ರಾಜ್ಯದ ಏಕೈಕ ಕೊರೋನಾ ಮುಕ್ತ ಜಿಲ್ಲೆಯಲ್ಲೂ ಜನಜೀವನ ನಾರ್ಮಲ್

ಚಾಮರಾಜನಗರ: ಕೇಂದ್ರ ಸರಕಾರದ ಆದೇಶದಂತೆ ಕರ್ಫ್ಯೂ ರದ್ದು ಹಿನ್ನಲೆಯಲ್ಲಿ ರಾಜ್ಯದ ಏಕೈಕ ಕೊರೋನಾ ಮುಕ್ತ ಜಿಲ್ಲೆಯಲ್ಲಿ ಎಂದಿನಂತೆ ಜನ ಜೀವನ ಸಾಗಿದೆ.
ಸಾಮಾನ್ಯ ದಿನಗಳಂತೆ ನಿತ್ಯದ ಕೆಲಸ ಕಾರ್ಯಗಳಿಗೆ ಜನ ಹೊರಗಡೆ ಬರುತ್ತಿದ್ದಾರೆ. ಭಾನುವಾರವಾದ್ದರಿಂದ ಅಂಗಡಿ ಮುಂಗಟ್ಟುಗಳ ಓಪನ್ ವಿರಳವಾಗಿವೆ. ಎಲ್ಲ ಮಾದರಿಯ ವಾಹನ ಸಂಚಾರ ಮುಕ್ತ, ಎಂದಿನಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ಸಂಚರಿಸುತ್ತಿರುವ ಕೆಎಸ್ ಆರ್ ಟಿಸಿ ಬಸ್. ಅಂತರ ಜಿಲ್ಲಾ, ಅಂತರ ರಾಜ್ಯಗಡಿಗಳಲ್ಲಿ ಮುಂದುವರಿದ ಕಟ್ಟೆಚ್ಚರ. ಗ್ರೀನ್ ಜೋನ್ ಜಿಲ್ಲೆಗೆ ಯಾವುದೇ ಸಂದರ್ಭದಲ್ಲಿ ಸೋಕು ಬರಬಹುದೆಂಬ ಭೀತಿಯಲ್ಲಿರುವ ಗಡಿ ಜನತೆ. ಜಿಲ್ಲೆಯನ್ನ ಎವರ್ ಗ್ರೀನ್ ಆಗಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಿಂದ ಹೊರಬಾರದ ಪ್ರಜ್ಞಾವಂತ ನಾಗರಿಕರು.