ಗ್ರಾಮೀಣ ಶಿಕ್ಷಕರ ಮನವಿಗೆ ಕಣ್ಣು ತೆರೆದ ಕೇಂದ್ರ ಸರಕಾರ…!
1 min readಹುಬ್ಬಳ್ಳಿ: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ ಕೊರೋನಾ ವಾರಿಯರ್ ಎಂದು ಗುರುತಿಸುವಂತೆ ಹಾಗೂ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನ ಕೊರೋನಾ ವಾರಿಯರ್ ಯೋಜನೆಯಲ್ಲಿ ಸೇರಿಸಬೇಕೆಂಬ ಬೇಡಿಕೆಯನ್ನ ಕೇಂದ್ರ ಸರಕಾರ ಒಪ್ಪಿಕೊಂಡಿದ್ದನ್ನ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ವಾಗತಿಸಿದೆ.
ಮುಂಬರುವ ದಿನದಲ್ಲಿ ಶಿಕ್ಷಕರನ್ನೂ ಈ ಯೋಜನೆಯಲ್ಲಿ ಸೇರಿಸುವಂತೆ ಬೇಡಿಕೆಯನ್ನ ಮುಂದುವರೆಸಲಾಗುವುದು. ಅಷ್ಟೇ ಅಲ್ಲ, ಶಿಕ್ಷಕರನ್ನ ಕೊರೋನಾ ವಾರಿಯರ್ ಎಂದು ಘೋಷಣೆ ಮಾಡುವವರೆಗೆ ವಿಶ್ರಮಿಸುವುದಿಲ್ಲವೆಂದು ಕ.ಸ.ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ, ಪ್ರ.ಮಲ್ಲಿಕಾರ್ಜುನ ಉಪ್ಪಿನ, ಮಹಾ ಪೋಷಕ ಪವಾಡೆಪ್ಪ ಕಾಂಬಳೆ, ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ, ಕಾರ್ಯಾಧ್ಯಕ್ಷ ಶರಣಪ್ಪಗೌಡ್ರ ಆರ್.ಕೆ, ಕೋಶಾಧ್ಯಕ್ಷ ಎಸ್.ಎಫ್.ಪಾಟೀಲ ಹೇಳಿದ್ದಾರೆ.
ರಾಜ್ಯದ ಎಲ್ಲ ಶಿಕ್ಷಕರನ್ನೂ ಕೊರೋನಾ ವಾರಿಯರ್ಸ ಎಂದು ಪರಿಗಣಿಸಲು ಸರಕಾರ ಮುಂದಾಗಬೇಕು. ಹಲವು ಶಿಕ್ಷಕ ಕುಟುಂಬಗಳು ಕೊರೋನಾದಿಂದ ನರಳುತ್ತಿವೆ. ಕೊರೋನಾ ಸಮಯದಲ್ಲಿ ಶಿಕ್ಷಕರು ನಿರಂತರವಾಗಿ ಸೇವೆ ಮಾಡುತ್ತಲೇ ಬಂದಿದ್ದಾರೆಂದು ಸಂಘ ಹೇಳಿದೆ.