ರಲ್ಲಿ (ಸಾ.ಮಹಿಳೆ) ಬಿಜೆಪಿ ಅಭ್ಯರ್ಥಿ ನೀಲವ್ವ ಯಲ್ಲಪ್ಪ ಅರವಳದ 2487 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಜಾಧವ 1427, ಪಕ್ಷೇತರ ಮಂಜುಳಾ ಮಾರುತಿ ಇಂಗನಳ್ಳಿ 1020, ಮಂಜುಳಾ ರವಿ ಅಕ್ಕೂರ 1523 ಮತಗಳನ್ನು ಪಡೆದಿದ್ದಾರೆ ನೋಟಾ 112 ಮತಗಳು

ವಾರ್ಡ್ ನಂಬರ್ 27 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಬಿಜೆಪಿ ಅಭ್ಯರ್ಥಿ ಸುನಿತಾ ಮಾಳವದಕರ 2184 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಾಂಚನ ಮಾಲಗಾರ 1301 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಭಾರತಿ ಡೊಳ್ಳಿನ 244 ಮತಗಳನ್ನು ಪಡೆದಿದ್ದಾರೆ. ನೋಟಾ 100 ಮತಗಳು.

ವಾರ್ಡ್ ನಂಬರ್ 28 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಮಲ್ಲಪ್ಪ ಮನಗುಂಡಿ 2313 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚನ್ನಪ್ಪ ಮಾಳಗಿ 1195 ಮತಗಳನ್ನು ಹಾಗೂ ಜೆಡಿಎಸ್ ಅಭ್ಯರ್ಥಿ ಬಸವರಾಜ ಮೆಣಿಸಿಂಡಿ 238 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಹಾಲಶಾಂತಗೌಡ ಪಾಟೀಲ 57, ಮೌಲಾಲಿ ಮಹ್ಮದನವರ 161, ವಿಜಯಕುಮಾರ್ ಅಪ್ಪಾಜಿ 1030, ಶಹಜಾನ ಹು ಸಾವಂತನವರ 425, ಸೂರಜ ತಂದೆ ಬಾಬುಗೌಡ 165 ಮತಗಳನ್ನು ಪಡೆದಿದ್ದಾರೆ. ನೋಟಾ 79 ಮತಗಳು.

ವಾರ್ಡ್ ನಂಬರ್ 29 ರಲ್ಲಿ (ಸಾಮಾನ್ಯ) ಪಕ್ಷೇತರ ಅಭ್ಯರ್ಥಿ ಮಂಜುನಾಥ ಬುರ್ಲಿ 2100 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಹೊರಕೇರಿ 2029 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರವಿರಾಜ ಮಲ್ಲಪ್ಪ ದಾಸನೂರ 1357 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕಾಶಿಮಸಾಬ ದರಗಾದ 131 ಮತಗಳನ್ನು ಪಡೆದಿದ್ದಾರೆ. ಪ್ರಜಾಕೀಯ ಅಭ್ಯರ್ಥಿ ನಿಂಗನಗೌಡ ಪಾಟೀಲ 45 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮುದಕಪ್ಪ ಮಲ್ಲಾರಿ 29 ಮತಗಳನ್ನು ಪಡೆದಿದ್ದಾರೆ. ಎಎಪಿ ಅಭ್ಯರ್ಥಿ ಶ್ರೀರಂಗ ಮುತಾಲಿಕ ದೇಸಾಯಿ 19 ಮತಗಳನ್ನು ಪಡೆದಿದ್ದಾರೆ. ನೋಟಾ 77 ಮತಗಳು

ವಾರ್ಡ್ ನಂಬರ್ 30ರಲ್ಲಿ (ಹಿಂ.ವರ್ಗ ‘ಎ’) ಬಿಜೆಪಿ ಅಭ್ಯರ್ಥಿ ರಾಮಪ್ಪ ಕೃಷ್ಣಪ್ಪ ಬಡಿಗೇರ 2831 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನವೀದ ಮುಲ್ಲಾ 2372 ಮತಗಳನ್ನು, ಎಎಪಿ ಅಭ್ಯರ್ಥಿ ಮಮತಾ ಅಕ್ಕಸಾಲಿ 248 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಪ್ರಶಾಂತ ಅಣವೇಕರ 405 ಮತಗಳನ್ನು ಪಡೆದಿದ್ದಾರೆ. ನೋಟಾ 75 ಮತಗಳು.

ವಾರ್ಡ್ ನಂಬರ್ 31 ರಲ್ಲಿ (ಪ.ಜಾತಿ) ಕಾಂಗ್ರೆಸ್ ಅಭ್ಯರ್ಥಿ ಶಂಕರಪ್ಪ ಕಲ್ಲಪ್ಪ ಹರಿಜನ 2761 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೆಂಕಟೇಶ 1459 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಯಲ್ಲಪ್ಪ ಕರಿಯಪ್ಪ ಹರಿಜನ 1055 ಮತಗಳನ್ನು ಪಡೆದಿದ್ದಾರೆ. ಎಎಪಿ ಅಭ್ಯರ್ಥಿ ಭೀಮಸಿಂಗ್ ಜಾಧವ 363 ಮತಗಳನ್ನು ಹಾಗೂ ಬಿಎಸ್ ಪಿ ಅಭ್ಯರ್ಥಿ ರೇಖಾ ಚಿಕ್ಕತುಂಬಳ 367 ಮತಗಳನ್ನು ಪಡೆದಿದ್ದಾರೆ. ಇತರೆ ಅಭ್ಯರ್ಥಿಗಳಾದ ಷಣ್ಮುಖ ಪಿಳ್ಳೆ 17, ಜೆಡಿಎಸ್ ಅಭ್ಯರ್ಥಿ ಸಂಜಮ್ಮ ವೆಂಕಟೇಶ ಬಳ್ಳಾರಿ 62 ಮತಗಳನ್ನು ಪಡೆದಿದ್ದಾರೆ. ನೋಟಾ 53 ಮತಗಳು.

ವಾರ್ಡ್ ನಂಬರ್ 32 ರಲ್ಲಿ (ಹಿಂ.ವರ್ಗ ‘ಎ’) ಬಿಜೆಪಿ ಅಭ್ಯರ್ಥಿ ಸತೀಶ ಸುರೇಂದ್ರ ಹಾನಗಲ್ 3862 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶೇಖರ ಕರ್ಲೆಕ್ಕನವರ 1369, ಜೆಡಿಎಸ್ ಅಭ್ಯರ್ಥಿ ವೀರೇಶ ಬಸವರಾಜ ಕುಬಸದ 205, ಎಎಪಿ ಅಭ್ಯರ್ಥಿ ಕುಮಾರ ನೂಲ್ವಿ ಸ್ವಾಮಿ 163 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಪೂಜಾ ರಮೇಶ ಬಾಕಳೆ 154, ಕುಬೇರ ಪವಾರ 63 ಮತಗಳನ್ನು ಪಡೆದಿದ್ದಾರೆ. ನೋಟಾ 84 ಮತಗಳು.

