ಹುಬ್ಬಳ್ಳಿ-ಧಾರವಾಡದಲ್ಲಿ 9 ಪೊಲೀಸ್ ಇನ್ಸಪೆಕ್ಟರ್- 150ಕ್ಕೂ ಪೊಲೀಸರಿಗೆ ಕೊರೋನಾ ಪಾಸಿಟಿವ್….!

ಹುಬ್ಬಳ್ಳಿ: ಅವಳಿನಗರದ ಪೊಲೀಸರನ್ನ ಕೊರೋನಾ ಕಾಡುತ್ತಿದ್ದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ 9 ಇನ್ಸಪೆಕ್ಟರ್ ಗಳಿಗೆ ಕೊರೋನಾ ಪಾಸಿಟಿವ್ ಆಗಿದೆ.
ಕೊರೋನಾ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸಮಯದಲ್ಲಿಯೇ ಅವಳಿನಗರದ ಪೊಲೀಸರನ್ನ ಅತಿಯಾಗಿ ಕೊರೋನಾ ಕಾಡುತ್ತಿದೆ. ಪೊಲೀಸ್ ಕಮೀಷನರೇಟಿನ್ 9 ಪೊಲೀಸ್ ಇನ್ಸಪೆಕ್ಟರ್ ಗಳಿಗೆ ಪಾಸಿಟಿವ್ ಬಂದಿದೆ. ಅಷ್ಟೇ ಅಲ್ಲ, 150ಕ್ಕೂ ಹೆಚ್ಚು ಪೊಲೀಸರಿಗೆ ಕೊರೋನಾ ಬಂದಿದೆ.

ನಗರದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳು ಮನೆಯಲ್ಲಿಯೇ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಯಾರೊಬ್ಬರಿಗೂ ತೀವ್ರವಾದ ಅನಾರೋಗ್ಯವಾಗಿಲ್ಲವೆಂದು ಗೊತ್ತಾಗಿದೆ.
ಪ್ರತಿದಿನವೂ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಮಾಹಿತಿಯನ್ನ ಪಡೆಯುತ್ತಿದ್ದಾರೆ. ನೇರವಾಗಿ ಮಾತನಾಡಿಯೂ ಧೈರ್ಯವನ್ನ ತುಂಬುತ್ತಿದ್ದಾರೆ.