ರಾಜ್ಯದಲ್ಲಿ ಮತ್ತೆ ಮೀತಿಮೀರಿದ ಕೊರೋನಾ: ಬೆಂಗಳೂರಲ್ಲಿ 4324, ಧಾರವಾಡದಲ್ಲಿ 48…!

ಬೆಂಗಳೂರು: ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರೂ ಕೂಡಾ, ಹೆಚ್ಚಳ ಮಾತ್ರ ಕಡಿಮೆಯಾಗುತ್ತಿಲ್ಲ. ಇಂದು ಕೂಡಾ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿವೆ.
ಇಂದು ರಾಜ್ಯದಲ್ಲಿ ಒಟ್ಟು 5031 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾದಿಂದ ಒಬ್ಬರು ಸಾವಿಗೀಡಾಗಿದ್ದು, ಅನ್ಯ ಕಾರಣಕ್ಕೆ 29 ಜನರು ಸಾವಿಗೀಡಾಗಿದ್ದಾರೆ.
ಪ್ರತಿ ಜಿಲ್ಲಾವಾರು ವಿವರ ಇಲ್ಲಿದೆ ನೋಡಿ…

ಧಾರವಾಡ ಜಿಲ್ಲೆಯಲ್ಲಿ ಒಂದೇ ದಿನಕ್ಕೆ 48 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 171 ಕೊರೋನಾ ಪ್ರಕರಣಗಳು ಜಿಲ್ಲೆಯಲ್ಲಿ ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಕೋವಿಡ್ ಅಲ್ಲದ ಅನ್ಯ ಕಾರಣಕ್ಕೆ 2 ಸಾವಿಗೀಡಾಗಿದ್ದಾರೆ.