ವಾರ್ಡ್ ನಂಬರ್ 33 ರಲ್ಲಿ (ಸಾಮಾನ್ಯ) ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಎಲಿಗಾರ 4925 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮುರಿಗೆಪ್ಪಾ ಹೊರಡಿ 1778 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ನಾರಾಯಣ ಪರಶುರಾಮ ಸೋಳಂಕೆ 412 ಮತಗಳನ್ನು ಪಡೆದಿದ್ದಾರೆ. ಎಎಪಿ ಅಭ್ಯರ್ಥಿ 153 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಾμÁಸಾಬ ಅಲ್ಲಾಬಕ್ಷ ಮುದಗಲ್ 102 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ರಾಮು ಚಂದ್ರು ಕಾನಪೇಟ 69 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಅಶೋಕ ಅಸೂಟಿ 60 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಂಜುನಾಥ ಹ. ಭಜಂತ್ರಿ 37 ಮತಗಳನ್ನು ಮತ್ತು ಪಕ್ಷೇತರ ಅಭ್ಯರ್ಥಿ ಫೈರೋಜ ಅಹ್ಮದ ಧಾರವಾಡ 19 ಮತಗಳನ್ನು ಪಡೆದಿದ್ದಾರೆ. ನೋಟಾ 67 ಮತಗಳು.

ವಾರ್ಡ್ ನಂಬರ್ 34 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಮಂಗಳಾ ಗೌರಿ 3025 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಕ್ಷತಾ ರವಿಕುಮಾರ್ ರೂಗಿ 1555, ಜೆಡಿಎಸ್ ಅಭ್ಯರ್ಥಿ ಫೈರಜಾ ದಂಡೋತಿ 54, ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಕಸ್ತೂರಿ ಫಕೀರಪ್ಪ ಮುರಗೋಡ 157, ಎ.ಐ.ಎಮ್.ಐ.ಎಮ್ ಅಭ್ಯರ್ಥಿ ಬಸೀರಾಬಾನು ಪಟವೆಗಾರ 878, ಪಕ್ಷೇತರ ಅಭ್ಯರ್ಥಿ ಆತೀಯಾ ರುಕ್ಸಾನ ಜಾಗೀರದಾರ 30 ಮತಗಳನ್ನು ಪಡೆದಿದ್ದಾರೆ. ನೋಟಾ 32 ನೋಟಾ ಮತಗಳು

ವಾರ್ಡ್ ನಂಬರ್ 35 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಭೀಮಪ್ಪ ಗುಂಡೂರ 3201 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಮಹಾದೇವಪ್ಪ ಮಾಯಕಾರ 2261, ಜೆಡಿಎಸ್ ಅಭ್ಯರ್ಥಿ ಲಕ್ಷ್ಮಣ ಪ್ರೇಮ ರೋಖಾ 61, ಬಿಎಸ್‍ಪಿ ಅಭ್ಯರ್ಥಿ ಶಿವರುದ್ರಪ್ಪ ಪಾಟೀಲ 32, ಕರ್ನಾಟಕ ಜನಸೇವೆ ಪಾರ್ಟಿ ಅಭ್ಯರ್ಥಿ 24 ಹಾಗೂ ಪಕ್ಷೇತರ ಅಭ್ಯರ್ಥಿ ರಾಮಚಂದ್ರ ಮಲ್ಲೇಶ ಹದಗಲ್ 1052 ಮತಗಳನ್ನು ಪಡೆದಿದ್ದಾರೆ. ನೋಟಾ 70 ಮತಗಳು.

ವಾರ್ಡ್ ನಂಬರ್ 36 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಮೂರುಸಾವಿರಪ್ಪ ಕೊರವಿ 3891 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವೀರಭದ್ರಯ್ಯ ಹಿರೇಹಾಳ 520 ಹಾಗೂ ಎಎಪಿ ಅಭ್ಯರ್ಥಿ ಮಲ್ಲಿಕಾರ್ಜುನಯ್ಯ ಬಸಯ್ಯ ಹಿರೇಮಠ 347 ಮತಗಳನ್ನು ಪಡೆದಿದ್ದಾರೆ. ನೋಟಾ 92 ನೋಟಾ ಮತಗಳು.

ವಾರ್ಡ್ ನಂಬರ್ 37 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ಉಮೇಶಗೌಡ ಚಂದ್ರಶೇಖರಗೌಡ ಕೌಜಗೇರಿ 3163 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಭಿಮನ್ಯು ರಾಜೇಂದ್ರ ರೆಡ್ಡಿ 1188 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ತೋಟಗೇರ 282 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಿಂಗರಾಜ ಗುಡ್ಡಪ್ಪ ಕಲ್ಲಾಪೂರ 453 ಮತಗಳನ್ನು ಪಡೆದಿದ್ದಾರೆ. ನೋಟಾ 70 ಮತಗಳು.

ವಾರ್ಡ್ ನಂಬರ್ 38 ರಲ್ಲಿ (ಹಿಂ.ವರ್ಗ ‘ಎ’) ಬಿಜೆಪಿ ಅಭ್ಯರ್ಥಿ ತಿಪ್ಪಣ್ಣ ಗಿರಿಮಲ್ಲಪ್ಪ ಮಜ್ಜಗಿ 3685 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಎಎಪಿ ಅಭ್ಯರ್ಥಿ ಮಲ್ಲಪ್ಪ ತಡಸದ 582 ಮತಗಳನ್ನು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದತೌಸಿಫ ಲಕ್ಕುಂಡಿ 546 ಮತಗಳನ್ನು ಪಡೆದಿದ್ದಾರೆ. ನೋಟಾ 65 ನೋಟಾ ಮತಗಳು.

ವಾರ್ಡ್ ನಂಬರ್ 39 ರಲ್ಲಿ (ಹಿಂ.ವರ್ಗ ‘ಬಿ’ ಮಹಿಳೆ): ಬಿಜೆಪಿ ಅಭ್ಯರ್ಥಿ ಸೀಮಾ ಮೊಗಲಿಶೆಟ್ಟರ 2246 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರತ್ನಾ ಮಲ್ಲೆಶಪ್ಪಾ ಪಾಟೀಲ 1900, ಎಎಪಿ ಅಭ್ಯರ್ಥಿ ರೋಹಿನಿ ಸೋಮನಕಟ್ಟಿ 126 ಮತಗಳನ್ನು ಪಡೆದಿದ್ದಾರೆ. ನೋಟಾ 51 ಮತಗಳು.

ವಾರ್ಡ್ ನಂಬರ್ 40 ರಲ್ಲಿ (ಹಿಂ.ವರ್ಗ ‘ಎ’) ಕಾಂಗ್ರೆಸ್ ಅಭ್ಯರ್ಥಿ ಶಿವಕುಮಾರ ರಾಯನಗೌಡರ 3544 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಈಶ್ವರಗೌಡ 2873 ಮತಗಳನ್ನು ಹಾಗೂ ಜೆಡಿಎಸ್ ಅಭ್ಯರ್ಥಿ ಖಾದರಸಾಬ ಬಾನಿ 73 ಮತಗಳನ್ನು ಪಡೆದಿದ್ದಾರೆ. ನೋಟಾ 88 ಮತಗಳು.

