ರಾಜ್ಯದಲ್ಲಿಂದು 4169 ದಾಖಲೆ ಕೊರೋನಾ ಪಾಸಿಟಿವ್ ಪತ್ತೆ: 104 ಜನ ಸಾವು
ಬೆಂಗಳೂರು: ರಾಜ್ಯದಲ್ಲಿ ನಿರಂತರವಾಗಿ ಕೊರೋನಾ ವೈರಸ್ ದಾಂಗುಡಿಯಿಡುತ್ತಿದೆ. ರಾಜ್ಯದಲ್ಲಿಂದು ಕೊರೋನಾಗೆ 104 ಜನ ಬಲಿಯಾಗಿದ್ದು, 4169 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಇವತ್ತಿನ ಮಾಹಿತಿಯ ಮೇರೆಗೆ ಬೆಂಗಳೂರವೊಂದರಲ್ಲೇ 2344 ಪ್ರಕರಣಗಳು ಪತ್ತೆಯಾಗಿದ್ದು, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೂರರ ಗಡಿಯನ್ನ ದಾಟಿದೆ.
ರಾಜ್ಯದ ಕೊರೋನಾ ಪಾಸಿಟಿವ್ ಸಂಖ್ಯೆ ಅರ್ಧ ಲಕ್ಷ ಮೀರಿದ್ದು, ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ.