ರಾಜ್ಯದಲ್ಲೂ-ಧಾರವಾಡದಲ್ಲೂ ಕೊರೋನಾ ಸಂಖ್ಯೆ ಗಣನೀಯ ಇಳಿಮುಖ..!

ಬೆಂಗಳೂರು: ರಾಜ್ಯದಲ್ಲಿಂದು ಕೊರೋನಾ ಪಾಸಿಟಿವ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದು, 35297 ಪ್ರಕರಣಗಳು ಪತ್ತೆಯಾಗಿದ್ದು, 34057 ಸೋಂಕಿತರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇಂದು 344 ಸೋಂಕಿತರು ಸಾವಿಗೀಡಾಗಿದ್ದು, ಬೆಂಗಳೂರವೊಂದರಲ್ಲೇ 161 ಸೋಂಕಿತರು ಪ್ರಾಣವನ್ನ ಕಳೆದುಕೊಂಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಹೊಸಾಗಿ 737 ಪ್ರಕರಣಗಳು ಪತ್ತೆಯಾಗಿದ್ದು, 857 ಸೋಂಕಿತರು ಗುಣಮುಖರಾಗಿದ್ದಾರೆ.
ಪ್ರತಿ ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಕೊರೋನಾ ಬಂದರೂ ಅದನ್ನ ಧೈರ್ಯದಿಂದ ಎದುರಿಸುವ ಗುಣವನ್ನ ಹೊಂದಿರಬೇಕಾದ ಅವಶ್ಯಕತೆಯಿದೆ.