ಕೊರೋನಾ ಇಂದಿನ ಪ್ರಕರಣ-ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೇಷ್ಟು…!

Pneumonia coronavirus
ಬೆಂಗಳೂರು: ಆರೋಗ್ಯ ಇಲಾಖೆಯ ಇಂದಿನ ಕೊರೋನಾ ಪ್ರಕರಣಗಳು ಮಾಹಿತಿ ಹೊರಗೆ ಬಂದಿದ್ದು, 38603 ಕೊರೋನಾ ಪಾಸಿಟಿವ್ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, 34635 ಸೋಂಕಿತರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಸೋಂಕಿನಿಂದ 476 ಸಾವಿಗೀಡಾಗಿದ್ದು, ಬೆಂಗಳೂರಲ್ಲಿ 239 ಸೋಂಕಿತರು ಸಾವಿಗೀಡಾಗಿದ್ದಾರೆ. ಹಾಸನದಲ್ಲಿ 29 ಸೋಂಕಿತರು ಸಾವಿಗೀಡಾದರೇ, ಬೆಳಗಾವಿಯಲ್ಲಿ 17 ಸೋಂಕಿತರು ಇನ್ನಿಲ್ಲವಾಗಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ 972 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 681 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 5 ಸೋಂಕಿತರು ಸಾವಿಗೀಡಾಗಿದ್ದಾರೆಂದು ಮಾಹಿತಿ ತಿಳಿಸಿದೆ.