ರಾಜ್ಯದಲ್ಲಿಂದು 7810 ಕೊರೋನಾ ಪಾಸಿಟಿವ್ ಪ್ರಕರಣ: 18648 ಸೋಂಕಿತರು ಗುಣಮುಖ…!

ಬೆಂಗಳೂರು: ರಾಜ್ಯದಲ್ಲಿಂದು 7810 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 18648 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 125 ಸೋಂಕಿತರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದು, ವಿವಿಧ ಜಿಲ್ಲೆಯ ವಿವರ ಇಲ್ಲಿದೆ ನೋಡಿ..

ಧಾರವಾಡ ಜಿಲ್ಲೆಯಲ್ಲಿ 148 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 430 ಸೋಂಕಿತರು ಗುಣಮುಖರಾಗಿದ್ದು, 9 ಸೋಂಕಿತರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.