ವಾರ್ಡ್ ನಂಬರ್ 41 ರಲ್ಲಿ (ಹಿಂ.ವರ್ಗ ‘ಬಿ’) ಬಿಜೆಪಿ ಅಭ್ಯರ್ಥಿ ಸಂತೋμï ಚವ್ಹಾಣ 1998 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಜಾಧವ್ 758 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಕಳಕರೆಡ್ಡಿ 613 ಮತಗಳನ್ನು ಪಡೆದಿದ್ದಾರೆ. ನೋಟಾ 74 ಮತಗಳು.

ವಾರ್ಡ್ ನಂಬರ್ 42 ರಲ್ಲಿ (ಪ.ಜಾತಿ) ಬಿಜೆಪಿ ಅಭ್ಯರ್ಥಿ ಮಹದೇವಪ್ಪಾ ಯಮುನಪ್ಪ ನರಗುಂದ 2067 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿಜವಾಡ ಚೈತನ್ಯ ರಜಿನಿಕಾಂತ 1152 ಮತಗಳನ್ನು ಹಾಗೂ ಜೆಡಿಎಸ್ ಅಭ್ಯರ್ಥಿ ಅರ್ಜುನ್ ದುರ್ಗಪ್ಪ ಪೂಜಾರ 256 ಮತಗಳನ್ನು ಪಡೆದಿದ್ದಾರೆ. ಎಎಪಿ ಅಭ್ಯರ್ಥಿ ಧನರಾಜ್ ಚಂದಾವರಿ 37 ಮತಗಳನ್ನು ಇತರೆ ಅಭ್ಯರ್ಥಿಗಳಾದ ಮಂಜುನಾಥ ಹುಲಗಪ್ಪ ಅದರಗುಂಚಿ 50, ಶಿವಾನಂದ ಯಲ್ಲಪ್ಪ ಕೊಣ್ಣೂರು 144, ಶ್ರೀನಿವಾಸ ತಿಮ್ಮಯ್ಯ ಟಗರ್‍ಗುಂಟಿ 272 ಮತಗಳನ್ನು ಪಡೆದಿದ್ದಾರೆ. ನೋಟಾ 57 ಮತಗಳು.

ವಾರ್ಡ್ ನಂಬರ್ 43 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ವೀರಪ್ಪ ನಾಗಪ್ಪಾ ಖಂಡೇಕಾರ 2047 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಹೂವಪ್ಪ ರಾಮಣ್ಣ ದಾಯಗೋಡಿ 1459 ಮತಗಳನ್ನು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸುನೀಲ ಮಠಪತಿ 1004 ಮತಗಳನ್ನು ಪಡೆದಿದ್ದಾರೆ. ಎಎಪಿ ಅಭ್ಯರ್ಥಿ ಮನೋಜ ಕಾಮಕರ 121 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪುನೀತಕುಮಾರ ಚಂದ್ರಶೇಖರ ಶಲವಡಿ 55 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಶಮೀರಖಾನ ಖಾನ 433 ಮತಗಳನ್ನು ಪಡೆದಿದ್ದಾರೆ. ನೋಟಾ 73 ಮತಗಳು.

ವಾರ್ಡ್ ನಂಬರ್ 44 ರಲ್ಲಿ (ಸಾ.ಮಹಿಳೆ) ಬಿಜೆಪಿ ಅಭ್ಯರ್ಥಿ ಉಮಾ ಮುಕುಂದ 2583 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ವರಿ ಖಂಡೇಕಾರ 1040 ಮತಗಳನ್ನು ಪಡೆದಿದ್ದಾರೆ. ನೋಟಾ 100 ನೋಟಾ ಮತಗಳು.

ವಾರ್ಡ್ ನಂಬರ್ 45 ರಲ್ಲಿ (ಪ.ಪಂಗಡ) ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ನಿಂಗಪ್ಪ ಕುರಹಟ್ಟಿ 2265 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಣಿಕಂಠ ಷಣ್ಮುಖ ಶ್ಯಾಗೋಟಿ 1637, ಪಕ್ಷೇತರ ಅಭ್ಯರ್ಥಿ ಮಾರುತಿ ಚಂದ್ರಶೇಖರ ಬಿಳಗಿ 1353 ಮತಗಳನ್ನು ಪಡೆದಿದ್ದಾರೆ. ನೋಟಾ 81 ಮತಗಳು.

ವಾರ್ಡ್ ನಂಬರ್ 46 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ವೀರಣ್ಣ ಸವಡಿ 3054 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಭು ಸೌದತ್ತಿ 1331 ಮತಗಳನ್ನು ಹಾಗೂ ಎಎಪಿ ಅಭ್ಯರ್ಥಿ ದೀಪಿಕಾ ಭಂಡಾರಿ ಮುತ್ತಾ 176 ಮತಗಳನ್ನು ಪಡೆದಿದ್ದಾರೆ. ನೋಟಾ 128 ಮತಗಳು.

ವಾರ್ಡ್ ನಂಬರ್ 47 ರಲ್ಲಿ (ಸಾ.ಮಹಿಳೆ) ಬಿಜೆಪಿ ಅಭ್ಯರ್ಥಿ ರೂಪಾ ಶೆಟ್ಟಿ 1754 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಕ್ಷ್ಮೀ ಲಕ್ಷ್ಮಣ ಉಪ್ಪಾರ 1147, ಜೇಬಾ ಕೌಸರ್ ಕುಸನೂರ 93 ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೇಘನಾ ಹಿರೇಮಠ 968 ಮತಗಳನ್ನು ಪಡೆದಿದ್ದಾರೆ. ನೋಟಾ 54 ಮತಗಳಾಗಿವೆ.

ವಾರ್ಡ್ ನಂಬರ್ 48 ರಲ್ಲಿ (ಸಾಮಾನ್ಯ) ಪಕ್ಷೇತರ ಅಭ್ಯರ್ಥಿ ಕಿಶನ್ ಬೆಳಗಾವಿ 2203 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಾಲತೇಶ ಗುಡೇನಕಟ್ಟಿ 315, ಬಿಜೆಪಿ ಅಭ್ಯರ್ಥಿ ರವಿರಾಜ ಕೊಡ್ಲಿ 2063 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಅಣ್ಣಪ್ಪ ಸುರೇಶ ದೊಡ್ಡಮನಿ 64, ಗದಗಯ್ಯ ಗುರುಪಾದಯ್ಯ ಹಿರೇಮಠ 91, ಶ್ರೀಕಾಂತರೆಡ್ಡಿ ಬೋಗಲೆ 96 ಹಾಗೂ ನೋಟಾ 58 ಮತಗಳು.

ವಾರ್ಡ್ ನಂಬರ್ 49 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಬಿಜೆಪಿ ಅಭ್ಯರ್ಥಿ ವೀಣಾ ಚೇತನ ಬರದ್ವಾಡ 3576 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಅನ್ನಪೂರ್ಣ ಮಡಿವಾಳರ 598 ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ವರಿ ಮೆಹರವಾಡೆ 519 ಮತಗಳನ್ನು ಪಡೆದಿದ್ದಾರೆ. ನೋಟಾ 120 ನೋಟಾ ಮತಗಳು.

