ಒಂದೇ ದಿನ ಮೂವರು ಶಿಕ್ಷಕರು ಕೊರೋನಾಗೆ ಬಲಿ…!
1 min readಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಶಿಕ್ಷಕ ಸಮೂಹವೂ ತಲ್ಲಣಗೊಂಡಿದೆ. ಸೋಮವಾರ ಒಂದೇ ದಿನ ಮೂವರು ಶಿಕ್ಷಕರು ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದು, ಶಿಕ್ಷಕ ವಲಯ ತೀವ್ರ ಆಘಾತಕ್ಕೆ ಒಳಗಾಗಿದೆ.
ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಭಾರಿ ಪಿಇಎಸ್ಐ ಆಗಿದ್ದ ಮಜಲಟ್ಟಿ ಪ್ರೌಢಶಾಲೆಯ ಶಿಕ್ಷಕ ಬಿ.ಎಸ್.ಶೇವಲೆ ತೀವ್ರ ಥರದ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾಗಿ ಎಲ್ಲರೊಂದಿಗೆ ಬೆರೆಯುತ್ತಲೇ ಶೈಕ್ಷಣಿಕವಾಗಿ ಮುನ್ನಡೆಯಬೇಕೆಂಬ ಕನಸು ಕಾಣುತ್ತಿದ್ದರು. ಅಷ್ಟೇ ಅಲ್ಲ, ಅದೇ ಥರನಾಗಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.
ಬೆಂಗಳೂರಿನ ಅರಳುಮಲ್ಲಿಗೆ ಸರಕಾರಿ ಪ್ರೌಢಶಾಲೆಯ ಶಿಕ್ಷಕ ನಾಗರಾಜು ಅವರು ಕೊರೋನಾದಿಂದ ಸಾವಿಗೀಡಾಗಿದ್ದಾರೆ. ನಿರಂತರವಾಗಿ ಶಿಕ್ಷಕ ವಲಯದೊಂದಿಗೆ ಗುರುತಿಸಿಕೊಂಡಿದ್ದ ನಾಗರಾಜು ಅವರ ಸಾವು, ಶಿಕ್ಷಕರಲ್ಲಿ ಅತೀವ ಬೇಸರ ಮೂಡಿಸಿದೆ.
ಬೆಂಗಳೂರಿನ ಮುರುಗೇಶಪಾಳ್ಯ ಪ್ರದೇಶದ ಸರಕಾರಿ ಶಾಲೆಯ ಶಿಕ್ಷಕಿ ಮೀನಾ ಎಂಬುವವರು ಕೂಡಾ ಕೊರೋನಾದಿಂದ ಪಾಸಿಟಿವ್ ದಿಂದ ಬಳಲಿ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಒಂದೇ ದಿನದಲ್ಲಿ ಮೂವರು ಶಿಕ್ಷಕರು ಕೊರೋನಾಗೆ ಬಲಿಯಾಗಿರುವುದು ಶಿಕ್ಷಕ ಸಮೂಹದ ನಿದ್ದೆಗೆಡಿಸಿದೆ. ಸಾಧ್ಯವಾದಷ್ಟು ಎಚ್ಚರಿಕೆಯಿಂದ ಮತ್ತು ಕೊರೋನಾ ಬರದಂತೆ ಮುಂಜಾಗ್ರತೆ ಕ್ರಮಗಳನ್ನ ತೆಗೆದುಕೊಂಡು ನಮ್ಮನ್ನ ನಾವೂ ಉಳಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂಬುದನ್ನ ಶಿಕ್ಷಕ ಸಮೂಹ ಪಾಲಿಸಬೇಕಿದೆ.