Posts Slider

Karnataka Voice

Latest Kannada News

ಹಿಡ್ಕೋರೋ ಅವ್ನ್- ಎಲ್ಲೇ ಹೋದ್ನೋ ಅಂವಾ… ಕಬ್ಬನ್ಯಾಗ್ ಮುಚ್ಚ್ ಕೊಂಡಾನ್ ನೋಡ್ರೋ…!

Spread the love

ಹಾವೇರಿ: ಕೊರೋನಾ ಪಾಸಿಟಿವ್ ಆಗಿರೋ ವ್ಯಕ್ತಿಯನ್ನ ಹಿಡಿಯಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸವನ್ನೇ ಮಾಡಿರೋ ಘಟನೆ ಹಾವೇರಿ ತಾಲೂಕಿನ ಕಬ್ಬೂರು ತಾಂಡಾದಲ್ಲಿ ನಡೆದಿದೆ.

ಅಪರೂಪದ ವೀಡಿಯೋ ಇಲ್ಲಿದೆ ನೋಡಿ..

ಸುಮಾರು 40 ವಯಸ್ಸಿನ ವ್ಯಕ್ತಿ ನಿನ್ನೆಯಷ್ಟೇ ಕೊರೋನಾ ಟೆಸ್ಟ್ ಮಾಡಿಸಿಕೊಂಡು ಬಂದಿದ್ದ. ಆತನಿಗೆ ಪಾಸಿಟಿವ್ ಆಗಿದೆ ಎಂದು ಗೊತ್ತಾದ ತಕ್ಷಣವೇ ಅಂಬ್ಯುಲೆನ್ಸ್ ಸಮೇತ, ತಾಂಡಾಗೆ ಹೋಗಿದ್ದೆ ತಡ, ಆಸಾಮಿ ಅಂಬ್ಯುಲೆನ್ಸ್ ಶಬ್ದವನ್ನ ಕೇಳಿ ಓಡಿ ಹೋಗಿದ್ದಾನೆ.

ಪಾಸಿಟಿವ್ ವ್ಯಕ್ತಿಯನ್ನ ಕರೆ ತರಲು ಹೋಗಿದ್ದ ಸಿಬ್ಬಂದಿಗಳು ಕಬ್ಬಿನ ಹೊಲದಲ್ಲಿ ಹುಡುಕಾಡುವ ಸ್ಥಿತಿ ಬಂದಿತ್ತು. ಅಷ್ಟೇ ಅಲ್ಲ, ತಾಂಡಾದ ಬಹುತೇಕರು ಕಬ್ಬಿನ ಗದ್ದೆಯಲ್ಲೀ… ಎಲ್ಲಿ ಅದೀ ಬಾರೋ… ಅವರು ಏನ್ ಮಾಡುದಿಲ್ಲ ಬಾರೋ… ಎಂದು ಕೂಗುತ್ತಿದ್ದರೂ ಕೂಡಾ, ಆತ ಮಾತ್ರ ಹೊರಗೆ ಬಾರದೇ ಇರುವುದು ಆರೋಗ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು.


Spread the love

Leave a Reply

Your email address will not be published. Required fields are marked *