ವಾರ್ಡ್ ನಂಬರ್ 50 ರಲ್ಲಿ (ಸಾ.ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಮಂಗಳಮ್ಮಾ ಹಿರೇಮನಿ 1740 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುಶಪ್ಪನವರ 1475, ಜೆಡಿಎಸ್ ಅಭ್ಯರ್ಥಿ ಮಂಜುಳಾ ಯಾತಗೇರಿ 1135, ಎಎಪಿ ಅಭ್ಯರ್ಥಿ ಸವಿತಾ ಎಸ್. ಸಾವಂತವಾಡಿ 114 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಮಂಜುಳಾ ದುದಾಳಕರ 185, ಲಕ್ಷ್ಮೀ ಬಾರಕೇರ 303, ಸುಸೀಲಾ ಯಮನೂರಪ್ಪ ಗುಡಿಹಾಳ 242 ಹಾಗೂ ಹೇಮಾವತಿ ಎಸ್. ತಿಪ್ಪರಾಜು 116 ಮತಗಳನ್ನು ಪಡೆದಿದ್ದಾರೆ. ನೋಟಾ 73 ಮತಗಳು.

ವಾರ್ಡ್ ನಂಬರ್ 51 ರಲ್ಲಿ (ಹಿಂ.ವರ್ಗ ‘ಎ’) ಕಾಂಗ್ರೆಸ್ ಅಭ್ಯರ್ಥಿ ಸಂದಿಲ್ ಕುಮಾರ ಎಸ್. 1251 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೃμÁ್ಣ ಮಲ್ಲೆಶಪ್ಪಾ ಗಂಡಗಾಳೆಕರ 1243, ಜೆಡಿಎಸ್ ಅಭ್ಯರ್ಥಿ ರಾಜು ನಾಯಕವಾಡಿ 64, ಎಎಪಿ ಅಭ್ಯರ್ಥಿ ನಂದಾ ಪವಾಡಿ 55, ಬಿಎಸ್‍ಪಿ ಅಭ್ಯರ್ಥಿ ರಸೂಲಸಾಬ ಯಲಿಗಾರ 194 ಹಾಗೂ ಪಕ್ಷೇತರ ಅಭ್ಯರ್ಥಿ ಸಂತೋಷ ಸಂಪಗಾವಿ 812 ಮತಗಳನ್ನು ಪಡೆದಿದ್ದಾರೆ. ನೋಟಾ 50 ಮತಗಳು.

ವಾರ್ಡ್ ನಂಬರ್ 52 ರಲ್ಲಿ (ಸಾಮಾನ್ಯ) ಪಕ್ಷೇತರ ಅಭ್ಯರ್ಥಿ ಚೇತನ ಸಹದೇವ ಹಿರೇಕೆರೂರ 1732 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಉಮೇಶ ದುಶಿ 1419, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕ್ಯಾರಕಟ್ಟಿ 1109, ಪಕ್ಷೇತರ ಅಭ್ಯರ್ಥಿ ಸಂತೋಷ ಆರ್ ಉರ್ಫ ಶೆಟ್ಟಿ 371, ಎಎಪಿ ಅಭ್ಯರ್ಥಿ ಶಾರದಾ ಬಡಿಗೇರ್ 115, ಜೆಡಿಎಸ್ ಅಭ್ಯರ್ಥಿ ರಾಮಚಂದ್ರಾ ಹಬೀಬ 54, ಪಕ್ಷೇತರ ಅಭ್ಯರ್ಥಿ ಹುಸನಪ್ಪ ವಜ್ಜಣ್ಣವರ 25 ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಮಹಾಂತೇಶ ಗಂ ಕಮತಗಿ 10 ಮತಗಳನ್ನು ಪಡೆದಿದ್ದಾರೆ. ನೋಟಾ 67 ಮತಗಳು.

ವಾರ್ಡ್ ನಂಬರ್ 53 ರಲ್ಲಿ (ಹಿಂ.ವರ್ಗ ‘ಎ’) ಕಾಂಗ್ರೆಸ್ ಅಭ್ಯರ್ಥಿ ಮಹ್ಮದ ಇಸ್ಮಾಯಿಲ ಭದ್ರಾಪುರ 2148 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮುಕುಂದಗೌಡ ವೀರಭದ್ರಗೌಡ ಗುಗ್ರಿ 1388, ಪಕ್ಷೇತರ ಅಭ್ಯರ್ಥಿ ವಿಜಯಕುಮಾರ ಅಮರೇಶ ಹಾವರಗಿ 605, ಬಹುಜನ ಸಮಾಜ ಅಭ್ಯರ್ಥಿ ನಿಸಾರ ಅಹ್ಮದ ಮುಲ್ಲಾ 216, ಜೆಡಿಎಸ್ ಅಭ್ಯರ್ಥಿ ತುಳಸಿಕಾಂತ ಖೋಡೆ 133, ಪಕ್ಷೇತರ ಅಭ್ಯರ್ಥಿ ರಮೇಶ ದೀವಟಗಿ 107, ಎಎಪಿ ಅಭ್ಯರ್ಥಿ ಮೋಹನ ಪಾಟೀಲ 48, ಪ್ರಜಾಕೀಯ ಅಭ್ಯರ್ಥಿ ದೀಪಕ ಗುಣಾಸಾ ಲದ್ವಾ 23, ಪಕ್ಷೇತರ ಅಭ್ಯರ್ಥಿ ಉದಯಕುಮಾರ ಅಂಬಿಗೇರ 20 ಮತಗಳನ್ನು ಪಡೆದಿದ್ದಾರೆ. ನೋಟಾ 49 ಮತಗಳು.

ವಾರ್ಡ್ ನಂಬರ್ 54 ರಲ್ಲಿ (ಸಾ. ಮಹಿಳೆ) ಬಿಜೆಪಿ ಅಭ್ಯರ್ಥಿ ಸರಸ್ವತಿ ಧೋಂಗಡಿ 1895 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪರವೀನ ರಾಜೇಸಾಬ ಕಟ್ಟಿಮನಿ 1175, ಕಾಂಗ್ರೆಸ್ ಅಭ್ಯರ್ಥಿ ಮಮತಾ ದಾಬಡೆ 1155, ಪಕ್ಷೇತರ ಅಭ್ಯರ್ಥಿ ಯಶೋಧಾ ಲಕ್ಷ್ಮಣ ಗಂಡಗಾಳೇಕರ 982, ಶ್ಯಾಮಲಾ ಸುರೇಶ ಶೇಠ 416, ಕಸ್ತೂರಿಬಾಯಿ ಮಾಮರಡ್ಡಿ 53, ಮಹಾದೇವಿ ಗಿರಿಯಪ್ಪ ಕಿರೇಸೂರ 120, ಎಎಪಿ ಅಭ್ಯರ್ಥಿ ಆರತಿ ನರಗುಂದ 181, ಶಿವಸೇನೆ ಅಭ್ಯರ್ಥಿ ಕಾಂಚನಾ ಸಿಂಧೋಗಿ 5 ಮತಗಳನ್ನು ಪಡೆದಿದ್ದಾರೆ. ನೋಟಾ 72 ಮತಗಳು.

