ರಾಜ್ಯದಲ್ಲಿ ದಾಖಲೆಯ 48296 ಕೊರೋನಾ ಕೇಸ್: ಧಾರವಾಡದಲ್ಲಿ 703 ಪಾಸಿಟಿವ್..!

ಬೆಂಗಳೂರು: ರಾಜ್ಯದಲ್ಲಿಂದು ಬೆಚ್ಚಿ ಬೀಳಿಸುವ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಂದೇ ದಿನ ದಾಖಲೆಯ 48296 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 217 ಸೋಂಕಿತರು ಕೊರೋನಾದಿಂದ ಪ್ರಾಣವನ್ನ ಕಳೆದುಕೊಂಡಿದ್ದಾರೆ.

ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆಯಾಗಿದ್ದು, ಬೆಂಗಳೂರೊಂದರಲ್ಲೇ 26756 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 21637 ಸೋಂಕಿತರು ಗುಣಮುಖರಾಗಿದ್ದಾರೆಂದು ಮಾಹಿತಿ ನೀಡಲಾಗಿದೆ.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಕೊರೋನಾ ತನ್ನ ಅಟ್ಟಹಾಸವನ್ನ ಮೆರೆಯುತ್ತಿದ್ದು ಧಾರವಾಡ ಜಿಲ್ಲೆಯಲ್ಲಿಯೂ ದಾಖಲೆಯ 703 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಏಳು ಸೋಂಕಿತರು ಪ್ರಾಣವನ್ನ ಕಳೆದುಕೊಂಡಿದ್ದಾರೆ.