ಸರಕಾರಿ ಶಾಲೆ ಶಿಕ್ಷಕಿ ಕೋವಿಡ-19ಗೆ ಬಲಿ…!?

ಬೆಂಗಳೂರು: ಕೋವಿಡ್-19 ಎರಡನೇಯ ಅಲೆಯು ಮತ್ತೆ ಹೆಚ್ಚಾಗುತ್ತಿದ್ದು, ಶಿಕ್ಷಕಿಯೋರ್ವರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆಂದು ಹೇಳಲಾಗಿದ್ದು, ಶಿಕ್ಷಕಿಯ ಸಾವಿನ ಸುದ್ಧಿ ಶಿಕ್ಷಕ ವಲಯದಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಸರ್ಕಾರಿ ಪ್ರೌಢಶಾಲೆ ಬ್ಯಾಟರಾಯನಪುರ ಶಾಲೆಯ ಸಹಶಿಕ್ಷಕಿ ಜ್ಯೋತಿ ಎನ್ನುವವರೇ ಕೋವಿಡ್-19 ನಿಂದ ವಿಧಿವಶರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕೊರೋನಾ ದೃಡಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಸರಕಾರಿ ಶಾಲೆಯಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದ್ದ ಶಿಕ್ಷಕಿ ಜ್ಯೋತಿಯವರು, ಕೊರೋನಾ ಸಮಯದಲ್ಲೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದರು. ಸದಾಕಾಲ ಹಸನ್ಮುಖಿಯಾಗಿ ಇರುತ್ತಿದ್ದರು.
ಶಿಕ್ಷಕಿಯ ಸಾವಿನಿಂದ ಶಿಕ್ಷಕ ವಲಯದಲ್ಲಿ ಮತ್ತೇ ಕೊರೋನಾ ಆರ್ಭಟದ ಚರ್ಚೆ ಆರಂಭವಾಗಿದೆ. ಮೃತ ಶಿಕ್ಷಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶಿಕ್ಷಕ ವಲಯ ಸಂತಾಪ ಸೂಚಿಸಿದೆ.