ರಾಜ್ಯದಲ್ಲಿ ಜನೇವರಿ 31ರಿಂದ ಹೊಸ ರೂಲ್ಸ್: ಏನುಂಟು, ಏನಿಲ್ಲಾ…!
1 min readಬೆಂಗಳೂರು: ಇಡೀ ರಾಜ್ಯಕ್ಕೆ ಸರ್ಕಾರ ಗುಡ್ನ್ಯೂಸ್ ಕೊಟ್ಟಿದ್ದು, ಜನವರಿ 31ರಿಂದಲೇ ಇಡೀ ರಾಜ್ಯಕ್ಕೆ ಫುಲ್ ರಿಲ್ಯಾಕ್ಸ್ ನೀಡಿ, ನೈಟ್ ಕರ್ಫ್ಯೂ, 50-50 ರೂಲ್ಸ್ ಸರ್ಕಾರ ವಾಪಸ್ ಪಡೆದಿದೆ.
ಹೋಟೆಲ್, ಪಬ್, ಬಾರ್ & ರೆಸ್ಟೋರೆಂಟ್ಗಳಲ್ಲಿ 100% ಗೆ ಅನುಮತಿ ನೀಡಲಾಗಿದ್ದರೆ, ಥಿಯೇಟರ್ಗಳಲ್ಲಿ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ 50 ಪರ್ಸೆಂಟ್ ರೂಲ್ಸ್ ಮುಂದುವರಿಕೆಯಾಗಿದೆ.
ಎಲ್ಲಾ ಕಚೇರಿಗಳಿಗೂ ಶೇ.100 ರಷ್ಟು ಕಾರ್ಯ ನಿರ್ವಹಣೆಗೆ ಅನುಮತಿ ನೀಡಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ರದ್ದಾಗಿದ್ದ ಎಲ್ಲಾ ಸೇವೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ರಾಜ್ಯದಲ್ಲಿ ಜಾರಿಯಾಗಿದ್ದ ಕೊರೋನಾ ರೂಲ್ಸ್ ವಾಪಸ್ ಪಡೆಯಲಾಗಿದೆ.