ದರೋಡೆಕೋರರಿಗೆ ಕೊರೋನಾ ಪಾಸಿಟಿವ್- ಬೆಚ್ಚಿಬಿದ್ದ ವಿಜಯಪುರ ಪೊಲೀಸ್ ಇಲಾಖೆ- ಇಬ್ಬರು PSI ಮತ್ತು 14 ಪೊಲೀಸ್ ಕ್ವಾರಂಟೈನ್
1 min readವಿಜಯಪುರ: ಮಹಾಮಾರಿ ಕೊರೋನಾ ವೈರಸ್ ಎಲ್ಲರನ್ನು ಬಿಟ್ಟು ಬಿಡದೇ ಕ್ರೂರಿಯಾಗಿ ಕಾಡುತ್ತಿದೆ. ಇನ್ನು ಕಳೆದ ಎರಡು ದಿನಗಳ ಹಿಂದೆ ಬಂಧಿತರಾಗಿದ್ದ ಇಬ್ಬರೂ ಆರೋಪಿಗಳಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ. ವಿಜಯಪುರ ಜಿಲ್ಲೆಯ ಆಲಮೇಲನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ಆಲಮೇಲ ಪೊಲೀಸರು ಬಂಧಿಸಿದರು.
ಆ ಮೂವರು ಆರೋಪಿಗಳಲ್ಲಿಂದು ಇಬ್ಬರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಇನ್ನು ಬಂಧಿಸಿದ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಅಲ್ಲದೇ, ಈ ಪ್ರಕರಣಕ್ಕೆ ಸಂಭಂದಿಸಿದಂತೆ 37 ಪೊಲೀಸರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರು ಪಿಎಸ್ ಐ ಹಾಗೂ 14 ಪೊಲೀಸ್ ಸಿಬ್ಬಂದಿ ಕ್ವಾರಂಟೈನ್ ಮಾಡಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ್ ಅಗರವಾಲ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಆಲಮೇಲನಲ್ಲಿ ದರೋಡೆ ನಡೆಸಿದ್ದ ಮೂವರು ಆರೋಪಿಗಳನ್ನು ಜೂನ್ 17ರಂದು ಬಂಧಿಸಲಾಗಿತ್ತು. ಮೂವರನ್ನು ನಿನ್ನೆ ಕೋವಿಡ್ 19 ಟೆಸ್ಟ್ ಗೆ ಒಳಪಡಿಸಿದ್ದಾಗ ಇಬ್ಬರಲ್ಲಿ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಅದಕ್ಕಾಗಿ ಸಿಂದಗಿ JMFC ನ್ಯಾಯಾಧೀಶ ಆದೇಶದಂತೆ ವಿಜಯಪುರ ಕೇಂದ್ರ ಕಾರಾಗೃಹ ಒಪ್ಪಿಸಿ ಪ್ರತ್ಯೇಕ ಕೋಣೆಯಲ್ಲಿ ವ್ಯವಸ್ಥೆ ಮಾಡಿದ್ದಾರೆ. ಇನ್ನು ಬಂಧಿತ ಆರೋಪಿಗಳಿಂದ 8 ಲಕ್ಷ 35 ಸಾವಿರ ನಗದನ್ನು ಆಲಮೇಲ ಪೊಲೀಸರು ಜಪ್ತಿ ಮಾಡಿದರು.