ಮೂರೇ ಜಿಲ್ಲೆಯಲ್ಲಿ 499 ಪಾಸಿಟಿವ್ ಕೇಸ್: 12 ಜನ ಸೋಂಕಿತ ಸಾವು
ಬೆಂಗಳೂರು: ರಾಜ್ಯದ ಬಳ್ಳಾರಿ, ಉಡುಪಿ ಮತ್ತು ಬೀದರ ಜಿಲ್ಲೆಯಲ್ಲಿಂದು ಬರೋಬ್ಬರಿ 499 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 12 ಜನ ಸೋಂಕಿತರು ಸಾವಿಗೀಡಾಗಿದ್ದಾರೆ.
ಬಳ್ಳಾರಿ ಜಿಲ್ಲೆಯೊಂದರಲ್ಲೇ 275 ಪ್ರಕರಣಗಳು ಪತ್ತೆಯಾಗಿವೆ. ಬಳ್ಳಾರಿ ನಗರದಲ್ಲೇ 104 ಪ್ರಕರಣಗಳು ಪತ್ತೆಯಾಗಿವೆ. ಸೊಂಡೂರು 29, ಸೊಂಡೂರಲ್ಲಿ 18, ಸಿರಗುಪ್ಪದಲ್ಲಿ 06, ಕೂಡ್ಲಗಿಯಲ್ಲಿ 15, ಹೊಸಪೇಟೆಯಲ್ಲಿ 89, ಹಗರಿಬೊಮ್ಮನಹಳ್ಳಿಯಲ್ಲು 11 ಹಾಗೂ ಹರಪನಹಳ್ಳಿಯಲ್ಲಿ 03 ಕೇಸ್‌ಗಳು ಪತ್ತೆಯಾಗಿವೆ. ಇಬ್ಬರು ಮೃತಪಟ್ಟಿದ್ದಾರೆ.
ಉಡುಪಿ ಮಾಹಿತಿ
ಉಡುಪಿ ಜಿಲ್ಲೆಯಲ್ಲಿ ಇಂದು 136 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ವರೆಗೆ ಒಟ್ಟು 4492 ಪ್ರಕರಣ ದಾಖಲಾಗಿವೆ.
ಕಳೆದ ಎರಡು ದಿನಗಳಲ್ಲಿ 6 ಮಂದಿ ಸಾವಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಪ್ರಕರಣ 35ಕ್ಕೇರಿದೆ.
ಸಧ್ಯ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣ 1811ಗಳಿದ್ದು, ಜಿಲ್ಲೆಯಲ್ಲಿ ಇನ್ನೂ 446 ವರದಿ ಬರಲು ಬಾಕಿಯಿವೆ.
ಇಂದು 124 ಮಂದಿ ಬಿಡುಗಡೆಯಾಗಿದ್ದು, ಈ ವರೆಗೆ 2646 ಮಂದಿ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬೀದರ ಮಾಹಿತಿ
ಗಡಿ ಜಿಲ್ಲೆ ಬೀದರ್‌ನಲ್ಲಿ ಇಂದು ಒಂದೇ ದಿನದಲ್ಲಿ 88 ಕೋರೋನಾ ಕೇಸ್ ಪತ್ತೆಯಾಗಿವೆ. ಇಲ್ಲಿಯವರೆಗೆ ಜಿಲ್ಲೆಯ ಒಟ್ಟು ಸಂಖ್ಯೆ 2263ಕ್ಕೇರಿದೆ.
ಔರಾದ ತಾಲೂಕಿನಲ್ಲಿ 15, ಬಸವಕಲ್ಯಾಣ 11, ಭಾಲ್ಕಿ 04, ಬೀದರ 50, ಹುಮನಾಬಾದ 06 ಪತ್ತೆಯಾಗಿವೆ. ಇಂದು ಆಸ್ಪತ್ರೆಯಿಂದ 61 ಜನ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದವರ ಸಂಖ್ಯೆ 1544 ಕ್ಕೇರಿದೆ. ಇಂದು ಕೊರೋನಾದಿಂದ ನಾಲ್ಕು ಸಾವಿಗೀಡಾಗಿದ್ದು ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 75 ರಿಂದ 79 ಕ್ಕೇರಿಕೆಯಾಗಿದೆ.