ಹುಬ್ಬಳ್ಳಿ ರಿಲಾಯನ್ಸ್ ಮಾರ್ಟ್ ಕಾನೂನು ಪಾಲನೆ ಮಾಡಬೇಕಿಲ್ವಾ…!
1 min readಹುಬ್ಬಳ್ಳಿ: ಕುಸುಗಲ್ ರಸ್ತೆಯ ಮಧುರಾ ಕಾಲನಿಯ ಬಳಿಯಿರುವ ರಿಲಾಯನ್ಸ್ ಮಾರ್ಟ್ ಧಾರವಾಡ ಜಿಲ್ಲಾಡಳಿತ ನೀಡಿರುವ ಎಚ್ಚರಿಕೆಯನ್ನೂ ಮೀರಿ ಕಾರ್ಯನಿರ್ವಹಿಸುತ್ತಿದ್ದು, ಗುರುವಾರ ಇಳಿಸಂಜೆ ಕಂಡು ಬಂದಿದೆ.
ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಯಾವುದೇ ಥರದ ಶಾಂಪಿಂಗ್ ಕ್ಲಾಂಪೆಕ್ಸ್ ಹಾಗೂ ವಾಣಿಜ್ಯ ಮಳಿಗೆಯನ್ನ ತೆಗೆದು ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ.
ಬೆಳಿಗ್ಗೆ 6ರಿಂದ 10ಗಂಟೆಯೊಳಗೆ ಮಾತ್ರ ವ್ಯಾಪಾರ ವಹಿವಾಟು ಮಾಡಬೇಕೆಂದು ಜಿಲ್ಲಾಡಳಿತ ಆದೇಶ ಮಾಡಿದೆ. ಆದರೆ, ರಿಲಾಯನ್ಸ್ ಮಾರ್ಟ್ ಕದ್ದು ವ್ಯಾಪಾರವನ್ನ ಆರಂಭಿಸಿದ್ದು, ಪೊಲೀಸರು ಅದ್ಯಾವ ಕ್ರಮವನ್ನ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.