ವಾರ್ಡ್ ನಂಬರ್ 55 ರಲ್ಲಿ (ಸಾಮಾನ್ಯ) ಕಾಂಗ್ರೆಸ್ ಅಭ್ಯರ್ಥಿ ಮಹ್ಮದ ಇಕಬಾಲ್ ನವಲೂರ 3288 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪಾಂಡುರಂಗ ವೆಂಕನಗೌಡ ಪಾಟೀಲ 2523, ಜೆಡಿಎಸ್ ಅಭ್ಯರ್ಥಿ ಶಂಕರ ಪವಾರ 133, ಎಎಪಿ ಅಭ್ಯರ್ಥಿ ನಾರಾಯಣ ಮೊರಬ 164, ಪಕ್ಷೇತರ ಅಭ್ಯರ್ಥಿ ಸಿದ್ಧಾರೂಡ ಪ್ಯಾಟಿಶೆಟ್ಟರ 244 ಮತಗಳನ್ನು ಪಡೆದಿದ್ದಾರೆ. ನೋಟಾ 31 ಮತಗಳು.

ವಾರ್ಡ್ ನಂಬರ್ 56 ರಲ್ಲಿ (ಪ.ಜಾ. ಮಹಿಳೆ) ಪಕ್ಷೇತರ ಅಭ್ಯರ್ಥಿ ಚಂದ್ರಿಕಾ ಮೇಸ್ತ್ರಿ 3116 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಎ.ಐ.ಎಮ.ಐ.ಎಮ ಅಭ್ಯರ್ಥಿ ಉಮಾ ಕನಮಕ್ಕಲ 1078, ಕಾಂಗ್ರೆಸ್ ಅಭ್ಯರ್ಥಿ ಅಮ್ರಪಾಲಿ ಎಸ್. 477, ಬಿಜೆಪಿ ಅಭ್ಯರ್ಥಿ ಶೋಭಾ ಅಂಕಲಕೋಟಿ 1209, ಪಕ್ಷೇತರ ಅಭ್ಯರ್ಥಿ ನೇಹಾ ಬೆಲ್ದೋಣಿ 310, ಬಹುಜನ ಸಮಾಜ ಅಭ್ಯರ್ಥಿ ಅನಿತಾ ಹನಮಂತ ಯಮನಾಳ 158, ಜೆಡಿಎಸ್ ಅಭ್ಯರ್ಥಿ ದೀಪಾ ಪೂಜಾರ 26, ಎಎಪಿ ಅಭ್ಯರ್ಥಿ ಪೆದ್ದಕ್ಕ ಹುಬ್ಬಳ್ಳಿ 37 ಮತಗಳನ್ನು ಪಡೆದಿದ್ದಾರೆ. ನೋಟಾ 2 ಮತಗಳು.

ವಾರ್ಡ್ ನಂಬರ್ 57 ರಲ್ಲಿ (ಸಾ.ಮಹಿಳೆ) ಬಿಜೆಪಿ ಅಭ್ಯರ್ಥಿ ಮೀನಾಕ್ಷಿ ವಂಟಮುರಿ 2032 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸರಸ್ವತಿ ಕುಲಕರ್ಣಿ 1507 ಮತಗಳನ್ನು ಪಡೆದಿದ್ದಾರೆ. ನೋಟಾ 75 ಮತಗಳು.

ವಾರ್ಡ್ ನಂಬರ್ 58 ರಲ್ಲಿ (ಪ.ಜಾತಿ) ಕಾಂಗ್ರೆಸ್ ಅಭ್ಯರ್ಥಿ ಶೃತಿ ಚಲವಾದಿ 3305 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಂದ್ರ ಕೌತಾಳ 2635 ಮತಗಳನ್ನು ಪಡೆದಿದ್ದಾರೆ. ನೋಟಾ 127 ಮತಗಳು.

ವಾರ್ಡ್ ನಂಬರ್ 59 ರಲ್ಲಿ (ಸಾ.ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಸುವರ್ಣಾ ಕಲ್ಲಕುಂಟಲಾ 2566 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜನತಾದಳ ಅಭ್ಯರ್ಥಿ ಮೇಲಂ ಸಲೋಮಿ 125 ಮತಗಳನ್ನು, ಬಿಜೆಪಿ ಅಭ್ಯರ್ಥಿ ಶ್ವೇತಾ ವಿ. ರಾಯನಗೌಡರ 1264 ಮತಗಳನ್ನು, ಎಎಪಿ ಅಭ್ಯರ್ಥಿ ಸ್ವರ್ಣಾಕುಮಾರಿ ಲುಂಜಲ 187 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಕೊರಪಾಟಿ ರುಬಿ 385 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಸುಧಾ ಮನ್ನೆಕುಂಟ್ಲಾ 1265 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಸ್ವಾತಿ ಕಲ್ಲಕುಂಟಲಾ 241 ಮತಗಳನ್ನು ಪಡೆದಿದ್ದಾರೆ. ನೋಟಾ 39 ಮತಗಳು.

ವಾರ್ಡ್ ನಂಬರ್ 60 ರಲ್ಲಿ (ಸಾ.ಮಹಿಳೆ) ಬಿಜೆಪಿ ಅಭ್ಯರ್ಥಿ ರಾಧಾಬಾಯಿ ಸಪಾರೆ 2194 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೌಸರಬಾನು ಗುಡಮಾಲ 2062 ಮತಗಳನ್ನು, ಪಕ್ಷೇತರ ಅಭ್ಯರ್ಥಿ ತನುಶಾ ಕ್ವಾಟಿ 285 ಮತಗಳನ್ನು, ಎಎಪಿ ಅಭ್ಯರ್ಥಿ ಲಕ್ಷ್ಮೀಬಾಯಿ ಹಳಪೇಟಿ 99 ಮತಗಳನ್ನು ಹಾಗೂ ಜನತಾದಳ ಅಭ್ಯರ್ಥಿ ನಫಿಸ್ ಫಾತೀಮಾ ಹೆಬ್ಬಳ್ಳಿ 549 ಮತಗಳನ್ನು ಪಡೆದಿದ್ದಾರೆ. ನೋಟಾ 46 ಮತಗಳು.

ವಾರ್ಡ್ ನಂಬರ್ 61 ರಲ್ಲಿ (ಪ.ಜಾತಿ) ಕಾಂಗ್ರೆಸ್ ಅಭ್ಯರ್ಥಿ ದೊರಾಜ್ ಮನ್ನೆಕುಂಟ್ಲ 1801 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅನೂಪಕುಮಾರ ಬಿಜಾವಾಡ 957 ಮತಗಳನ್ನು, ಬಹುಜನ ಪಾರ್ಟಿ ಅಭ್ಯರ್ಥಿ ವಿಜಯಕುಮಾರ ಎ. ಕರ್ರಾ 283, ಜೆಡಿಎಸ್ ಅಭ್ಯರ್ಥಿ ಶ್ರೀಕಾಂತ ಶಂಕರ ತೇಲಗಾರ 1141, ಎಐಎಂಐಎಂ ಅಭ್ಯರ್ಥಿ ರಾಜೇಶ್ ಬಸವರಾಜ 1410, ಎಎಪಿ ಅಭ್ಯರ್ಥಿ ವಿಕ್ಕಿ ಆಶಿಶ ಎಗ್ಗೋನಿ 98, ಪಕ್ಷೇತರ ಅಭ್ಯರ್ಥಿ ಶಂಕರಪ್ಪ ಅಜಮನಿ 68 ಮತಗಳು. ನೋಟಾ 39 ಮತಗಳು.

