ತಮಿಳುನಾಡಿನ ದಂಪತಿಗಳಿಂದ ಹೊಟೇಲ್‌ನಲ್ಲಿ ತಿಂಡಿ ತಿಂದವರಿಗೆ ಕ್ವಾರಂಟೈನ್: ಆವಾಂತರ ಸೃಷ್ಟಿಸಿದ ಪ್ರಕರಣ
ಮೈಸೂರು: ತಮಿಳುನಾಡು ಕೊರೋನಾ ಸೋಂಕಿತ ದಂಪತಿ ತಂದಿಟ್ಟ ಆವಾಂತರವನ್ನ ಸರಿಪಡಿಸಲು ಎಚ್ಚರಿಕೆ ಹೆಜ್ಜೆಯಿಡುತ್ತಿರುವ ಮೈಸೂರು ಜಿಲ್ಲಾಡಳಿತ.
ಕೊರೋನಾ ಸೋಂಕಿತ ದಂಪತಿ ಊಟ ಮಾಡಿದ್ದ ಹೋಟೆಲ್‌ನಲ್ಲಿ ಊಟ ಮಾಡಿದವರು ಸೆಲ್ಪ್ ಕ್ವಾರಂಟೈನ್ ಆಗಿ ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.
ಕೊರೋನಾ ಸೋಂಕಿತರು ಊಟ ಮಾಡಿದ ದಿನ ಹೊಟೇಲಿಗೆ ಭೇಟಿ ನೀಡಿದ ಎಲ್ಲರೂ ಸೆಲ್ಪ್ ಕ್ವಾರಂಟೈನ್ ಆಗಲು ಜಿಲ್ಲಾಡಳಿತ ಕೇಳಿಕೊಂಡಿದೆ.
ನಗರದ ಇಟ್ಟಿಗೆ ಗೂಡಿನಲ್ಲಿರುವ ಹೊಟೇಲ್ ಕೆಫೆ. ಮೈಸೂರಿನಲ್ಲಿ ತಮಿಳುನಾಡಿನಿಂದ ಸಂಬಂಧಿಕರ ಮನೆಗೆ ಬಂದಿದ್ದ ಕೊರೋನಾ ಸೋಂಕಿತ ದಂಪತಿಗಳು ಜೂನ್ 6ರಂದು ಇದೇ ಹೊಟೇಲಿನಲ್ಲಿ ಊಟ ಮಾಡಿದ್ದರು. ಆ ದಂಪತಿಗಳಿಗೆ ಸೋಂಕು ಇರುವುದು ಧೃಡವಾದ ಹಿನ್ನೆಲೆಯಲ್ಲಿ ಹೊಟೇಲ್ ಕೆಫೆ ಮೈಸೂರನ್ನ ಮುಚ್ಚಲಾಗಿದೆ.
ಜೂನ್ 6 ರಂದು ಊಟ ಮಾಡಿದ್ದ ಎಲ್ಲರೂ 14 ದಿನ ಮನೆಯಲ್ಲೆ ಸೆಲ್ಪ್ ಕ್ವಾರಂಟೈನ್ ಆಗಬೇಕು, ಆ ವ್ಯಕ್ತಿಗಳು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಡಳಿತ ಸೂಚಿಸಿದೆ.
ಬಂದ್ ಆಗಿರುವ ಕೆಫೆ ಮೈಸೂರು ಹೊಟೇಲ್‌ಗೆ ಸ್ಯಾನಿಟೈಸರ್ ಮಾಡಿದ ನಂತರ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ.