ಬೆಡ್ ಸಿಗದೇ ಕೊರೋನಾದಿಂದ ಶಿಕ್ಷಕಿ ಸಾವು- ಸಿಎಂ ತವರಲ್ಲೇ ಹೀಗಾದ್ರೇ..!
ಶಿವಮೊಗ್ಗ: ಕೊರೋನಾ ಪಾಸಿಟಿವ್ ಪ್ರಕರಣಗಳು ಗ್ರಾಮ ಗ್ರಾಮಕ್ಕೂ ಹಬ್ಬುತ್ತಿರುವುದು ಮತ್ತೂ ಸಮುದಾದೊಳಗೆ ಹರಡಿ ಜನರ ಜೀವನವನ್ನ ಏರುಪೇರು ಮಾಡುತ್ತಿರುವುದು ನಿಮಗೆ ಗೊತ್ತೆಯಿದೆ. ಆದರೆ, ಸರಕಾರಿ ಶಾಲೆಯ ಶಿಕ್ಷಕಿಗೆ ಬೆಡ್ ಯಿಲ್ಲದ ಕಾರಣದಿಂದ ತಡವಾಗಿ ಚಿಕಿತ್ಸೆ ಪಡೆದ ಕಾರಣ ಕೊರೋನಾ ಪಾಸಿಟಿವನಿಂದ ಶಿಕ್ಷಕಿ ತೀರಿಕೊಂಡ ಘಟನೆ ಸಿಎಂ ಯಡಿಯೂರಪ್ಪ ತವರು ಜಿಲ್ಲೆಯಲ್ಲಿ ನಡೆದಿರುವುದು ವಿಷಾದನೀಯ.
ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆರಗ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಅನುಸೂಯ ಎಂಬುವವರೇ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಶಿಕ್ಷಕಿಯಾಗಿದ್ದಾರೆ.
ಕೊರೋನ ಪಾಸಿಟಿವ್ ದ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಲು ತೆರಳಿದ ಅನಸೂಯಾರವರಿಗೆ ಅಲ್ಲಿ ಬೆಡ್ ಸಿಗದ ಹಿನ್ನೆಲೆ ಸುಬ್ಬಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮೊದಲೇ ರಕ್ತದೊತ್ತಡದಿಂದ ನರಳುತ್ತಿದ್ದ ಅನಸೂಯರವರು ಕೊರೋನ ಧೃಡಪಟ್ಟಿದ್ದನ್ನು ತಿಳಿದೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶಿಕ್ಷಕರು ವಿದ್ಯಾಗಮ ಯೋಜನೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡ ನಂತರ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಸರಕಾರ ಕೊನೆಪಕ್ಷ ಶಿಕ್ಷಕರಿಗಾದರೂ ಆಸ್ಪತ್ರೆಯಲ್ಲಿ ಸೌಲಭ್ಯ ನೀಡುವ ಕ್ರಮವನ್ನ ತೆಗೆದುಕೊಳ್ಳಬೇಕಿದೆ.
ಶಿಕ್ಷಕಿ ಅನುಸೂಯಾ ಅವರ ಸಾವಿಗೆ ಶಿಕ್ಷಕರ ಸಂಘಗಳು ಸಂತಾಪ ಸೂಚಿಸಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿವೆ.