ಮಾನಸಿಕ ಅಸ್ವಸ್ಥನನ್ನೇ ಕೊರೋನಾ ರೋಗಿಯಂದುಕೊಂಡು ಸಾರ್ವಜನಿಕರು ದಿಕ್ಕಾಪಾಲು

ಕಲಬುರಗಿ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೋರ್ವನನ್ನ ಕೊರೋನಾ ರೋಗಿಯಂದುಕೊಂಡು ದಿಕ್ಕಾಪಾಲಾಗಿ ಜನ ಓಡಿದ ಘಟನೆ ರಾಮಮಂದಿರದ ಬಳಿ ಸಂಭವಿಸಿದೆ.
ತಡರಾತ್ರಿ ಕೆಲಕಾಲ ಹುಚ್ಚುಚ್ಚರಂತೆ ಮಾಡುತ್ತಿದ್ದ ವ್ಯಕ್ತಿ, ಕಳ್ಳರ ರೀತಿಯಲ್ಲಿ ಹೋಗುತ್ತಿದ್ದ. ಅಷ್ಟೇ ಅಲ್ಲ, ಜೋರಾಗಿ ಕೆಮ್ಮತೊಡಗಿದ್ದ. ಇದರಿಂದ ಗಾಬರಿಯಾದ ಜನ ದಿಕ್ಕಾಪಾಲಾಗಿ ಓಡಿದೆ. ತದನಂತರ ಕೆಲವರು ಅಂಬ್ಯುಲೆನ್ಸ್ ಕರೆಸಿ ಆತನನ್ನ ಕಳಿಸಿದ್ದಾರೆ.