ಸರಕಾರದ ಸಂಕಷ್ಟಕ್ಕೆ ಮಾದಪ್ಪನ ಸಹಾಯ ಹಸ್ತ: ಸಿಎಂಗೆ 50 ಲಕ್ಷದ ಚೆಕ್

ಚಾಮರಾಜನಗರ: ಶ್ರೀ ಮಲೆ ಮಹದೇಶ್ವರ ಪ್ರಾಧಿಕಾರದಿಂದ ಸಿಎಂ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಲಾಯಿತು. ಸಿಎಂಗೆ ದೇಣಿಗೆ ಚೆಕ್ ಹಸ್ತಾಂತರ ಮಾಡಿದ ಸಚಿವ ಎಸ್. ಸುರೇಶ್ ಕುಮಾರ್, ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ, ಕಾರ್ಯದರ್ಶಿ ಜಯವಿಭವಸ್ವಾಮಿ.
ಮಲೈ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ 50 ಲಕ್ಷ ರೂಪಾಯಿಗಳನ್ನ ನೀಡಲಾಗಿದೆ. ಪ್ರಾಧಿಕಾರದ ಸಿಬ್ಬಂಧಿಗಳು ಮತ್ತು ನೌಕರರು ಸ್ವಯಂ ಪ್ರೇರಣೆಯಿಂದ ನೀಡಿದ 3 ದಿನಗಳ ವೇತನ 10 ಲಕ್ಷ ರೂಪಾಯಿಯಾಗಿದೆ.
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಿವೃತ್ತ ಅಧಿಕಾರಿಗಳು ಮತ್ತು ನೌಕರರ ಒಂದು ದಿನದ ಪಿಂಚಣಿ ಮೊತ್ತ 2,15,158 ರೂಪಾಯಿಯಾಗಿದೆ. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧಿಕಾರಿಗಳು ಮತ್ತು ನೌಕರರ ಒಂದು ದಿನದ ವೇತನ 1,92,816 ರೂಪಾಯಿಯಾಗಿದೆ. ಕೋವಿಡ್ ಪರಿಹಾರ ನಿಧಿಗೆ ಒಟ್ಟು 64,07,974 ರೂ.ಗಳ ದೇಣಿಗೆ ಚೆಕ್ ಹಸ್ತಾಂತರ ಮಾಡಿದ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ನೀಡಿದಂತಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಮಾಹಿತಿ ನೀಡಿದ್ದಾರೆ.