ಶಾಸಕ ಪ್ರಸಾದ ಅಬ್ಬಯ್ಯಗೆ ಕೊರೋನಾ ಪಾಸಿಟಿವ್: ಕಿಮ್ಸ್‌ನಲ್ಲಿ ಚಿಕಿತ್ಸೆ
ಹುಬ್ಬಳ್ಳಿ: ನಿರಂತರವಾಗಿ ಜನರೊಂದಿಗೆ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಸ್ವತಃ ಶಾಸಕ ಪ್ರಸಾದ ಅಬ್ಬಯ್ಯ ಬರೆದುಕೊಂಡಿದ್ದಾರೆ.
ಶಾಸಕ ಪ್ರಸಾದ ಅಬ್ಬಯ್ಯ ಫೇಸ್‌ಬುಕ್‌ಲ್ಲಿ ಬರೆದುಕೊಂಡಿದ್ದು ಹೀಗಿದೆ ನೋಡಿ:
ಆತ್ಮೀಯರೆ, ಬಂಧು ಮಿತ್ರರೇ…
ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಸತತವಾಗಿ ತೊಡಗಿದ್ದರಿಂದ ಮತ್ತು ಕೊರೋನಾ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರಿಂದ ಸ್ವಯಂಪ್ರೇರಿತನಾಗಿ ಗುರುವಾರದಂದು ಹುಬ್ಬಳ್ಳಿ ಕಿಮ್ಸ್ ನಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು, ಇಂದು ಶುಕ್ರವಾರ “ಕೊರೋನಾ ಪಾಸಿಟಿವ್” ಎಂದು ಫಲಿತಾಂಶ ಬಂದಿದೆ.
ವೈದ್ಯರ ಸಲಹೆ ಮೇರೆಗೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದೇನೆ.
“ರೋಗನಿರೋಧಕ ಶಕ್ತಿ”ಯು ನನ್ನಲ್ಲಿ ಪ್ರಬಲವಾಗಿದ್ದು, ಮತ್ತು ನಿಮ್ಮ ಆಶೀರ್ವಾದ ನನ್ನ ಮೇಲೆ ಸದಾ ಇರುವುದರಿಂದ ಶೀಘ್ರ ಗುಣಮುಖನಾಗಿ ಮತ್ತೆ ಕ್ಷೇತ್ರದ ಹಾಗೂ ಜನರ ಸೇವೆಗೆ ಹಿಂದಿರುಗುತ್ತೇನೆ. ಈಗಾಗಲೇ ನನ್ನನ್ನು ಭೇಟಿಯಾದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ವ್ಯಕ್ತಿಗಳ ವಿವರವನ್ನು ಸರಕಾರಿ ಅಧಿಕಾರಿಗಳಿಗೆ ನೀಡಿದ್ದೇನೆ. ಮುಂಜಾಗ್ರತಾ ಕ್ರಮವಾಗಿ ನನ್ನ ಕುಟುಂಬದ ಎಲ್ಲಾ ಸದಸ್ಯರಿಗೂ ಇಂದು ಕೊರೋನಾ ಪರೀಕ್ಷೆ ಮಾಡಿಸಿದ್ದೇನೆ. ಅದಾಗ್ಯೂ ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೊರೋನಾ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸುತ್ತೇನೆ..????
ನಿಮ್ಮ ಶುಭಹಾರೈಕೆ, ಆಶೀರ್ವಾದ ಇರಲಿ.
ಇಂತಿ ನಿಮ್ಮ ಪ್ರೀತಿಯ
– ಪ್ರಸಾದ ಅಬ್ಬಯ್ಯ, ಶಾಸಕರು.