Posts Slider

Karnataka Voice

Latest Kannada News

ಏನ್ ಬೇಕಾದ್ದ್ ಹೇಳ್ರೀ- ಇವರ್ ಮಾತ್ರ ಹಿಂಗ್ ಇರೂದ್: “ಅದರ” ಬಾಲಾ ಸೀದಾ ಅಕ್ಕೇತೇನ್ರೀ…!

1 min read
Spread the love

ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲೇ ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಆದರೆ, ಕೆಲವರು ಮಾತ್ರ ನಿಯಮ ಬೇರೆಯವರಿಗೆ ಹೊರತಾಗಿ ತಮಗಲ್ಲ ಎನ್ನುವಂತೆ ನಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಅವಳಿನಗರದಲ್ಲಿ ಪ್ರತಿದಿನವೂ ನೂರಾರೂ ಕೊರೋನಾ ಪ್ರಕರಣಗಳು ಹೊಸದಾಗಿ ಸೇರ್ಪಡೆಯಾಗುತ್ತಿವೆ. ಅದೇ ಕಾರಣಕ್ಕೆ ಜಿಲ್ಲಾಡಳಿತ ಶಿಸ್ತುಬದ್ಧ ಜೀವನ ನಡೆಸುವಂತೆ ಪ್ರತಿ ಕ್ಷಣವೂ ಕೋರಿಕೊಳ್ಳುತ್ತಿದ್ದಾರೆ. ಆದರೆ, ಜನರು ಮಾರುಕಟ್ಟೆಗೆ ಜಾತ್ರೆಯಂತೆ ಬರುತ್ತಿರುವುದು ಕಂಡು ಬರುತ್ತಿದೆ.

ಇಂದು ಹುಬ್ಬಳ್ಳಿಯ ವಿವಿಧ ಭಾಗಗಳಲ್ಲಿ ತೆರೆದ ಮಾರುಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಸಾಮಾಜಿಕ ಅಂತರವೆಂಬ ಶಬ್ಧ ಇಲ್ಲಿ ಯಾರಿಗೂ ಅನ್ವಯಿಸುತ್ತಿರಲಿಲ್ಲ. ತಾವೂ ನಡೆದದ್ದೇ ದಾರಿ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ.

ಕೊರೋನಾ ಪ್ರಕರಣಗಳು ಕಡಿಮೆಯಾಗಬೇಕಾದರೇ ಸಾರ್ವಜನಿಕರ ಸಹಕಾರ ಬಹಳಷ್ಟು ಅವಶ್ತಕತೆಯಿದೆ. ಇದನ್ನ ಅರ್ಥ ಮಾಡಿಕೊಂಡರೆ ಮಾತ್ರ ಜಿಲ್ಲಾಡಳಿತಕ್ಕೆ ಅನುಕೂಲ. ಇಲ್ಲದಿದ್ದರೇ, ಲಾಕ್ ಡೌನ್ ಮುಂದೆ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.


Spread the love

Leave a Reply

Your email address will not be published. Required fields are marked *