ಕ್ವಾರಂಟೈನ್‌ದಲ್ಲಿದ್ದ ಗರ್ಭೀಣಿಗೆ ವಾಹನದಲ್ಲೇ ಹೆರಿಗೆ: ಬದುಕದ ಗಂಡು ಮಗು
ಕಲಬುರಗಿ: ಕ್ವಾರಂಟೈನ್ ಕೇಂದ್ರದಲ್ಲಿನ ಗರ್ಭೀಣಿ ಮಹಿಳೆಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹೆರಿಗೆಯಾಗಿದ್ದು, ದುರದೃಷ್ಟವಶಾತ್ ಕಣ್ತೆರೆಯುವ ಮುನ್ನವೇ ಮಗು ಕಣ್ಮುಚ್ಚಿದ ಘಟನೆ ಸಂಭವಿಸಿದೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ 35 ವರ್ಷದ ಮಹಿಳೆಯನ್ನ ಕಲಬುರಗಿಗೆ ಆಂಬ್ಯುಲೆನ್ಸ್‌ನಲ್ಲಿ ಕರೆತರಲಾಗ್ತಿತ್ತು. ಈ ವೇಳೆ ಸೇಡಂ ಪಟ್ಟಣದಿಂದ ಕಲಬುರಗಿಗೆ ಬರುವ ಮಾರ್ಗ ಮಧ್ಯೆ ಮಹಿಳೆ ಆಂಬುಲೆನ್ಸ್‌ನಲ್ಲೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಮಗುವನ್ನ ಉಳಿಸಿಕೊಳ್ಳಲು ಆಗಿಲ್ಲ. ಹೀಗಾಗಿ, ತಕ್ಷಣವೇ ಮೃತ ಮಗುವಿನ ಜೊತೆಗೆ ಮಹಿಳೆಯನ್ನು ಕಲಬುರಗಿ ಜಿಮ್ಸ್‌ಗೆ ರವಾನೆ ಮಾಡಲಾಗಿದೆ.
ಜೂನ್ 11ರಂದು ಪುಣೆಯಿಂದ ಹಿಂದಿರುಗಿದ್ದ ಗರ್ಭೀಣಿ ಮಹಿಳೆಯನ್ನ ಸೇಡಂ ಪಟ್ಟಣದ ಲಾಡ್ಜ್‌ವೊಂದರ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು.
