Karnataka Voice

Latest Kannada News

ಕೊರೋನಾ ವೈರಸ್ ಇಲ್ವೇ ಇಲ್ವಂತೆ…! ಲಕ್ಷಣಗಳೇ ಇಲ್ಲದಿದ್ದರೂ ಬರ್ತವಂತೆ ಪಾಸಿಟಿವ್ ರಿಸಲ್ಟ್… ವೈಧ್ಯರೇ ಹೊರ ಹಾಕಿದ ಭಯಾನಕ ಸತ್ಯ…?

Spread the love

ರಾಯಚೂರು: ಗ್ರಾಮ ಪಂಚಾಯತಿಯ ವ್ಯಕ್ತಿಯೊಂದಿಗೆ ವೈದ್ಯರೋರ್ವರು ಮಾತನಾಡಿರುವರೆನ್ನಲಾದ ಆಡೀಯೋ ತುಣುಕೊಂದು ಹರಿದಾಡುತ್ತಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಿಂಧನೂರು ಬಳಿಯ ಬಸಾಪುರ ಗ್ರಾಮದ ಕ್ವಾರಂಟೈನ್ ವ್ಯಕ್ತಿಗಳನ್ನ ಬಿಡುವ ಮುನ್ನ ಮಾತನಾಡಿರುವ ಆಡೀಯೋ ಇದಾಗಿರಬಹುದೆನ್ನಲಾಗಿದೆ. ಇಲ್ಲಿ ವೈಧ್ಯರೆಂದು ಮಾತನಾಡುವವರು ಅಚ್ಚರಿ ವಿಷಯಗಳನ್ನ ಹೇಳಿದ್ದಾರೆ. ಆ ಧ್ವನಿಯಲ್ಲಿ ಇರೋ ಪ್ರಕಾರ “ಕೊರೋನಾ ವೈರಸ್ ಇಲ್ಲವೇ ಇಲ್ಲಾ. ನನ್ನದು ಓಪನ್ ಚಾಲೆಂಜ್ ಇದೆ. ಈಗಾಗಲೇ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಕೊರೋನಾ ಬಂದಿದೆ. ಹತ್ತು ದಿನ ಟ್ರಿಟ್ಮ್‌ಮೆಂಟ್ ತುಗೊಂಡು ಮನೆಗೆ ಹೋಗಬಹುದು. ಯಾರಿಗೂ ಕೊರೋನಾ ಬಂದಿಲ್ಲ. ಈಗ ಕೊರೋನಾದ ಹೆಸರಿನಲ್ಲಿ ಜನ ಸಾವನ್ನಪ್ಪಿದ್ದಾರಷ್ಟೇ. ಈ ಹಿಂದೆ ಜನರು ಸಾಯುತ್ತಿರಲಿಲ್ಲವೇ. ಇಲ್‌ನೆಸ್, ದಮ್ಮು ರೋಗದಿಂದ ಸತ್ತಿದ್ದಾರೆ. ಅದನ್ನೇಲ್ಲ ಇದ್ಕೆ ಅಂದ್ರೇ ಹೇಗೆ. ಸಿಂಧನೂರಲ್ಲಿ ಐದು ಕೊಲೆಯಾದವಲ್ಲಾ… ಅವರಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದ್ರೇ..! ಅದನ್ನ ಕೊರೋನಾದಿಂದ ಸಾವು ಅಂತಿದ್ವಾ.. ಎಂದು ಪ್ರಶ್ನಿಸಿದ್ದಾರೆ.

ಈ ಆಡೀಯೋದ ಬಗ್ಗೆ ನಿಖರವಾದ ಸ್ಪಷ್ಟತೆಯನ್ನ ಜಿಲ್ಲಾಡಳಿತ ನೀಡಬೇಕಿದೆ.


Spread the love

Leave a Reply

Your email address will not be published. Required fields are marked *