ರಾಜ್ಯದಲ್ಲಿಂದು 16604 ಪಾಸಿಟಿವ್-44473 ಗುಣಮುಖ: 411 ಸಾವು…!

ಬೆಂಗಳೂರು: ರಾಜ್ಯದಲ್ಲಿಂದು ಪಾಸಿಟಿವ್ ಪ್ರಕರಣಗಳು ಮತ್ತಷ್ಟು ಕಡಿಮೆಯಾಗಿದ್ದು, ಚೂರು ಕಡಿಮೆ ಮೂರು ಪಟ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಆದರೆ, ಸಾವುಗಳಲ್ಲಿ ಮಾತ್ರ ಅಂತಹ ಕಡಿಮೆಯಾಗಿಲ್ಲ.

ರಾಜ್ಯದಲ್ಲಿ 16604 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 44473 ಸೋಂಕಿತರು ರಾಜ್ಯದಲ್ಲಿ ಗುಣಮುಖರಾಗಿದ್ದಾರೆ. ಇಡೀ ರಾಜ್ಯದಲ್ಲಿ 411 ಸೋಂಕಿತರು, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ 291 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 792 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ 10 ಸೋಂಕಿತರು ಸಾವಿಗೀಡಾಗಿದ್ದಾರೆ.