ಕೊರೋನಾ ಮುಕ್ತನಾಗಿ ಹೋಗಿದ್ದ ವ್ಯಕ್ತಿ ಸಾವು: ಜಿಲ್ಲಾಧಿಕಾರಿಯಿಂದ ಸ್ಪಷ್ಟ ಆದೇಶ

ಮೈಸೂರು: ಕೊರೋನ ಮುಕ್ತನಾಗಿ ತೆರಳಿದ್ದ P273 ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದು, ಇವರಿಗೆ ಯಾವುದೇ ರೀತಿಯ ಕೊರೋನಾ ಇರಲಿಲ್ಲವೆಂದು ಜಿಲ್ಲಾಧಿಕಾರಿ ಅಭಿರಾಂ.ಜಿ.ಶಂಕರ ಸ್ಪಷ್ಟನೆ ನೀಡಿದ್ದಾರೆ.
ಮೃತಪಟ್ಟ ವ್ಯಕ್ತಿ ಮೈಸೂರಿನ ನಜರಬಾದ್ ನಿವಾಸಿವಾಗಿದ್ದು, ಗುಣಮುಖನಾಗಿ ತೆರಳಿದ ಬಳಿಕ ನಾಲ್ಕು ಬಾರಿ ತಪಾಸಣೆ ಮಾಡಲಾಗಿತ್ತು. ನಾಲ್ಕು ಬಾರಿಯೂ ನೆಗೆಟಿವ್ ರಿಪೋರ್ಟ್ ಬಂದಿತ್ತು. ಇದು ಕೊರೋನ ಸೋಂಕಿನಿಂದ ಸಂಭವಿಸಿದ ಸಾವಲ್ಲ. ದಯಮಾಡಿ ಯಾರೂ ತಪ್ಪು ಸಂದೇಶ ಹರಡಬೇಡಿ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಕೇಳಿಕೊಂಡಿದ್ದಾರೆ.