ವಾರ್ಡ್ ನಂಬರ್ 62 ರಲ್ಲಿ (ಸಾ.ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಸರತಾಜ ಅದವಾನಿ 5019 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಭಾರತಿ ಯಲ್ಕಾನ 1060, ಪಕ್ಷೇತರ ಅಭ್ಯರ್ಥಿ ಹೇಮಲತಾ ಶಿವಮಠ 151 ಮತಗಳನ್ನು ಪಡೆದಿದ್ದಾರೆ. ನೋಟಾ 40 ಮತಗಳು.

ವಾರ್ಡ್ ನಂಬರ್ 63 ರಲ್ಲಿ (ಹಿಂ.ವರ್ಗ ಎ) ಕಾಂಗ್ರೆಸ್ ಅಭ್ಯರ್ಥಿ ಮೊಹ್ಮದ ಇಲಿಯಾಸ ಮನಿಯಾರ 2440 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಲ್ಲಪ್ಪ ಶಿರಕೋಳ 1631 ಮತಗಳನ್ನು, ಎಐಎಮ್‍ಐಎಮ್ ಅಭ್ಯರ್ಥಿ ಆಸೀಪ್ ಇಕ್ಬಾಲ್ ಬಳ್ಳಾರಿ 1591 ಮತಗಳನ್ನು, ಎಎಪಿ ಅಭ್ಯರ್ಥಿ ಬಾಬುಸಾಬ ಶೇಖ 36 ಮತಗಳನ್ನು ಪಡೆದಿದ್ದಾರೆ. ನೋಟಾ 27 ಮತಗಳು.

ವಾರ್ಡ್ ನಂಬರ್ 64 ರಲ್ಲಿ (ಸಾ.ಮಹಿಳೆ) ಬಿಜೆಪಿ ಅಭ್ಯರ್ಥಿ ಪೂಜಾ ಶೇಜವಾಡೆಕರ 2064 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜನತಾದಳ ಅಭ್ಯರ್ಥಿ ನಸಿಮ್ಮಾ ಮಂಚಿಕೊಪ್ಪ 972 ಮತಗಳನ್ನು, ಕಾಂಗ್ರೆಸ್ ಅಭ್ಯರ್ಥಿ ಸುರೇಖಾ ಕುಲಕರ್ಣಿ 1536 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಖುರ್ಷಿದಾಬಾನು ಶೇಖ 100 ಮತಗಳನ್ನು ಪಡೆದಿದ್ದಾರೆ. ನೋಟಾ 35 ಮತಗಳು.

ವಾರ್ಡ್ ನಂಬರ್ 65 ರಲ್ಲಿ (ಸಾ.ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಸುನೀತಾ ಬುರಬುರೆ 3282 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜನತಾದಳ ಅಭ್ಯರ್ಥಿ ರಾಜಶ್ರೀ ಗಣಪತಸಾ ದಾನಿ 31 ಮತಗಳನ್ನು, ಬಿಜೆಪಿ ಅಭ್ಯರ್ಥಿ ಸುನೀತಾ 2000 ಮತಗಳನ್ನು, ಪಕ್ಷೇತರ ಅಭ್ಯರ್ಥಿ ತ್ರಿವೇಣಿ ಮ ಶಿಂಧೆ 96 ಮತಗಳನ್ನು ಪಡೆದಿದ್ದಾರೆ. ನೋಟಾ 57 ಮತಗಳು.

ವಾರ್ಡ್ ನಂಬರ್ 66 ರಲ್ಲಿ (ಸಾ.ಮಹಿಳೆ) ಬಿಜೆಪಿ ಅಭ್ಯರ್ಥಿ ಪ್ರೀತಿ ದೇವೆಂದ್ರಸಾ ಖೋಡೆ 2575 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶ್ವಿನಿ ಮೆಹರವಾಡೆ 1551 ಮತಗಳನ್ನು, ಪಕ್ಷೇತರ ಅಭ್ಯರ್ಥಿ ದ್ರಾಕ್ಷಾಯಿಣಿ ಕಡಕೋಳ 47 ಮತಗಳನ್ನು, ಪಕ್ಷೇತರ ಅಭ್ಯರ್ಥಿ ರುಬಿನಾ ಅಕ್ಷಾ ಪಟ್ಟೆವಾಲೆ 157 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ರೇಖಾ ಮುತ್ತಗಿ 649 ಮತಗಳನ್ನು ಪಡೆದಿದ್ದಾರೆ. ನೋಟಾ 43 ಮತಗಳು.

ವಾರ್ಡ್ ನಂಬರ್ 67 ರಲ್ಲಿ (ಸಾಮಾನ್ಯ) ಬಿಜೆಪಿ ಅಭ್ಯರ್ಥಿ ಶಿವಾನಂದ ಮೆಣಸಿನಕಾಯಿ 2623 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರೋಹಿತ ದುಂಡರೆಡ್ಡಿ 1986 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಇರಣ್ಣಗೌಡ ಪಕ್ಕಿರಗೌಡ ಪಾಟೀಲ 47 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಅಬೀಬ್ ಅಹ್ಮದ್ ಬ್ಯಾಹಟ್ಟಿ 564, ಎಎಪಿ ಅಭ್ಯರ್ಥಿ ರವಿ ಬಸವರಾಜ ಅರಳಿಕಟ್ಟಿ 38, ಪಕ್ಷೇತರ ಅಭ್ಯರ್ಥಿ ರುಕ್ಮಿಣಿ ಚೆನ್ನಪ್ಪ ಬಳಗನವರ 24 ಮತಗಳನ್ನು ಪಡೆದಿದ್ದಾರೆ. ನೋಟಾ 47 ಮತಗಳು.

ವಾರ್ಡ್ ನಂಬರ್ 68 ರಲ್ಲಿ (ಸಾಮಾನ್ಯ) ಕಾಂಗ್ರೆಸ್ ಅಭ್ಯರ್ಥಿ ನಿರಂಜನಯ್ಯ ಹಿರೇಮಠ 3057 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಭುರಾಜ ನವಲಗುಂದಮಠ 1535, ಜೆಡಿಎಸ್ ಅಭ್ಯರ್ಥಿ ಕುಮಾರೇಶ್ವರ ಹೊಂಗಲ 268, ಎಎಪಿ ಅಭ್ಯರ್ಥಿ ಮಹ್ಮಮದ್ ಗೌಸ್ ಮಂಚನಕೊಪ್ಪ 14 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಮಂಜುನಾಥ ಲೂತಿಮಠ 156 ಹಾಗೂ ಸುನೀಲ ಮರಾಠಿ 54 ಮತಗಳನ್ನು ಪಡೆದಿದ್ದಾರೆ. ನೋಟಾ 59 ಮತಗಳು.

ವಾರ್ಡ್ ನಂಬರ್ 69 ರಲ್ಲಿ (ಪ.ಜಾ.ಮಹಿಳೆ) ಪಕ್ಷೇತರ ಅಭ್ಯರ್ಥಿಯಾದ ದುರ್ಗಮ್ಮ ಶಶಿಕಾಂತ ಬಿಜವಾಡ 2302 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಮಲಾ ಶ್ರೀನಿವಾಸ ಬೆಳದಡಿ 1880, ಪಕ್ಷೇತರ ಅಭ್ಯರ್ಥಿ ಲಕ್ಷ್ಮೀ ವಿಜಯ ಗುಂಟ್ರಾಳ 1504, ಬಿಜೆಪಿ ಅಭ್ಯರ್ಥಿ ಅನುಷಾ ಜಾಧವ 1001, ಜೆಡಿಎಸ್ ಅಭ್ಯರ್ಥಿ ನಿಜಮ್ಮ ಗಬ್ಬೂರ 73 ಮತಗಳನ್ನು ಪಡೆದಿದ್ದಾರೆ. ನೋಟಾ 78 ಮತಗಳು.

ವಾರ್ಡ್ ನಂಬರ್ 70 ರಲ್ಲಿ (ಹಿಂ.ವರ್ಗ ‘ಬಿ’ ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಗೀತಾ ಹೊಸಮನಿ 4487 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಾಂತಾ ಬಸವರಾಜ ಚನ್ನೋಜಿ 1405, ಎಎಪಿ ಅಭ್ಯರ್ಥಿ ಲತಾ ಕೊಯಿಲೋ 146 ಮತಗಳನ್ನು ಪಡೆದಿದ್ದಾರೆ. ನೋಟಾ 86 ಮತಗಳು.

ವಾರ್ಡ್ ನಂಬರ್ 71 ರಲ್ಲಿ (ಸಾಮಾನ್ಯ) ಎಐಎಂಐಎಂ ಅಭ್ಯರ್ಥಿ ನಜೀರ ಹೊನ್ಯಾಳ 3042 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ ಅಹ್ಮದ ಹಳ್ಳೂರ 1348, ಬಿಜೆಪಿ ಅಭ್ಯರ್ಥಿ ಜಗನ್ನಾಥ ಪವಾರ 260, ಜೆಡಿಎಸ್ ಅಭ್ಯರ್ಥಿ ಸಯ್ಯದ ಜಪ್ರುಲ್ಲಾ ಧಾರವಾಡ 381, ಎಎಪಿ ಅಭ್ಯರ್ಥಿ ಫಯಾಜ್ ಅಹ್ಮದ ಸೌದಾಗರ 78 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಗಣೇಶ ತಿಮ್ಮಯ್ಯಾ ಟಗರಗುಂಟಿ 1965, ಸಮೀರ ಅಹ್ಮದ ಯುಸಫ ಅಹ್ಮದ ಬೆಟಗೇರಿ 175, ಅಹ್ಮದಸಾಬ್ ಯಾದಗಿರಿ 29 ಮತ್ತು ಚಲವಾದಿ ಹನುಮಂತಪ್ಪ 64 ಮತಗಳನ್ನು ಪಡೆದಿದ್ದಾರೆ. ನೋಟಾ 39 ಮತಗಳು.

ವಾರ್ಡ್ ನಂಬರ್ 72 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಬಿಜೆಪಿ ಅಭ್ಯರ್ಥಿ ಸುಮಿತ್ರಾ ಶಿವಾನಂದ ಗುಂಜಾಳ 2372 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಫರೀದಾಬಾನು ಮಹಮ್ಮದಜಾಫರ್ ಮಾರಕರ 1583, ಎಎಪಿ ಅಭ್ಯರ್ಥಿ ಪರವೀನಬಾನು ಹಸನಸಾಬ ಇನಾಮದಾರ 53, ಪಕ್ಷೇತರ ಅಭ್ಯರ್ಥಿಗಳಾದ ಖುರ್ಷಿದಬಾನು ಅಹ್ಮದಸಾಬ ಯಾದಗಿರಿ 1524, ರಾಬಿಯಾಬೇಗಂ ಅಬ್ಹುಲಸತ್ತರ ಅಮಟೂರ 251 ಮತಗಳನ್ನು ಪಡೆದಿದ್ದಾರೆ. ನೋಟಾ 47 ಮತಗಳು.

ವಾರ್ಡ್ ನಂಬರ್ 73 ರಲ್ಲಿ (ಸಾ.ಮಹಿಳೆ) ಬಿಜೆಪಿ ಅಭ್ಯರ್ಥಿ ಶೀಲಾ ಮಂಜುನಾಥ ಕಾಟಕರ 2555 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶೋಭಾ ದಶರಥ ವಾಲಿ 2356, ಜೆಡಿಎಸ್ ಅಭ್ಯರ್ಥಿ ರತ್ನಮಾಲಾ ರಘುನಾಥ ಸೊನಾವಣೆ 102 ಮತಗಳನ್ನು ಪಡೆದಿದ್ದಾರೆ. ನೋಟಾ 63 ಮತಗಳು.

ವಾರ್ಡ್ ನಂಬರ್ 74 ರಲ್ಲಿ (ಸಾ.ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಬೀಬಿ ಮರಿಯಮ್ಮಾ ಸೈಯದಸಲೀಮ ಮುಲ್ಲಾ 3911 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹೊನ್ನವ್ವ ಲಕ್ಷ್ಮಣ ಅರಕೇರಿ 1931, ಜೆಡಿಎಸ್ ಅಭ್ಯರ್ಥಿ ಹಜರಾಂಬಿ ಬುಡ್ಡೇಸಾಬ ಬೇಟಗೇರಿ 51, ಬಿಎಸ್‍ಪಿ ಅಭ್ಯರ್ಥಿ ಮುನಿರಾ ಖಾಜಾಸಾಬ ಖತೀಬ 43, ಎಎಪಿ ಅಭ್ಯರ್ಥಿ ಹೇಮಾ ಧರ್ಮರಾಜ ಸಾತಪತಿ 303, ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಅನಿತಾ ರವಿರಾಜ ಹುಟಗಿ 143, ಚೇತನಾ ದೇವೇಂದ್ರ ಲಿಂಗಧಾಳ 333 ಹಾಗೂ ವಾಸಂತಿ ದುರ್ಗೇಶ ಹೊಸಮನಿ 23 ಮತಗಳನ್ನು ಪಡೆದಿದ್ದಾರೆ. ನೋಟಾ 62 ಮತಗಳು.

ವಾರ್ಡ್ ನಂಬರ್ 75 ರಲ್ಲಿ (ಸಾ.ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಮನಸೂರಾ ಮುಸ್ತಾಕ ಅಹ್ಮದ ಮುದಗಲ 1405 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಭಾವನಾ ಮೂರಸಾವಿರಪ್ಪಾ ಚೆನ್ನಿ 880, ಜೆಡಿಎಸ್ ಅಭ್ಯರ್ಥಿ ಶೋಭಾ ಕದರೆಪ್ಪ ಪಾಲವೈ 349, ಎಎಪಿ ಅಭ್ಯರ್ಥಿ ಬಸವರಾಜೇಶ್ವರಿ ಜಗದೀಶ ಬುಗಡಿ 274, ಎಸ್‍ಡಿಪಿಐ ಅಭ್ಯರ್ಥಿ ಸಯಿದಾ ಇಸ್ಮಾಯಿಲ್ ನಾಲಬಂದ 460 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಕವಿತಾ ಪ್ರಕಾಶ ಬನ್ನಿಗೋಳ 274, ಗೀತಾ ಎಸ್. ಬದ್ದಿ 28, ನೇತ್ರಾವತಿ ಸಿದ್ದಪ್ಪಾ ಘೋಡಕೆ 85, ಬೀಬಿಆಯಿಶ್ಯಾ ಮುಕ್ತುಮಹುಸೇನ ಯರಗಟ್ಟಿ 671 ಮತ್ತು ಶೋಭಾ ಮಲ್ಲಿಕಾರ್ಜುನ ಕಾಮತರ 197 ಮತಗಳನ್ನು ಪಡೆದಿದ್ದಾರೆ. ನೋಟಾ 37 ಮತಗಳು.

