ಕೊರೋನಾ ಲಸಿಕೆಬೆಲೆ ₹ 250 ಮಾತ್ರ..!

ನವದೆಹಲಿ: ಕೊರೋನಾ ಲಸಿಕೆಗೆ 250 ರೂ. ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಒಂದು ಡೋಸ್ ಕೊರೋನಾ ವ್ಯಾಕ್ಸಿನ್ ಗೆ 250 ರೂಪಾಯಿ ದರ ನಿಗದಿಪಡಿಸಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು. ಮಾರ್ಚ್ 1 ರಿಂದಲೇ ಖಾಸಗಿ ಆಸ್ಪತ್ರೆಗಳಲ್ಲಿಯೂ ವ್ಯಾಕ್ಸಿನ್ ಲಭ್ಯವಿರುತ್ತದೆ. ಒಂದು ಡೋಸ್ ಕೊರೋನಾ ಲಸಿಕೆಗೆ 250 ರೂ. ನಿಗದಿ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.
ಕೊರೋನಾ ಮತ್ತೆ ಹೆಚ್ಚುತ್ತಿದೆ ಎಂಬ ಆತಂಕದಲ್ಲಿದ್ದ ಜನರಿಗೆ ಇದರಿಂದ ತೂಸು ನೆಮ್ಮದಿ ದೊರಕಲಿದ್ದು, ಸಾರ್ವಜನಿಕ ಸ್ಥಳದಲ್ಲಿ ಈಗಲೂ ನಿಯಮಗಳನ್ನ ಪಾಲನೆ ಮಾಡಬೇಕಿರುವುದು ಎಲ್ಲರ ಕರ್ತವ್ಯವಾಗಿದೆ.
ಕೊರೋನಾ ಲಸಿಕೆಗಳು ಜನಸಾಮಾನ್ಯರಿಗೆ ಯಾವಾಗ ಸಿಗುತ್ತವೆ ಎಂಬ ಪ್ರಶ್ನೆಗೆ ಈ ಮೂಲಕ ಉತ್ತರ ಸಿಕ್ಕಿದ್ದು, ಇನ್ನೂ ಮುಂದೆ ಕೊರೋನಾ ವಾಕ್ಸಿನ್ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲೂ ದೊರಕಲಿದೆ.