ರಾಜ್ಯದಲ್ಲಿ ಇಂದು 73 ಸಾವು: 2738 ಪಾಸಿಟಿವ್: ಬೆಂಗಳೂರಲ್ಲಿ 1315 ಕೇಸ್
ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 2738 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜಧಾನಿ ಬೆಂಗಳೂರು ಒಂದರಲ್ಲೇ 1315 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಕೊರೋನಾ ಪಾಸಿಟಿವ್‌ದಿಂದ ರಾಜ್ಯಾಧ್ಯಂತ 73 ಜನರು ತೀರಿಕೊಂಡಿದ್ದು, ಬೆಂಗಳೂರಲ್ಲೇ 47 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈಗಾಗಲೇ ರಾಜಧಾನಿಯಲ್ಲಿ ಲಾಕ್‌ಡೌನ್ ಇನ್ನೇನು ಕೆಲವೇ ಗಂಟೆಗಳಲ್ಲಿ ಜಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮ ಬೀಳತ್ತೆ ನೋಡಬೇಕಿದೆ.