ವಾರ್ಡ್ ನಂಬರ್ 76 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಎಐಎಮ್‍ಐಎಮ್ ಅಭ್ಯರ್ಥಿ ವಹೀದಾಖಾನಂ ಅಲ್ಲಾಭಕ್ಷ ಕಿತ್ತೂರ 3646 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುಧಾ ಗುರುನಾಥರಾವ ದಾಮೋದರ 544, ಕಾಂಗ್ರೆಸ್ ಅಭ್ಯರ್ಥಿ ಸಾಹೀರಾಬಾನು ಅಲ್ತಾಫ ನವಾಜ ಕಿತ್ತೂರ 1524 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಇರ್ಶಾದ ಫಾತಿಮಾ ಮುಕ್ತಿಯಾರ ಅಹ್ಮದ ಖತೀಬ 329, ಫಾತೀಮಾ ಮಹಮ್ಮದ ರಫೀಕ ಕಲಬುರ್ಗಿ 106, ಮತ್ತು ರಜಿಯಾಬೇಗಂ ಶಬ್ಬೀರ ಶೆರೆಗಾರ 73 ಮತಗಳನ್ನು ಪಡೆದಿದ್ದಾರೆ. ನೋಟಾ 38 ಮತಗಳು.

ವಾರ್ಡ್ ನಂಬರ್ 77 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಎಐಎಮ್‍ಐಎಮ್ ಅಭ್ಯರ್ಥಿ ಹುಸೇನ್ ಬಿ ಇರ್ಫಾನ್ ನಾಲ್ವತವಾಡ 2671 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬತುಲ ಮಹ್ಮದಹಾಷಮ ಕಿಲ್ಲೇದಾರ 2253, ಬಿಜೆಪಿ ಅಭ್ಯರ್ಥಿ ಸ್ವಾಲೇಹಾಬೇಗಂ ಮಹಮ್ಮದ ಝಕ್ರಿಯಾ ಹೊಸೂರ 246, ಜೆಡಿಎಸ್ ಅಭ್ಯರ್ಥಿ ಮುಬೀನಾ ಸಲೀಮ ಕುಡಚಿ 38 ಮತಗಳನ್ನು ಪಡೆದಿದ್ದಾರೆ. ನೋಟಾ 39 ಮತಗಳು.

ವಾರ್ಡ್ ನಂಬರ್ 78 ರಲ್ಲಿ (ಸಾ.ಮಹಿಳೆ) ಕಾಂಗ್ರೇಸ್ ಅಭ್ಯರ್ಥಿ ಶಿವಗಂಗಾ ಮಾನಶೆಟ್ಟರ 3661 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸ್ನೇಹಾ ಹಂಜಿ 2027 ಮತಗಳು ಹಾಗೂ ಎಎಪಿ ಅಭ್ಯರ್ಥಿ ಸೌಮ್ಯ ಪವಾರ 161 ಮತಗಳನ್ನು ಪಡೆದಿದ್ದಾರೆ. ನೋಟಾ 82 ನೋಟಾ ಮತಗಳು.

ವಾರ್ಡ್ ನಂಬರ್ 79 ರಲ್ಲಿ (ಹಿಂ.ವರ್ಗ ‘ಎ’ ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಪಮೀದಾ ಕಾರಡಿಗಿ 1567 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಎಐಎಮಐಎಮ ಅಭ್ಯರ್ಥಿ ಸಲ್ಮಾ ಮುಲ್ಲಾ 687 ಮತಗಳು, ಪಕ್ಷೇತರ ಅಭ್ಯರ್ಥಿ ತಾಹೇರಾ ಮುಧೋಳ 468 ಮತಗಳು, ಶೋಶಲ ಡೆಮಾಕ್ರಟಿಕ್ ಆಫ್ ಇಂಡಿಯಾ ಅಭ್ಯರ್ಥಿ ವಾಹೀದಾ ಜಮಖಂಡಿ 443 ಮತಗಳು, ಬಿಜೆಪಿ ಅಭ್ಯರ್ಥಿ ನಾಗವೇಣಿ ದೇವೇಂದ್ರರಾವ್ ಟಿಕಾರೆ 276 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿ ಶಮಾ ಮನಿಯಾರ 240 ಮತಗಳನ್ನು ಪಡೆದಿದ್ದಾರೆ. ನೋಟಾ 20 ಮತಗಳು.

ವಾರ್ಡ್ ನಂಬರ್ 80 ರಲ್ಲಿ (ಸಾ.ಮಹಿಳೆ) ಬಿಜೆಪಿ ಅಭ್ಯರ್ಥಿ ಶಾಂತಾ ಹಿರೇಮಠ 2790 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಲ್ಲಮ್ಮಾ ಮಾ ಪಲ್ಲಾಟೆ 2096 ಮತಗಳನ್ನು ಪಡೆದಿದ್ದಾರೆ. ನೋಟಾ 52 ಮತಗಳು.

ವಾರ್ಡ್ ನಂಬರ್ 81 ರಲ್ಲಿ (ಪ.ಜಾತಿ ಮಹಿಳೆ) ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ಜಾಧವ 3225 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಎಐಎಮ್‍ಐಎಮ ಅಭ್ಯರ್ಥಿ ಪದ್ಮಾವತಿ ಬಳ್ಳಾರಿ 1056 ಮತಗಳು, ಪಕ್ಷೇತರ ಅಭ್ಯರ್ಥಿ ಮೋಹನಾಂಬ ಗುಡಿಹಾಳ 966 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ ಸಾರಿಕಾ ಬೀಜವಾಡ 605 ಮತಗಳನ್ನು ಪಡೆದಿದ್ದಾರೆ. ನೋಟಾ 69 ಮತಗಳು.

ವಾರ್ಡ್ ನಂಬರ್ 82 ರಲ್ಲಿ (ಸಾ.ಮಹಿಳೆ) ಪಕ್ಷೇತರ ಅಭ್ಯರ್ಥಿ ಅಕ್ಷತಾ ಅಸುಂಡಿ 2498 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಪಾಟೀಲ 1430 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ ಶಾಂತಾ ಹೊನ್ನಪ್ಪ ಕೊಗೋಡ 1380 ಮತಗಳನ್ನು ಪಡೆದಿದ್ದಾರೆ. ನೋಟಾ 48 ಮತಗಳು.


Spread the love

Leave a Reply

Your email address will not be published. Required fields are marked *

You may have missed