ರಾಜ್ಯದಲ್ಲಿಂದು 5072 ಪಾಸಿಟಿವ್ 70 ಸಾವು: ರಾಜಧಾನಿಯಲ್ಲೇ 30 ಜನರು ಕೊರೋನಾಗೆ ಬಲಿ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಇಂದು ರಾಜ್ಯಾದ್ಯಂತ 5072 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 70 ಜನರು ಕೊರೋನಾಗೆ ಬಲಿಯಾಗಿದ್ದಾರೆ.
ರಾಜ್ಯದ ಒಟ್ಟು ಪಾಸಿಟಿವ್ ಪ್ರಕರಣಗಳ ಪೈಕಿ 2036 ಬೆಂಗಳೂರಲ್ಲೇ ಪತ್ತೆಯಾಗಿವೆ. ಮೂವತ್ತು ಜನರು ರಾಜಧಾನಿಯಲ್ಲಿ ತೀರಿಕೊಂಡಿದ್ದಾರೆ.
ರಾಜ್ಯದಲ್ಲಿ ಇಲ್ಲಿಯವರೆಗೆ 90942 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದು 2403 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.